ನಂದಿನಿ ಮನುಪ್ರಸಾದ್ ನಾಯಕ್.
ನಾವೆಲ್ಲ ಮಧ್ಯರಾತ್ರಿ ಯಿಂದ ತಾಯಿ ದರ್ಶನಕ್ಕೆ ನಿಂತಿದ್ದೀವಿ.ಈಗ ಬಂದವರಿಗೆ,ವಿಐಪಿ,ವಿವಿಐಪಿ,ಅವರ ಕಡೆಯವರು ಇವರ ಕಡೆಯವರು ಅಂತ ನೇರವಾಗಿ ಬಿಡ್ತೀದ್ದೀರಾ?
ಮೆಟ್ಟಿಲು ಹತ್ತಿ ಬಂದ
ಭಕ್ತರಿಗೆ ಚಾಮುಂಡಿ ತಾಯಿ ದರ್ಶನ ಮಾಡಿಕೊಡ್ತೀಲ್ಲ,ನೂಕು ನುಗ್ಗಲು ಆಗ್ತೀದೆ.ಸರಿಯಾದ ವ್ಯವಸ್ಥೆ ಇಲ್ಲ ಅಂತ ಮಹಿಳಾ ಭಕ್ತರು ಕಣ್ಣೀರು ಹಾಕಿದ್ದು ಉಂಟು, ಕಳೆದ ವಾರ ಸಾಲು ಸಾಲು ಆರೋಪ ಮಾಡಿದ್ದ ಭಕ್ತರ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಸಮಾಧಾನವಾಗಿ ನಿಧಾನವಾಗಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ.
ಹೌದು ಸಾಂಸ್ಕೃತಿಕ ನಗರೀ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದ ಪ್ರಯುಕ್ತ ಮಾವಿನ ಕಾಯಿಗಳಿಂದ ದೇವಸ್ಥಾನ ಸುತ್ತಾ ಅಲಂಕಾರ ಮಾಡಲಾಗಿತ್ತು.ಮುಂಜಾನೆಯೇ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷಿತ್ ರವರ ನೇತೃತ್ವದಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪಂಚಾಮೃತ ಅಭಿಷೇಕ, ಅರ್ಚನೆ.ಮಹಾಮಂಗಳಾರತಿ ಮಾಡಲಾಗಿತ್ತು.
ದೇವಸ್ಥಾನದ ಗರ್ಭ ಗುಡಿಯಲ್ಲಿ
ವಿವಿಧ ಪುಷ್ಟಗಳ ಮಧ್ಯೆ ಶ್ರೀ ಚಾಮುಂಡೇಶ್ವರಿ ತಾಯಿ ಕಂಗೊಳಿಸುತ್ತಿದ್ದಳು.ಚಾಮುಂಡಿ ತಾಯಿ ನೋಡಲು ಆಶಾಢ ಶುಕ್ರವಾರ ದಂದು ದೇಶ,ವಿದೇಶ,ವಿವಿಧ ರಾಜ್ಯ,ಎಲ್ಲಾ ಜಿಲ್ಲೆಗಳಿಂದ ಕೋಟಿ ಕೋಟಿ ಭಕ್ತರು ಆಗಮಿಸುತ್ತಾರೆ.ಬೆಟ್ಟಕ್ಕೆ ಖಾಸಗೀ ವಾಹನಗಳನ್ನು ನಿಷೇಧಿಸಲಾಗಿದೆ.ಮೈಸೂರಿನ ಲಲಿತ ಮಹಲ್ ಮೈದಾನದಿಂದ ಭಕ್ತರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.ಈ ಭಾರಿ ಭಜ್ತರ ಅನುಕೂಲಕ್ಕಾಗಿ 300 ಹಾಗೂ 2 ಸಾವಿರ ಟಿಕೇಟ್ ನೀಡುವ ಮೂಲಕ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿದೆ.