ಮೈಸೂರು:1 ಜುಲೈ 2022
ನಂದಿನಿ ಮೈಸೂರು
ಆಷಾಢ ಮಾಸದ ಶುಕ್ರವಾರ ಬಂತೆಂದರೆ ಸಾಕು ಸಾಂಸ್ಕೃತಿಕ ನಗರಿಯಲ್ಲಿ ಅದೇನೋ ಸಂಭ್ರಮ ಸಡಗರ, ಶುಕ್ರವಾರದಂದು ತಾಯಿಯ ದರ್ಶನ ಪಡೆದು ಪುಳಕಿತರಾದವರೆಷ್ಟೋ. ಆದರೆ ಕಳೆದೆರಡು ವರ್ಷಗಳಿಂದ ಭಕ್ತರು ಇಂತಹ ಸೌಭಾಗ್ಯದಿಂದ ವಂಚಿತರಾಗಿದ್ದರು. ಅದಕ್ಕೆ ಕಾರಣ ಮಹಾಮಾರಿ ಕೊರೋನಾ. ಆದರೆ ಈ ಬಾರಿ ಕೊರೋನಾ ನಿಯಂತ್ರಣದಲ್ಲಿರುವ ಕಾರಣ ಇಂದು ಮುಂಜಾನೆಯಿಂದಲೇ ಬೆಟ್ಟಕ್ಕೆ ಬಂದ ಸಹಸ್ರಾರು ಭಕ್ತರು ಲಕ್ಷ್ಮೀ ಅವತಾರದಲ್ಲಿ ಕಂಗೊಳಿಸುತ್ತಿದ್ದ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯನ್ನು ಕಣ್ತುಂಬಿಸಿಕೊಂಡರು.
ಈ ಬಾರಿ ಜಿಲ್ಲಾಡಳಿತ ಭಕ್ತರಿಗರ ದರ್ಶನಕ್ಕೆ ಅನುಕೂಲವಾಗುವಂತೆ ವ್ಯವಸ್ಥೆಯನ್ನು ಕಲ್ಪಿಸಿದ್ದು ಹಿಂದಿನ ಸಂಪ್ರದಾಯದಂತೆ
ಮೊದಲ ಆಷಾಢ ಶುಕ್ರವಾರದ ಪೂಜೆ ನೆರವೇರಿತು.ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸಿದರು. ಬೆಟ್ಟದ ಸುತ್ತ ಪೋಲಿಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.
ಮೊದಲ ಆಷಾಢ ಶುಕ್ರವಾರದ ಅಲಂಕಾರದ ವಿಶೇಷತೆ ಕುರಿತು ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷೀತರು ವಿವರಿಸಿದ್ರೇ ಇತ್ತ ಶಾಸಕ ಎಲ್ .ನಾಗೇಂದ್ರ ಬೆಟ್ಟದಲ್ಲಿ ಮಾಡಲಾಗಿದ್ದ ವ್ಯವಸ್ಥೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು