ನಂದಿನಿ ಮೈಸೂರು
ವಸ್ತುಪ್ರದರ್ಶನ ಆವರಣದಲ್ಲಿ ಅ.8ಕ್ಕೆ ದಸರಾ ಉರ್ದು ಕವಿಗೋಷ್ಠಿ ನಡೆಯಲಿದೆ ಎಂದು ಅಧ್ಯಕ್ಷ ಅಯೂಬ್ ಖಾನ್ ಮಾಹಿತಿ ನೀಡಿದರು.
ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಉರ್ದು `ಕವಿಗೋಷ್ಠಿ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು ಈ ಹಿಂದೆ ಉರ್ದು ಕವಿಗೋಷ್ಠಿ ಖಾಸಗೀ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿತ್ತು ಇದೀಗಾ ಈ ಬಾರಿ
ವಸ್ತುಪ್ರದರ್ಶನ ಪ್ರಾಧಿಕಾರದ ಪಿ. ಕಾಳಿಂಗ ರಾವ್ ಸಭಾಂಗಣದಲ್ಲಿ ಅ.8ರಂದು ರಾತ್ರಿ 9 ಗಂಟೆಗೆ ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆಯಲ್ಲಿ ದಸರಾ ಉರ್ದು ಕವಿಗೋಷ್ಠಿ ‘ಉರ್ದು ಮುಷಾಯಿರ’ ಏರ್ಪಡಿಸಲಾಗಿದೆ.ಗೋಷ್ಠಿಯಲ್ಲಿ ಖ್ಯಾತ ಕವಿಗಳಾದ ಸಂಪತ್ ಸರಳ್, ಉತ್ತರ ಪ್ರದೇಶದ ಶಾಂಭವಿ ಸಿಂಗ್, ಅಬುಜರ್ ನಹೀದ್, ನಜೀಂ ಫಾರುಕ್ ನಿಜಾದ್ ಸೇರಿದಂತೆ 15 ಕವಿಗಳು ಭಾವಹಿಸಲಿದ್ದಾರೆ.ಸಾಮಾನ್ಯ ಉರ್ದು ಕವಿಗೋಷ್ಠಿ ರಾತ್ರಿಯೇ ನಡೆಯುವುದರಿಂದ ಒಮ್ಮೊಮ್ಮೆ ಬೆಳಗಿನ ಜಾವದವರೆಗೂ ಅಂದರೆ ಅಹೋರಾತ್ರಿ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಉರ್ದು ಕವಿಗೋಷ್ಠಿ
ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿ ಯಾಗಿ ಉರ್ದು ಕವಿಗಳಾದ ಇಮ್ರಾನ್ ಪ್ರತಾಪ್ ಘಡಿ ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಜಬೀನ್ ನಜಮ್ ಗಜಾಲ್ ವಹಿಸಲಿದ್ದಾರೆ. ಸುಮಾರು 4 ಸಾವಿರ ಆಸನ ವ್ಯವಸ್ಥೆ ಮಾಡಲಾಗುತ್ತದೆ.ಅ.8 ರಂದು ರಾತ್ರಿ 9 ಗಂಟೆ ನಂತರ ಉರ್ದು ಕವಿಗೋಷ್ಠಿಗೆ ಆಗಮಿಸುವವರಿಗೆ ಉಚಿತ ಪ್ರವೇಶ ಇರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಕ್ರಂ, ಮೋಹಿದ್ದಿನ್ ಪಾಷ, ಸುಹೇಲ್ ಬೇಗ್ ಸೇರಿದಂತೆ ಇತರರು ಹಾಜರಿದ್ದರು