ಬಸವರಾಜು / ನಂದಿನಿ ಮೈಸೂರು
ತಾಂಡವಪುರ: ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಅಳಗಂಚಿ ಗ್ರಾಮದ ಸುಮಾರು 10ಕ್ಕೂ ಹೆಚ್ಚು ಬಿ ಎಸ್ ಪಿ ಪಕ್ಷ ತೊರೆದು ವರುಣ ಕ್ಷೇತ್ರದ ಶಾಸಕ ಡಾಕ್ಟರ್ ಯತೀಂದ್ರ ಸಿದ್ರಾಮಯ್ಯನವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಗ್ರಾಮದ ವಕೀಲರು ಆದ ಮಹದೇವಸ್ವಾಮಿಯವರು ಮಾತನಾಡಿ ಬಿಜೆಪಿ ಪಕ್ಷದಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ದೊಡ್ಡ ಪೆಟ್ಟು ಬೀಳುತ್ತಿದ್ದು ಸಂವಿಧಾನ ರಕ್ಷಣೆಗಾಗಿ ಉಳಿವಿಗಾಗಿ ನಾವು ಬಿಎಸ್ಪಿ ಪಕ್ಷವನ್ನು ತೊರೆದು ಕ್ಷೇತ್ರದ ಶಾಸಕರಾದ ಡಾಕ್ಟರ್ ಯತಿಂದ್ರ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ಕ್ಷೇತ್ರದ ಶಾಸಕರಾದ ಡಾಕ್ಟರ್ ಯತೀಂದ್ರ ಸಿದ್ರಾಮಯ್ಯನವರು ಮಾತನಾಡಿ ಸಂವಿಧಾನದ ರಕ್ಷಣೆ ಹಾಗೂ ಉಳಿವಿಗಾಗಿ ಬಿ ಎಸ್ ಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮುಖಂಡರುಗಳಿಗೆ ತುಂಬು ಹೃದಯದ ಸ್ವಾಗತ ಕೋರುತ್ತೇನೆ ಮುಖಂಡರುಗಳ ಸೇರ್ಪಡೆಯಿಂದ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಸೇವೆ ಬಹಳ ಮುಖ್ಯವಾಗಿದ್ದು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ದಕ್ಕೆ ಬರುವಂತ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಾಗಬೇಕಾಗಿದೆ ಆ ನಿಟ್ಟಿನಲ್ಲಿ ಇವತ್ತು ವರುಣ ಕ್ಷೇತ್ರದ ಅಗಿದ್ದ ಮುಖಂಡರು ಹಾಗೂ ದಲಿತ ಸಂಘರ್ಷ ಸಮಿತಿಯವರು ಸೇರಿದಂತೆ ವಿವಿಧ ಪಕ್ಷದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಮತ್ತಷ್ಟು ಸತ್ಯ ಬಂದಿದ್ದು ತಾವೆಲ್ಲರೂ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಶಾಸಕರು ಮನವಿ ಮಾಡಿದರು ಇದೆ ವೇಳೆ ಬುದ್ಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಹೊಂದಿಸಿದರು ಈ ಕಾರ್ಯಕ್ರಮದಲ್ಲಿ ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ ಮುಖಂಡರಾದ ಚಿನ್ನಸ್ವಾಮಿ ಮಲಿಪುರ ಪ್ರಕಾಶ್ ಕಿರುಗುಂದ ಶಿವ ನಾಗ ಗ್ರಾಮದ ಮುಖಂಡರಾದ ದೊಡ್ಡ ದಾಸೆಯ ಮರಿಸ್ವಾಮಿ ಶಿವ ಸ್ವಾಮಿ ಶ್ರೀನಿವಾಸ ಕೂಶಣ್ಣ ಮೂಡಳ್ಳಿ ಮಾದೇವಸ್ವಾಮಿಚಿನ್ನಂಬಳ್ಳಿ ಆರ್ ಮಹದೇವ್ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಮಂಜುಳಾ ಮಂಜುನಾಥ್ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಲಿಂಗಣ್ಣ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರುಗಳು ಕಾರ್ಯಕರ್ತರು ಅಭಿಮಾನಿಗಳು .
ಈ ಸಂದರ್ಭದಲ್ಲಿ ಹಾಜರಿದ್ದು ಇದೆ ವೇಳೆ ಪಕ್ಷಕ್ಕೆ ಸೇರ್ಪಡೆಗೊಂಡ ಎ ಎಸ್ ಪ್ರಕಾಶ್ ಮಹದೇವಸ್ವಾಮಿ ಪಿ ಮಂಜೇಶ್ ಕುಮಾರ್ ಎಂ ಶಿವಣ್ಣ ಯೋಗಾನಂದ ಎಸ್ ರಾಜೇಶ್ ಜಿಎಲ್ ಬಸವಣ್ಣ ಎಂ ಮಹದೇವ ಪ್ರಸಾದ್ ಪಿ ಮಹದೇವಸ್ವಾಮಿ ಎಂ ಪ್ರಸಾದ್ ಮಹದೇವಸ್ವಾಮಿ ಎನ್ ದರ್ಶನ್ ಎಸ್ ಮಹದೇವಸ್ವಾಮಿ ಅವರನ್ನು ಶಾಸಕರು ಸನ್ಮಾನಿಸಿ ಅಭಿನಂದಿಸಿ ಗೌರವಿಸಿದರು.