ನಂದಿನಿ ಮೈಸೂರು
ದಿನೇ ದಿನೇ ರಾತ್ರಿಯಲ್ಲದೇ ಹಗಲಲ್ಲೂ ಸಹ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ.ಪ್ರತಿದಿನ ಪೋಲೀಸರು ತಮ್ಮ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗಿದರೂ ಸಹ ಕಳ್ಳತನಗಳ ಪ್ರಕರಣ ಹೆಚ್ಚಾಗುತ್ತಿದೆ.ಹೌದು ಶ್ರೀರಾಂಪುರ ಎಸ್‍ಬಿಎಂ ಕಾಲೋನಿಯ ಮನೆಯೊಂದರ ಮುಂಭಾಗ ಬೀಗ ಹಾಕಿ ನಿಲ್ಲಿಸಿದ್ದ ಹೀರೋ ಹೋಂಡಾ ಸಿಡಿ ಡಾನ್ ಬೈಕ್ ಅನ್ನು ಕದ್ದಿದ್ದ ಕಳ್ಳರನ್ನು ಕುವೆಂಪು ನಗರ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಖದೀಮನಿಂದ ಎರಡು ಲಕ್ಷ ಮೌಲ್ಯದ ನಾಲ್ಕು ಬೈಕ್ ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ :
ಕುವೆಂಪುನಗರ ಠಾಣೆಯಲ್ಲಿ ಮೊ.ನಂ: 64/2023 ಕಲಂ ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡ ಪೋಲಿಸರು ದಿನಾಂಕ: 03/08/2023 ರಂದು ಬೆಳಗ್ಗೆ 8.00 ಗಂಟೆ ಸಮಯದಲ್ಲ ರಾಮಕೃಷ್ಣನಗರದ ಹೆಚ್ ಬ್ಲಾಕ್‍ನಲ್ಲಿರುವ ಪಾರ್ಕ್ ಮುಂಬಾಗದಲ್ಲಿ ಕಳ್ಳತನ ಮಾಡಿದ್ದ ಹೀರೊ ಹೋಂಡಾ ಸಿಡಿ ಡಾನ್ ಬೈಕ್‍ನಲ್ಲಿ ಬಂದು ಬೈಕ್ ಕಳವು ಮಾಡಲು ಸುತ್ತಾಡುತ್ತಿದ್ದಾಗ ಅಪರಾಧ ವಿಭಾಗದ ಸಿಬ್ಬಂದಿಯವರು ವಶಕ್ಕೆ ಪಡೆದು ಠಾಣಿಗೆ ಕರೆತಂದು ವಿಚಾರಣೆ ಮಾಡಿದಾಗ, 2,00,000ರೂ ಮೌಲ್ಯದ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಕುವೆಂಪುನಗರ ಠಾಣೆ ಹಾಗೂ ವಿದ್ಯಾರಣ್ಯಪುರಂ ಠಾಣೆಯ ತಲಾ ಒಂದು ಪ್ರಕರಣಗಳು ಹಾಗೂ ಆಲನಹಳ್ಳಿ ಠಾಣೆಯ ಎರಡು ಪ್ರಕರಣಗಳು ಪತ್ತೆಯಾಗಿರುತ್ತವೆ.
ಬೈಕ್ ಕದಿಯುತ್ತಿದ್ದದ್ದೂ ಯಾಕೆ ಗೊತ್ತಾ?
ಆರೋಪಿಗಳು ಕಳ್ಳತನ ಮಾಡಿದ ಬೈಕ್‍ಗಳನ್ನು ದುಡ್ಡಿಗಾಗಿ ಮಾರಾಟ ಮಾಡುತ್ತಿರಲಿಲ್ಲ ಬದಲಿಗೆ ವೀಲಿಂಗ್ ಮಾಡಲು ಬಳಸುತ್ತಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.
ಸದರಿ ಆರೋಪಿತರ ಪತ್ತೆ ಕಾರ್ಯದಲ್ಲಿ ಮಾನ್ಯ ಉಪ ಪೆÇಲೀಸ್ ಆಯುಕ್ತರು, ಕೇಂದ್ರಸ್ಥಾನ ಸಂಚಾರ ಮತ್ತು ಅಪರಾಧ ರವರಾದ ಶ್ರೀಮತಿ ಜಾಹ್ನವಿ ಎಸ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಕೃಷ್ಣರಾಜ ವಿಭಾಗದ ಸಹಾಯಕ ಪೆÇಲೀಸ್ ಆಯಕ್ತರಾದ ಶ್ರೀ ಗಂಗಾಧರಸ್ವಾಮಿ ರವರ ಉಸ್ತುವಾರಿಯಲ್ಲ, ಕುವೆಂಪುನಗರ ಪೆÇಲೀಸ್ ಠಾಣೆಯ ಪಿ.ಐ ರವರಾದ ಶ್ರೀ ಅರುಣ್ ಎಲ್, ಪಿಎಸ್‍ಐ ರವರಾದ ಕು.ರಾಧ ಎಂ ಹಾಗೂ ಶ್ರೀ ಗೋಪಾಲ್, ಎಸ್ ಪಿ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಆನಂದ, ಮಂಜುನಾಥ, ಪುಟ್ಟಪ್ಪ, ಹಜರತ್, ಸುರೇಶ್, ನಾಗೇಶ್ ಮತ್ತು ಇತರೆ ಕುವೆಂಪುನಗರ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರುಗಳು ಆರೋಪಿಗಳು ಮತ್ತು ಮಾಲು ಪತ್ತೆ ಮಾಡಲು ಶ್ರಮಿಸಿದ್ದು, ಈ ಪತ್ತೆ ಕಾರ್ಯಕ್ಕೆ ಮಾನ್ಯ ಪೆÇಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ, ಐಪಿಎಸ್ ರವರು ಹಾಗೂ ಮಾನ್ಯ ಉಪ ಪೆÇಲೀಸ್ ಆಯುಕ್ತರು. ಕಾನೂನು ಸುವ್ಯವಸ್ಥೆ ವಿಭಾಗದ ಶ್ರೀ ಮುತ್ತುರಾಜ್ ಎಂ, ಐಪಿಎಸ್ ರವರು ಪ್ರಶಂಶಿಸಿರುತ್ತಾರೆ.