ಮೈಸೂರು:11 ಸೆಪ್ಟೆಂಬರ್ 2022
ನಂದಿನಿ ಮೈಸೂರು
ಸಾಂಸ್ಕೃತಿಕ ನಗರೀ ಮೈಸೂರಿನಲ್ಲಿ
ನೂತನವಾಗಿ ಪ್ರವಾಸಿಗರಿಗೆ ಅನುಕೂಲವಾಗಲೆಂದು
ದಿ ಮೈಸೂರು ಗ್ರ್ಯಾಂಡ್ ಎಂಬ ವಸತಿ ಗೃಹ ಆರಂಭವಾಗಿದೆ.
ಮೈಸೂರು ಜಗನ್ ಮೋಹನ ಅರಮನೆ ಸಮೀಪ ಲಕ್ಷ್ಮೀವಿಲಾಸ ರಸ್ತೆಯಲ್ಲಿ ಆರಂಭವಾಗಿರುವ ರೆಸಿಡೆನ್ಸಿಯನ್ನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಕೆ.ಆರ್.ನಗರ ಕ್ಷೇತ್ರದ ಸಾರಾ ಮಹೇಶ್ ಮಾತನಾಡಿ ನನ್ನ ಶೇರುದಾರ ಹಾಗೂ ಸ್ನೇಹಿತರೂ ಆದ ನಾರಾಯಣ ಮೂರ್ತಿ ಹಾಗೂ ಅವರ ಕುಟುಂಬ ಹೊಸದಾಗಿ ದಿ ಮೈಸೂರು ಗ್ರ್ಯಾಂಡ್ ಎಂಬ ವಸತಿ ಗೃಹ ಆರಂಭಿಸಿದ್ದಾರೆ.ಮೈಸೂರು ಪ್ರವಾಸಿ ಕೇಂದ್ರವಾಗಿದೆ.ದಸರಾ ಸಮೀಪಿಸುತ್ತಿದೆ. ಸಾವಿರಾರು ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ.ಅವರಿಗೆ ಈ ವಸತಿ ಗೃಹ ಅನುಕೂಲವಾಗಲಿದೆ ಎಂದು ಶುಭ ಹಾರೈಸಿದರು.
ಶ್ರೀ ಟಾರ್ಪಲಿನ್ಸ್ ಮಾಲೀಕರಾದ ನಾರಾಯಣ ಮೂರ್ತಿ ಮಾತನಾಡಿ ಇದೇ ಮೊದಲ ಬಾರಿಗೆ 19 ಕೊಠಡಿ ಉಳ್ಳ ವಸತಿ ಗೃಹ ನಿರ್ಮಿಸಿದ್ದೇವೆ.ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ.
24 ಗಂಟೆ ಬಿಸಿನೀರು ವ್ಯವಸ್ಥೆ ಇದೆ.ವಸತಿ ಗೃಹ ಗ್ರಾಹಕರಿಗೆ ಹೊಸ ಅನುಭವ ನೀಡಲಿದೆ.
ಆನ್ ಲೈನ್ ಮೂಲಕ ಬುಕ್ ಮಾಡಬಹುದಾಗಿದೆ. ಮೈಸೂರು
ನಗರದ ಮದ್ಯೆ ಭಾಗ ಇದೆ.ಪ್ರವಾಸಿಗರು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಸಮಾರಂಭದಲ್ಲಿ ಶಾಸಕರು,ನಗರ ಪಾಲಿಕೆ ಸದಸ್ಯರು,ಸ್ನೇಹಿತರು,ಕುಟುಂಬದ ಸದಸ್ಯರು, ದಿ ಮೈಸೂರು ಗ್ರ್ಯಾಂಡ್ ಮಾಲೀಕರಾದ
ಶ್ರೀರಾಮ್, ತೇಜಸ್,ಶೈಲಾ
ನವ್ಯ,ಶ್ರಾವ್ಯ ಸೇರಿದಂತೆ ಇತರರು ಭಾಗಿಯಾಗಿದ್ದರು.