ನಂದಿನಿ ಮೈಸೂರು
“ವಿಕಲಚೇತನೆಯಾದ ನಾನು 2008ಕ್ಕೆ ಮುನ್ನ ಸರಕಾರಿ ಕೆಲಸಕ್ಕಾಗಿ ಕಂಡ ಕಂಡವರಿಗೆ ಅರ್ಜಿ ಕೊಟ್ಟೆ. ಅನೇಕ ನಾಯಕರ ಮನೆ ಬಾಗಿಲಿಗೆ ಅಲೆದೆ. ಯಾರೂ ನನ್ನ ಕಷ್ಟ ಮತ್ತು ಕಣ್ಣೀರಿಗೆ ಮಿಡಿಯಲಿಲ್ಲ. ಕೊನೆಗೆ ಕುಮಾರಣ್ಣ ಅವರನ್ನು ಒಮ್ಮೆ ಭೇಟಿಯಾದೆ. ಕೂಡಲೇ ಅವರು ನನ್ನ ಕಣ್ಣೀರಿಗೆ ಮಿಡಿದರು.”
ಚಿಂಚೋಳಿಯಲ್ಲಿ ನಡೆದ ಪಂಚರತ್ನ ರಥಯಾತ್ರೆಯ ಸಭೆಯ ವೇದಿಕೆಗೆ ಬಂದು “ನಾನು ಮಾತನಾಡಲೇಬೇಕು” ಎಂದು ಹಠ ಹಿಡಿದು ಕಲ್ಪನಾ ಮಾತನಾಡಿದ್ದಾರೆ.
“2008ರಲ್ಲಿ ಕುಮಾರಣ್ಣ ಅವರು ನನಗೆ ಜೆಸ್ಕಾಂನಲ್ಲಿ ಉದ್ಯೋಗ ಕೊಡಿಸಿದರು. ಅಂದಿನಿಂದ ನನ್ನ ಬದುಕು ಬದಲಾಯಿತು.” ಎಂದರು
ಸಹಾಯ ಬಹಳ ಚಿಕ್ಕದು, ಪರಿಣಾಮ ದೊಡ್ಡದು. ಸಮಾಜ ಈ ದಿಕ್ಕಿನಲ್ಲಿ ಬದಲಾಗಬೇಕಿದೆ. ಅಶಕ್ತರು, ವಿಕಲಚೇತನರಿಗೆ ಅನುಕಂಪ ತೋರಿಸುವುದು ಮಾನವೀಯ ಗುಣ. ಅದಕ್ಕೂ ಮೀರಿ ಅವರ ಬದುಕಿಗೆ ದಾರಿ ಮಾಡಿಕೊಡುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಸಮಾಜ, ಸರಕಾರ ಬದ್ಧತೆಯಿಂದ ಆಲೋಚನೆ ಮಾಡಬೇಕು.
ನನ್ನಿಂದ ಯಾರಿಗಾದರೂ ಸಹಾಯ ಆಗಿದೆ ಎಂದರೆ ಅದು ನನ್ನಿಂದಲೇ ಆಗಿದೆ ಎಂದಲ್ಲ.. ಅದು ಭಗವಂತನ ಕೃಪೆ ಮತ್ತು ಜನತೆಯ ಆಶೀರ್ವಾದದಿಂದ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.