ನಂದಿನಿ ಮನುಪ್ರಸಾದ್ ನಾಯಕ್
ಅಪಾರ ಭಕ್ತರ ಸಮ್ಮುಖದಲ್ಲಿ ಅರ್ಕ ಫೌಂಡೇಶನ್ ಸಂಸ್ಥಾಪಕರಾದ ಯೋಗಿ ಶ್ರೀನಿವಾಸ್ ಅರ್ಕ ಅವರ ಹುಟ್ಟು ಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮೈಸೂರು
ಬೋಗಾದಿ-ಗದ್ದಿಗೆ ಮುಖ್ಯರಸ್ತೆ ಕಣಿಯನಹುಂಡಿ ಗೇಟ್, ಮಾದಹಳ್ಳಿ ಪಕ್ಕದಲ್ಲಿ ಇರುವ ಅರ್ಕ ಫೌಂಡೇಶನ್ ನಲ್ಲಿ ಬೆಳಗ್ಗೆ ಪುರುಷಸೂಕ್ತ ಹೋಮ,ಹವನ ನಡೆಸಲಾಯಿತು. ಯೋಗಿ ಶ್ರೀನಿವಾಸ್ ಅರ್ಕ ರವರನ್ನ ನಾಧಸ್ವರ, ವಾದ್ಯಗೋಷ್ಠಿ ಮೂಲಕ ಗಣಪತಿ ದೇವಾಲಯಕ್ಕೆ ಸ್ವಾಗತಿಸಲಾಯಿತು.ನಂತರ ಪೂರ್ಣಾಹುತಿಯಲ್ಲಿ ಭಾಗಿಯಾಗಿ ನಾಡಿನ ಜನತೆಗೆ ಒಳಿತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಔಷಧೀಯ ಮೌಲ್ಯವುಳ್ಳ ಹಾಗೂ ನಮ್ಮ ಸಂಸ್ಕೃತಿಯಲ್ಲಿ ಪವಿತ್ರವೆಂದು ಪರಿಗಣಿಸಲಾದ ಸುಮಾರು 250 ವಿಶೇಷ ಸಸ್ಯಗಳನ್ನು ನೆಡಲಾಯಿತು.
ಅರ್ಕಧಾಮದ ಒಳಗೆ ಹೊಸದಾಗಿ ನಿರ್ಮಾಣವಾಗಿರುವ ಸಭಾಂಗಣವನ್ನು ಜೆ ಎಸ್ ಎಸ್ ದತ್ತಿ ಸಂಸ್ಥೆ ಆಧ್ಯಾತ್ಮಿಕ ಗುರುಗಳಾದ ಡಾ ಶ್ರೀ ಸೋಮಶೇಖರ ಸ್ವಾಮೀಜಿರವರು ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ತದನಂತರ
ಇಂಗ್ಲೆಂಡ್ನ ಹೌಸ್ ಆಫ್ ಕಾಮನ್ಸ್ ನಲ್ಲಿ ಬಿಡುಗಡೆಯಾದ ಶ್ರೀನಿವಾಸ ಅರ್ಕ ಅವರ “ಬಿಕಮಿಂಗ್ ಇನ್ನೈರ್ಡ್ ಇಂಗ್ಲಿಷ್ ಪುಸ್ತಕವನ್ನು ಆಧಾರಿಸಿದ ‘ಪ್ರಜ್ಞಾ ಪದರಗಳು” ಕನ್ನಡ ಪುಸ್ತಕವನ್ನು ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್ ರವರು ಲೋಕಾರ್ಪಣೆ ಮಾಡಿದರು.
ಹಿರಿಯ ವಿದ್ವಾಂಸರಾದ ಡಾ.ಕೆ.ಅನಂತರಾಮು ಉಪನ್ಯಾಸ ಮಾಡಿದರು.ನಿವೃತ್ತ ಪ್ರಾಂಶುಪಾಲರಾದ ಡಾ.ಪಿ.ಸತ್ಯನಾರಾಯಣ ಭಟ್ ರವರು ಪುಸ್ತಕ ಪರಿಚಯ ಮಾಡಿದರು.ಇದೇ ಸಂದರ್ಭದಲ್ಲಿ ಲೋಕನಾಥ್, ಹಿರಿಯ ಸಮಾಜಸೇವಕ ಡಾ.ಕೆ.ರಘುರಾಮ್ ವಾಜಪೇಯಿ, ಹಿಮಾಲಯ ಪ್ರತಿಷ್ಥಾನ ಸಂಸ್ಥಾಪಕ ಎನ್.ಅನಂತ,ನಾರಾಯಣ್ ಸೇರಿದಂತೆ ಭಕ್ತರು,ಅರ್ಕಧಾಮದ ಸಿಬ್ಬಂದಿಗಳು ಭಾಗಿಯಾಗಿದ್ದರು.