ವಿಶೇಷ ದರ್ಶನ ವ್ಯವಸ್ಥೆಯಲ್ಲಿ ಹೋದರೇ ಕೇವಲ 10 ನಿಮಿಷದಲ್ಲೇ ಚಾಮುಂಡೇಶ್ವರಿ ತಾಯಿ ದರ್ಶನ ಪಡೆಯಬಹುದಾಗಿದೆ.ಕಳೆದ ವಾರ ನೂಕು ನುಗ್ಗಲಿನಲ್ಲೇ ತಾಯಿ ದರ್ಶನ ಮಾಡಿದ್ದ ಭಕ್ತರು ಈ ಭಾರಿ ಸರಾಗವಾಗಿ ತಾಯಿಯನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.ಕಳೆದ ವಾರ ಪ್ರಸಾದದ ವ್ಯವಸ್ಥೆ ಇಲ್ಲದೇ ಭಕ್ತರು ಬೇಸರ ವ್ಯಕ್ತಪಡಿಸಿದ್ರೂ.ಆ ಮಾತುಗಳನ್ನೂ ಗಮನಿಸಿ ಒಂದು ಕಡೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಇಂದು ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕ ಜಿಟಿ ಹರೀಶ್ ಗೌಡ,ನಟ ಡಾಲಿ ಧನಂಜಯ್,ನಟ ದರ್ಶನ್ ಸೇರಿದಂತೆ ನಟ ನಟಿಯರು ಕಲಾವಿದರು ಕುಟುಂಬ ಸಮೇತ ಬಂದು ತಾಯಿ ದರ್ಶನ ಪಡೆದರು.
ಮೆಟ್ಟಿಲು ಹತ್ತಿ ಬಂದವರಿಗೆ ಪ್ರತ್ಯೇಕ ಧ್ವಾರ,2 ಸಾವಿರ ನೀಡಿದವರಿಗೆ ನೇರ ದರ್ಶನ ವ್ಯವಸ್ಥೆ,300 ರೂ ಟಿಕೇಟ್ ಪಡೆದವರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.ಮೆಟ್ಟಿಲು ಹತ್ತಿ ಬರುವ ಭಕ್ತರು ಬೆ.5 ರಿಂದ ಸಂಜೆ 6ವರಗೆ ಬರಬಹುದಾಗಿದೆ ಎಂದು ಸೂಚನಾ ಫಲಕ ಹಾಕಿದ್ದಾರೆ.ಯಾವುದೇ ಅಹಿತಕರ ಘಟನೆ ಆಗದಂತೆ ಪೋಲಿಸ್ ಇಲಾಖೆ ಕಟ್ಟೆಚ್ಚರ ವಹಿಸಿಕೊಂಡಿದೆ.ಕಳೆದ ವಾರ ಸ್ವಲ್ಪವೂ ವ್ಯವಸ್ಥೆ ಚನ್ನಾಗಿಲ್ಲ ಅಂತ ಮಾತಾಡಿದವರು ಇಂದು ವ್ಯವಸ್ಥೆ ಚನ್ನಾಗಿ ಮಾಡಿದ್ದಾರೆ ಅಂತಿದ್ದಾರೆ.ಕಳೆದ ವಾರದ ಎಲ್ಲಾ ವ್ಯವಸ್ಥೆ ಈ ವಾರದ ಎಲ್ಲಾ ವ್ಯವಸ್ಥೆಗೂ ಜಿಲ್ಲಾಡಳಿತ ವೇ ಕಾರಣ.ಅದೇನೇ ಆಗಲಿ ಜಿಲ್ಲಾಡಳಿತ, ದೇವಸ್ಥಾನ ಆಡಳಿತ ಮಂಡಳಿ ಆರೋಪ ಸರಿಪಡಿಸಿಕೊಂಡು ಭಕ್ತರಿಗೆ ದರ್ಶನಕ್ಕೆ ಸುಸಜ್ಜಿತ ವ್ಯವಸ್ಥೆ ಮಾಡಿಕೊಂಡಿದೆ.