ಎಚ್.ಡಿ.ಕೋಟೆ:10 ಫೆಬ್ರವರಿ 2022
ನಂದಿನಿ ಮೈಸೂರು
ಎಚ್ ಡಿ ಕೋಟೆಯಲ್ಲಿ ಹುಲಿ ದಾಳಿಗೆ ಆರು ಕುರಿಗಳ ಸಾವನ್ನಪ್ಪಿದರೇ , ಐದು ಕುರಿಗಳ ಸ್ಥಿತಿ ಚಿಂತಾಜನಕವಾಗಿದೆ.
ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಮೊತ್ತ ಗ್ರಾಮದ ಗಿರಿಜನ ಹಾಡಿಯ ಚಿನ್ನಯ್ಯ, ಕುಂಟಯ್ಯ, ಮತ್ತು ನಿಂಗಯ್ಯ ಎಂಬುವವರಿಗೆ ಸೇರಿದ ಕುರಿಗಳನ್ನ ಹುಲಿ ತಡರಾತ್ರಿ ಬಲಿ ಪಡೆದಿದೆ.
ಕಳೆದ ತಿಂಗಳು ಅಂತರಸಂತೆ ಹಾಗೂ ಮೊತ್ತ ಗ್ರಾಮದ ಸುತ್ತ ಮುತ್ತ ವ್ಯಾಘ್ರನ ದರ್ಶನವಾಗಿದ್ದು ಆಗಲೂ ಕೂಡಾ ಒಂದು ಕುರಿಯನ್ನು ಬಲಿ ಪಡೆದಿತ್ತು, ಅರಣ್ಯ ಇಲಾಖೆ ಹುಲಿ ಸೆರೆಗೆ ಬೋನು ಇರಿಸಲಾಗಿತ್ತು, ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಇದೀಗ ಮತ್ತೆ ತಿಂಗಳಬಳಿಕ ಪ್ರತ್ಯಕ್ಷವಾಗಿರುವ ವ್ಯಾಘ್ರ , ಕುರಿಯನ್ನೇ ನಂಬಿ ಜೀವನ ಮಾಡುತ್ತಿದ್ದ ಬಡ ಹಾಡಿ ಜನರ ಬದುಕಿಗೆ ಬರೆ ಎಳೆದಿದೆ, ಈಗಾಗಲೇ ಆರು ಕುರಿಗಳು ಸತ್ತಿದ್ದು, ಐದು ಕುರಿಗಳ ಸ್ಥಿತಿ ಚಿಂತಾಜನಕವಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿವೆ, ಕುರಿಗಳನ್ನು ಕಳೆದುಕೊಂಡು ಕಂಗಾಲಾಗಿರುವ ಹಾಡಿ ವಾಸಿಗಳು ತಮ್ಮ ನೋವು ತೋಡಿಕೊಂಡಿದ್ದು ಸರ್ಕಾರದ ಭರವಸೆಯ ನಿರೀಕ್ಷೆಯಲ್ಲಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರದಿಂದ ಬರುವ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.