ಮೈಸೂರಿನ ಐತಿಹಾಸಿಕ ವಸ್ತು ಪ್ರದರ್ಶನ ಮೈದಾನ ಸಮೀಪ ವಿಶಿಷ್ಟ ವಿನ್ಯಾಸದ ಟಾಟಾ ಟೀ ಚಕ್ರ ಗೋಲ್ಡ್ ಸ್ಟಾಲ್

ನಂದಿನಿ ಮನುಪ್ರಸಾದ್ ನಾಯಕ್

ಮೈಸೂರು ದಸರಾ ಸಂಭ್ರಮದಲ್ಲಿ ಟಾಟಾ ಟೀ ಚಕ್ರ ಗೋಲ್ಡ್

~ ಮೈಸೂರಿನ ಐತಿಹಾಸಿಕ ವಸ್ತು ಪ್ರದರ್ಶನ ಮೈದಾನ ಸಮೀಪ ವಿಶಿಷ್ಟ ವಿನ್ಯಾಸದ ಟಾಟಾ ಟೀ ಚಕ್ರ ಗೋಲ್ಡ್ ಸ್ಟಾಲ್

~ ಗ್ರಾಹಕರ ಜೊತೆ ನೇರ ಸಂವಹನ, ಹಬ್ಬದ ವಿಶೇಷ ಪ್ಯಾಕ್‌ ಬಿಡುಗಡೆ ಮತ್ತು ಡಿಜಿಟಲ್ ವೈಶಿಷ್ಟ್ಯದ ಮೂಲಕ ಸಂಭ್ರಮಾಚರಣೆ

