ಹೆಚ್ ಡಿ ಕೋಟೆ:10 ಫೆಬ್ರವರಿ 2022
ರಕ್ಷಣಾ ಸೇವಾ ಟ್ರಸ್ಟ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ತಟ್ಟೆ ಲೋಟ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಹೆಚ್ ಡಿ ಕೋಟೆ ತಾಲೂಕಿನ ಕಟ್ಟೆ ಮನುಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಡ ವಿದ್ಯಾರ್ಥಿಗಳಿಗೆ ತಟ್ಟೆ ಲೋಟ ವಿತರಣೆ ಮಾಡಲಾಯಿತು.
ಸುಮಾರು 35 ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ತಟ್ಟೆ ಲೋಟ ವಿತರಿಸಲಾಯಿತು.
ಬಳಿಕ ಎ.ಎಸ್.ಐ ದೊರೆಸ್ವಾಮಿ ಅವರು ಮಾತನಾಡಿದರು.ನಿಮ್ಮ ಗುರಿಯನ್ನು ತಲುಪುವವರೆಗೂ ಆದಷ್ಟು ಮೊಬೈಲ್ ಗಳಿಂದ ದೂರವಿರಿ ಹಾಗೂ ಉತ್ತಮವಾದ ವಿಚಾರಗಳ ಕಡೆ ಗಮನಹರಿಸಬೇಕು.ಉತ್ತಮವಾದ ಶಿಕ್ಷಣವನ್ನು ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು.ಭವಿಷ್ಯದಲ್ಲಿ ಉತ್ತಮವಾದ ಜೀವನ ರೂಪಿಸಿಕೊಳ್ಳಬೇಕಾದರೆ ಇಂದೇ ದೊಡ್ಡ ದೊಡ್ಡ ಗುರಿಯನ್ನು ಹೊಂದಿಕೊಳ್ಳಬೇಕು.ಮಹಾನ್ ಸಾಧಕರ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾದ ಮಾತುಗಳನ್ನು ಹೇಳಿದರು.
ಇದೇವೇಳೆ ರಕ್ಷಣಾ ಸೇವಾ ಟ್ರಸ್ಟ್ ನ ಅಧ್ಯಕ್ಷೆ ಚಂದ್ರಿಕಾ ದೊರೆಸ್ವಾಮಿ,
ಸೃಷ್ಠಿ ಆರ್ಟ್ಸ್ ನಾ ಕುಮಾರ್, ವನಸಿರಿ ಶಂಕರಣ್ಣ, ಕಾಳಪ್ಪ, ಪ್ರದೀಪ್ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಂಜಯ್ ಕೆ ಬೆಳತೂರು ಜೊತೆ ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು