ಮೈಸೂರು:4 ಆಗಸ್ಟ್ 2022
ನಂದಿನಿ ಮೈಸೂರು
ವಿಕ್ರಾಂತ್ ರೋಣ ಸಿನಿಮಾ ಉತ್ತಮ ಪ್ರದರ್ಶನ ಕಾಣುತಿದ್ದು ನಟ ಕಿಚ್ಚ ಸುದೀಪ್ ಚಾಮುಂಡಿ ತಾಯಿಯ ಆಶಿರ್ವಾದ ಪಡೆದಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದಂತೆ ಸುದೀಪ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು, ಸುದೀಪ್ ಭಾವಚಿತ್ರ ಹಿಡಿದು ಜೈಕಾರ ಕೂಗಿದ್ದಾರೆ. ಸುದೀಪ್ ಕಾರಿನಿಂದ ಇಳಿಯುತ್ತಿದ್ದಂತೆ ಅಭಿಮಾನಿಗಳು ಹೂ ಮಳೆ ಸುರಿಸಿದ್ದು, ಕಿಚ್ಚನನ್ನ ನೋಡಿ ಸಂಭ್ರಮ ಪಟ್ಟಿದ್ದಾರೆ.
ದೇವಾಲಯ ಪ್ರವೇಶಿಸಿದ ಸುದೀಪ್ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ದೊಡ್ಡ ಸಕ್ಸಸ್ ಕಂಡಿದೆ. ಒಂದು ವಾರದಲ್ಲೇ ಕೋಟಿ-ಕೋಟಿ ಕಲೆಕ್ಷನ್ ಮಾಡಿದೆ .