ಮೈಸೂರು: ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಮತ್ತು ವಿಶ್ವಾಸಾರ್ಹ ಚಹಾ ಬ್ರಾಂಡ್‌ ಗಳಲ್ಲಿ ಒಂದಾಗಿರುವ ಟಾಟಾ ಟೀ ಚಕ್ರ ಗೋಲ್ಡ್ ಸಂಸ್ಥೆಯು ಇದೀಗ ಕರ್ನಾಟಕದ ದಸರಾ ಉತ್ಸವದ ಸಂಭ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು, ಇದೇ ಮೊದಲ ಬಾರಿಗೆ ನೇರವಾಗಿ ಗ್ರಾಹಕರ ಜೊತೆ ಹಬ್ಬ ಆಚರಿಸುತ್ತಿದೆ. ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಬ್ರಾಂಡ್ ಗ್ರಾಹಕರ ಜೊತೆ ಒಡನಾಟ, ಡಿಜಿಟಲ್ ವೈಶಿಷ್ಟ್ಯತೆ ಮತ್ತು ಹಬ್ಬದ ವಿಶೇಷ ಪ್ಯಾಕ್‌ ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಒಂದು ವಿಶಿಷ್ಟ ಅನುಭವವನ್ನು ಒದಗಿಸುತ್ತಿದೆ.
ಈ ವರ್ಷ, ಟಾಟಾ ಟೀ ಚಕ್ರ ಗೋಲ್ಡ್ ಬ್ರಾಂಡ್ ದಸರಾವನ್ನು ಮೈಸೂರಿನ ನಗರದ ಹೃದಯಭಾಗದಲ್ಲಿರುವ ಪ್ರಸಿದ್ಧ ಎಕ್ಸಿಬಿಷನ್ ಗ್ರೌಂಡ್‌ ನ ಬಳಿ 20 ಅಡಿ ಎತ್ತರದ ವಿಶಿಷ್ಟ ಇನ್ ಸ್ಟಾಲೇಷನ್ ಅನ್ನು ಸ್ಥಾಪಿಸುವ ಮೂಲಕ ಆಚರಿಸುತ್ತಿದೆ. ಬ್ರಾಂಡ್ ನ ಈ ಸೌಲಭ್ಯದಲ್ಲಿ ಜನರನ್ನು ಸುಲಭವಾಗಿ ಆಕರ್ಷಿಸುವ ಒಂದು ಡ್ರಮ್ ಅನ್ನು ಇಡಲಾಗಿದೆ. ಆ ಡ್ರಮ್ ಅನ್ನು ಬಾರಿಸಿದಾಗ ಆ ಘಟಕದಲ್ಲಿರುವ ಎಲ್ಲಾ ಎಲ್‌ಇಡಿ ದೀಪಗಳು ಬೆಳಗಿ ವಿಶಿಷ್ಟವಾದ ವಾತಾವರಣವನ್ನು ಸೃಷ್ಟಿಸಲಿದೆ. ಜೊತೆಗೆ ಒಂದು ಆಕರ್ಷಕವಾದ, ಸೊಗಸಾದ ಟಾಟಾ ಟೀ ಚಕ್ರ ಗೋಲ್ಡ್ ಕಪ್ ಕೂಡ ಬೆಳಗುತ್ತದೆ. ಆ ಕಪ್ ಬೆಳಗಿದಾಗ ಭಾಗವಹಿಸಿದವರಿಗೆ ಉಚಿತ ಚಹಾ ಸೇವನೆಗೆ ಒಂದು ಕೂಪನ್ ನೀಡಲಾಗುತ್ತದೆ. ಈ ಮೂಲಕ ಟಾಟಾ ಟೀ ಗೋಲ್ಡ್ ಗ್ರಾಹಕರಿಗೆ ಒಂದು ಹುಮ್ಮಸ್ಸಿನ, ಸ್ಮರಣೀಯ ವಾತಾವರಣ ಉಂಟು ಮಾಡುತ್ತದೆ ಮತ್ತು ಟೀ ಉಡುಗೊರೆ ನೀಡುತ್ತಿದೆ. ಟಾಟಾ ಟೀ ಚಕ್ರ ಗೋಲ್ಡ್‌ ನ ಸ್ಟ್ರಾಂಗ್ ಚಹಾದಂತೆ, ಬ್ರಾಂಡ್‌ ನ ದಸರಾ ಸಂಭ್ರಮ ಆಚರಣೆಯು ಜನರನ್ನು ಒಟ್ಟಿಗೆ ಸೇರಿಸಿ ಸಂತೋಷದ ಮತ್ತು ಒಗ್ಗಟ್ಟಿನ ಕ್ಷಣಗಳ ಸಂಭ್ರಮ ಸೃಷ್ಟಿಸುತ್ತದೆ.
ಇದರ ಜೊತೆಗೆ ಈ ಸಂದರ್ಭದಲ್ಲಿ ಟಾಟಾ ಟೀ ಚಕ್ರ ಗೋಲ್ಡ್ ಸಂಸ್ಥೆಯು ಕರ್ನಾಟಕದ ದಸರಾ ಸಂಪ್ರದಾಯಗಳಿಂದ ಪ್ರೇರಣೆ ಪಡೆದು ಸೊಗಸಾದ ವಿನ್ಯಾಸಗಳಿಂದ ಅಲಂಕರಿಸಲ್ಪಟ್ಟ ವಿಶೇಷ ಹಬ್ಬದ ಟೀ ಪ್ಯಾಕ್‌ ಗಳನ್ನು ಕೂಡ ಬಿಡುಗಡೆ ಮಾಡಿದೆ. ಪ್ರತಿ ಪ್ಯಾಕ್‌ ನಲ್ಲಿ www.tatateachakragold.com ಗೆ ಲಿಂಕ್ ಮಾಡುವ ಕ್ಯೂಆರ್ ಕೋಡ್ ಇದ್ದು, ಗ್ರಾಹಕರು ತಮ್ಮ ಪ್ರೀತಿಪಾತ್ರರಿಗೆ ವೈಯಕ್ತಿಕ ದಸರಾ ಶುಭಾಶಯಗಳನ್ನು ರಚಿಸಿ ಹಂಚಿಕೊಳ್ಳಬಹುದು. ಈ ಮೂಲಕ ಬ್ರಾಂಡ್ ಅಂಗಡಿಯಿಂದ ಹಿಡಿದು ಮನೆವರೆಗೆ ಮತ್ತು ಡಿಜಿಟಲ್ ಜಗತ್ತಿನವರೆಗೆ ಸಂತೋಷವನ್ನು ಪಸರಿಸುತ್ತಿದೆ.
ಈ ಕಾರ್ಯಕ್ರಮದ ಕುರಿತು ಮಾತನಾಡಿದ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್‌ ನ ಪ್ಯಾಕೇಜ್ಡ್ ಬಿವರೇಜಸ್ ವಿಭಾಗದ ಭಾರತ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷರಾದ ಶ್ರೀ ಪುನೀತ್ ದಾಸ್ ಅವರು, “ಮೈಸೂರು ದಸರಾ ಸಂಭ್ರಮವು ಕರ್ನಾಟ ರಾಜ್ಯದ ಹೆಮ್ಮೆ, ಭವ್ಯತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಇಡೀ ಜಗತ್ತಿಗೆ ಸಾರಿದೆ. ಈ ಸಂದರ್ಭವನ್ನು ನಾವು ಇದೇ ಮೊದಲ ಬಾರಿಗೆ ವಿಶೇಷ ಗ್ರಾಹಕ ಕಾರ್ಯಕ್ರಮದ ಮೂಲಕ ಟಾಟಾ ಟೀ ಚಕ್ರ ಗೋಲ್ಡ್ ಬ್ರಾಂಡ್ ಹಾಗೂ ಜನರನ್ನು ಒಂದು ವಿಶಿಷ್ಟ ಮತ್ತು ಆಕರ್ಷಕ ರೀತಿಯಲ್ಲಿ ಒಗ್ಗೂಡಿಸುವ ಕಾರ್ಯ ಮಾಡಿದ್ದೇವೆ. ಈ ಮೂಲಕ ಗ್ರಾಹಕರ ಸಂಭ್ರಮವನ್ನು ಹೆಚ್ಚಿಸುವುದು ನಮ್ಮ ಉದ್ದೇಶವಾಗಿತ್ತು. ಅರಮನೆ, ದೀಪಗಳು, ಸಂಗೀತ ಮತ್ತು ಜನ ಸಮೂಹ ಇವೆಲ್ಲವೂ ಸೇರಿಕೊಂಡು ಈ ಬ್ರಾಂಡ್ ಒದಗಿಸುವ ಸಂತೋಷ ಮತ್ತು ಸಂಭ್ರಮವನ್ನು ಸಾರಲು ಒಂದು ಅತ್ಯುತ್ತಮ ವೇದಿಕೆ ರೂಪುಗೊಂಡಿತ್ತು” ಎಂದು ಹೇಳಿದರು.

