ನಂದಿನಿ ಮೈಸೂರು
ನಂಜನಗೂಡು
*ಸುತ್ತೂರು ಶ್ರೀ ಕ್ಷೇತ್ರದ ಮಹಾ ದಾಸೋಹಕ್ಕೆ ಕ್ಷಣಗಣನೆ, ಒಂದು ವಾರ ಆರದ ಬೆಂಕಿ*
ಜನವರಿ 26 ರಿಂದ 31ರವರೆಗೆ ನಡೆಯಲಿರುವ ಐತಿಹಾಸಿಕ ಸುತ್ತೂರು ಜಾತ್ರಾ ಮಹೋತ್ಸವದ
ಮಹಾ ದಾಸೋಹಕ್ಕೆ ಸುತ್ತೂರು ಶ್ರೀಗಳು ಚಾಲನೆ ನೀಡಿದರು
ಬೃಹತ್ ಅಡುಗೆ ಮನೆಯಲ್ಲಿ ಅಡುಗೆ ಒಲೆಗಳಿಗೆ ಪೂಜೆ ಸಲ್ಲಿಸಿ ದೊಡ್ಡ ದೊಡ್ಡ ಪಾತ್ರೆಗಳಿಗೆ ಅಡುಗೆ ಪದಾರ್ಥ ಹಾಕುವ ಮೂಲಕ ಚಾಲನೆ ನೀಡಲಾಯಿತು
ಇಂದು ದೊಡ್ಡ ದೊಡ್ಡ ಅಡುಗೆ ಒಲೆಗಳಿಗೆ ಹಚ್ಚುವ ಬೆಂಕಿ ಒಂದು ವಾರಗಳ ಕಾಲ ಆರದೇ ಇರುವುದು ತ್ರಿಕಾಲ ಮಹಾ ದಾಸೋಹದ ವಿಶೇಷ
ಸುತ್ತೂರು ಜಾತ್ರೆ ಮಹಾ ದಾಸೋಹಕ್ಕೆ 1 ಸಾವಿರ ಕ್ವಿಂಟಾಲ್ ಅಕ್ಕಿ, 250 ಕ್ವಿಂಟಾಲ್ ಬೇಳೆ,200 ಕ್ವಿಂಟಾಲ್ ಸಕ್ಕರೆ, 1500 ಸಾವಿರ ಟಿನ್ ಅಡುಗೆ ಎಣ್ಣೆ 10 ಸಾವಿರ ಕೆ.ಜಿ ತುಪ್ಪ, ಸಾವಿರಾರು ಕ್ವಿಂಟಲ್ ತರಕಾರಿ ಸೇರಿದಂತೆ ಅಡುಗೆ ಸಾಮಾಗ್ರಿ ದಾಸ್ತಾನು ಮಾಡಿಕೊಳ್ಳಲಾಗಿದೆ.
ಇದರಿಂದಾಗಿ ಪ್ರತಿನಿತ್ಯ ಬಗೆ ಬಗೆಯ ಸಿಹಿಯು ಸೇರಿದಂತೆ ಲಕ್ಷಾಂತರ ಮಂದಿಗೆ ತ್ರಿಕಾಲ ದಾಸೋಹ ವ್ಯವಸ್ಥೆಗೆ ಚಾಲನೆ ನೀಡಲಾಯಿತು
ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು, ಮಠದ ಕಾರ್ಯದರ್ಶಿಗಳಾದ ಮಂಜುನಾಥ ಸ್ವಾಮಿ, ಉದಯಕುಮಾರ್, ಶಿವಕುಮಾರ್, ಮಹಾ ದಾಸೋಹ ವ್ಯವಸ್ಥಾಪಕರಾದ ಸುಬ್ಬಪ್ಪ, ಸೇರಿದಂತೆ ಹಲವು ಮಠಾಧೀಶರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು