ಸೆ.10ರಿಂದ 17ರವರೆಗೆ ನಡೆಯುವ ಯುವ ಸಂಭ್ರಮಕ್ಕೆ ನಟ ಯುವ ರಾಜಕುಮಾ‌ರ್ ಚಾಲನೆ

ನಂದಿನಿ ಮನುಪ್ರಸಾದ್ ನಾಯಕ್

ಸೆ.10ರಿಂದ 17ರವರೆಗೆ ನಡೆಯುವ ಯುವ ಸಂಭ್ರಮಕ್ಕೆ ನಟ ಯುವ ರಾಜಕುಮಾ‌ರ್ ಚಾಲನೆ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಮುನ್ನುಡಿ ಬರೆಯುವ, ಯುವಕ-ಯುವತಿಯರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಯುವ ಸಂಭ್ರಮಕ್ಕೆ ನಟ ಯುವ ರಾಜಕುಮಾರ್ ಹಾಗೂ ಮೈಸೂರಿನ ಅಮೃತ ಅಯ್ಯಂಗಾರ್ ಚಾಲನೆ ನೀಡಿದರು.

ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಹಬ್ಬವಾದ ಯುವ ಸಂಭ್ರಮ ಸೆ.10ರಿಂದ 17ರವರೆಗೆ ನಡೆಯ ಲಿದೆ. 500 ಕಾಲೇಜಿನ 20 ಸಾವಿರ ವಿದ್ಯಾರ್ಥಿಗಳು ವೈವಿಧ್ಯಮಯ ನೃತ್ಯ ಅಭಿನಯದ ಮೂಲಕ ರಂಜಿಸಲಿದ್ದಾರೆ. ಪ್ರತಿ ವರ್ಷದಂತೆ ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಕಳೆಗಟ್ಟಲಿದೆ. ರಾಜ್ಯದ ಜಾನಪದ ನೃತ್ಯಗಳು, ಜಿಲ್ಲಾ ಕೇಂದ್ರಿತ ಪ್ರಸಿದ್ದ ನೃತ್ಯ ಪ್ರಕಾರಗಳು, ಕನ್ನಡ ಸಿನಿಮಾ ಆಧಾರಿತ ಆಧುನಿಕ ನೃತ್ಯಗಳು, ಸಾಹಿತ್ಯ, ದೇಶಭಕ್ತಿ, ಮಹಿಳಾ ಸಬಲೀಕರಣ, ಪರಿಸರ-ಅರಣ್ಯ, ಆಡಳಿತ, ಸಾಮಾಜಿಕ ನ್ಯಾಯ, ವಿಜ್ಞಾನ-ತಂತ್ರಜ್ಞಾನ, ಇತಿಹಾಸ-ಪುರಾಣ, ಅಂಗವಿಕಲರ ಯಶೋಗಾಥೆಗಳು, ಶಿಕ್ಷಣ, ಕ್ರೀಡೆ, ಜನಕೇಂದ್ರಿತ, ಆರೋಗ್ಯ ಹೀಗೆ ನಿರ್ದಿಷ್ಟ ಥೀಮ್ ಆಧಾರಿತ ನೃತ್ಯ ರೂಪಕಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪ ಡಿಸಲಿದ್ದಾರೆ. ಪ್ರತಿದಿನ ಸಂಜೆ 4ರಿಂದ ರಾತ್ರಿ 10.30ರವರೆಗೆ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನವಿದ್ದು, ಆಯ್ದ ತಂಡಗಳಿಗೆ ನವರಾತ್ರಿ ಸಂದರ್ಭದಲ್ಲಿ ನಡೆಯುವ ಯುವ ದಸರಾ ವೇದಿಕೆಯಲ್ಲೂ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಪ್ರತಿಭೆ ಅನಾವರಣಕ್ಕೆ ಸಾಕ್ಷಿ: ದಸರಾ ಹಿನ್ನೆಲೆ ಯಲ್ಲಿ ಹತ್ತು ದಿನಗಳು ನಡೆಯುವ ಯುವ ಸಂಭ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಹಲವು ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಪ್ರಮುಖವಾಗಿ ಮೈಸೂರು, ಮಂಡ್ಯ, ಹಾಸನ, ಮಂಗಳೂರು, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳ ತಂಡ ವಿವಿಧ ವಿಷಯಗಳಿಂದ ಕೂಡಿದ ಹಾಡು, ನೃತ್ಯ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನದ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ

Leave a Reply

Your email address will not be published. Required fields are marked *