ಹಬ್ಬದ ವಿಶೇಷ ಪ್ಯಾಕ್‌, ಗ್ರಾಹಕರ ಜೊತೆಗಿನ ಆನ್ ಫೀಲ್ಡ್ ಸಂವಾದ ಕಾರ್ಯಕ್ರಮ ಮತ್ತು ಡಿಜಿಟಲ್ ವೈಶಿಷ್ಟ್ಯಗಳು ಎಲ್ಲವೂ ಸೇರಿಕೊಂಡು ಟಾಟಾ ಟೀ ಚಕ್ರ ಗೋಲ್ಡ್ ಅನ್ನು ಜನಮನಕ್ಕೆ ತಲುಪಿಸಲು ಯಶಸ್ವಿಯಾಗಿದೆ. ಈ ಮೂಲಕ ಈ ಬ್ರಾಂಡ್ ಒಂದು ಕಪ್ ಚಹಾವನ್ನು ಮೀರಿದ್ದಾಗಿದ್ದು, ಇದು ಟಾಟಾ ಟೀ ಗೋಲ್ಡ್ ಚಕ್ರ ಸೇವಿಸುವ ಜನರ ಹೆಮ್ಮೆ, ಉಲ್ಲಾಸ ಮತ್ತು ಹಬ್ಬದ ಉತ್ಸಾಹವನ್ನು ಸಂಭ್ರಮಿಸುವ ಬ್ರಾಂಡ್ ಆಗಿದೆ ಎನ್ನುವುದನ್ನು ಸಾರಲಾಗಿದೆ.

Leave a Reply

Your email address will not be published. Required fields are marked *