ಮೈಸೂರು:30 ಮೇ 2022
ನಂದಿನಿ ಮೈಸೂರು
೯೦ ವರ್ಷ ಮೀರಿದವರಿಗೆ ಯಾವುದೇ ಶಸ್ತ್ರ ಚಿಕಿತ್ಸೆ ನಡೆಸುವುದು ಕ್ಲಿಷ್ಟಕರ. ಹೀಗಿರುವಾಗ ೧೦೨ ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಎಡ ಸೊಂಟದ ಮೂಳೆ ಸರಿಪಡಿಸುವ ಶಸ್ತ್ರಚಿಕಿತ್ಸೆಯನ್ನು ತಮ್ಮ ಅಪೊಲೊ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಆಸ್ಪತ್ರೆ ಉಪಾಧ್ಯಕ್ಷರಾದ ಎನ್.ಜಿ. ಭರತೀಶರೆಡ್ಡಿ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರ ನಿವಾಸಿಯೊಬ್ಬರು ಮನೆಯಲ್ಲಿ ಕಾಲು ಜಾರಿ ಬಿದ್ದ ನಂತರ ಅವರ ಸೊಂಟದ ಎಡಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಂಡಿತ್ತು. ಬಳಿಕ ಪರೀಕ್ಷಿಸಿದಾಗ ಎಡಸೋಂಟದ ಮೂಳೆ ಮುರಿತ ಗಮನಕ್ಕೆ ಬಂದಿತು. ಹೀಗಾಗಿ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿತ್ತು.
ಆದರೆ ಅವರ ವಯಸ್ಸು ೧೦೨ ವರ್ಷವಾಗಿರುವ ಕಾರಣ ಶಸ್ತ್ರಚಿಕಿತ್ಸೆ ಸುಲಭದ್ದು ಮತ್ತು ಸುರಕ್ಷಿತವಾಗಿದ್ದಾಗಿರಲಿಲ್ಲ. ಆದರೂ ಅನಿವಾರ್ಯವಾದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಾಗಿದ್ದ ಭಾಗಕ್ಕಷ್ಟೇ ಅರಿವಳಿಕೆ ನೀಡಿ, ಕನಿಷ್ಠ ಛೇದನ ಮಾಡುವ ಮೂಲಕ ಸುಮಾರು ೨೦ ನಿಮಿಷಗಳಲ್ಲಿ ಪೂರ್ಣಗೊಳಿಸಲಾಯಿತು. ಈಗ ಅವರು ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಬಾಲಕೃಷ್ಣಗೌಡ, ಡಾ. ಆದರ್ಶ್ ಹಾಜರಿದ್ದರು.