ನಂದಿನಿ ಮೈಸೂರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮೈಸೂರು ಶಾಖೆಯಿಂದ 2024 ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳಾದ ಡಾ.ಕೆವಿ.ರಾಜೇಂದ್ರ ರವರು ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿ ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರಿದರು.
ಇದೇ ಸಂದರ್ಭದಲ್ಲಿ ಸಂಘದ ಮೈಸೂರು ಜಿಲ್ಲಾಧ್ಯಕ್ಷರಾದ ಗೋವಿಂದರಾಜು,ಪ್ರಧಾನ ಕಾರ್ಯದರ್ಶಿ ರೇವಣ್ಣ ,ಉಪಾಧ್ಯಕ್ಷರಾದ ಎಸ್.ಜಿ. ರಮೇಶ್,ಜಿಲ್ಲಾ ಖಜಾಂಚಿ ಸಿ.ಎಸ್. ರಮೇಶ್ ಕುಮಾರ್,ರಾಜ್ಯ ಪರಿಷತ್ ಸದಸ್ಯರಾದ ಎಂ ಎಲ್
ವಿಶ್ವನಾಥ್,ಗೋವಿಂದೇಗೌಡರು,ರಂಗಸ್ವಾಮಿ ಸೇರಿದಂತೆ ಸಂಘಟನಾ ಕಾರ್ಯದರ್ಶಿಗಳು,ಸಾಂಸ್ಕೃತಿಕ ಕಾರ್ಯದರ್ಶಿಗಳು,ಕ್ರೀಡಾ ಕಾರ್ಯದರ್ಶಿಗಳು,ಕಾರ್ಯಕಾರಿ ಸಮಿತಿ ಸದಸ್ಯರು,ನಾಮ ನಿರ್ದೇಶನ ಸದಸ್ಯರು ಭಾಗಿಯಾಗಿದ್ದರು.