‘ದಕ್ಷಿಣ ಪ್ರಯಾಗ’ ಎಂದೇ ಪ್ರಸಿದ್ಧಿ ಪಡೆದಿರುವ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ 13ನೇ ಕುಂಭಮೇಳಕ್ಕೆ ಚಾಲನೆ

ನಂದಿನಿ ಮೈಸೂರು

*13ನೇ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ*

ಮೈಸೂರು: ದಕ್ಷಿಣ ಪ್ರಯಾಗ’ ಎಂದೇ ಪ್ರಸಿದ್ಧಿ ಪಡೆದಿರುವ ಮೈಸೂರು ಜಿಲ್ಲೆಯ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ 13ನೇ ಕುಂಭಮೇಳಕ್ಕೆ ಇಂದು ವಿಧ್ಯುಕ್ತ ಚಾಲನೆ ದೊರೆಯಿತು.

ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದ್ದು
ಧ್ವಜಾರೋಹಣದ ಮೂಲಕ ಕುಂಭಮೇಳಕ್ಕೆ ಧಾರ್ಮಿಕ ಮುಖಂಡರು ಚಾಲನೆ ನೀಡಿದರು.

ತ್ರಿವೇಣಿ ಸಂಗಮದ ನದಿ ಮದ್ಯ ಭಾಗದಲ್ಲಿರುವ ನಡುಹೊಳೆ ಬಸಪ್ಪನ ಮುಂಭಾಗ ಪೂಜೆ ಸಲ್ಲಿಕೆಯಾಯಿತು.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥೇಶ್ವರ ಸ್ವಾಮೀಜಿ, ಕಾಗಿನೆಲೆ ಕನಕಗುರು ಮಠದ ನಿರಂಜನಾನಂದ ಪುರಿ ಸ್ವಾಮೀಜಿ, ಕೈಲಾಸನಂದ ಮಠದ ಜಯೇಂದ್ರ ಪುರಿ ಗಳಿಂದ ವಿವಿಧ ಮಂತ್ರಘೋಷಗಳೊಂದಿಗೆ ಪೂಜಾ ಕೈಂಕರ್ಯ ನೆರವೇರಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಪ ವಿಭಾಗಾಧಿಕಾರಿ ರಕ್ಷಿತ್ ಸೇರಿ ಹಲವರ ಉಪಸ್ಥಿತಿದರು.

Leave a Reply

Your email address will not be published. Required fields are marked *