ನಂದಿನಿ ಮೈಸೂರು
ರಾಷ್ಟ್ರ ಮಟ್ಟದ ಸಿಟ್ಟಿಂಗ್ ಪ್ಯಾರ ಥ್ರೋ-ಬಾಲ್ ತರಬೇತಿ ಮತ್ತು ಆಯ್ಕೆ ಪ್ರಕ್ರಿಯೆ
ಮೈಸೂರು: ಇತ್ತೀಚೆಗೆ ರಾಷ್ಟ್ರ ಮಟ್ಟದ ಸಿಟ್ಟಿಂಗ್ ಪ್ಯಾರ ಥ್ರೋ-ಬಾಲ್ ತರಬೇತಿ ಮತ್ತು ಆಯ್ಕೆ ಪ್ರಕ್ರಿಯೆಯು ನಂಜರಾಜ ಬಹದ್ದೂರ್ ಛತ್ರ ಇಲ್ಲಿ ಪ್ಯಾರ ಥ್ರೋ-ಬಾಲ್ ಫೆಡರೇಷನ್ ಆಫ್ ಇಂಡಿಯ ಮತ್ತು ನಮ್ಮ ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಇವರ ಸಹಯೋಗದೊಂದಿಗೆ ನಡೆಸಲಾಯಿತು.
ಇಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ಮಾರ್ಚ್ 26.03.2025 ಮತ್ತು 27.03.2025ರಂದು ನಡೆಯುವ ರಾಷ್ಟ್ರ ಮಟ್ಟದ ಪಂದ್ಯಗಳಲ್ಲಿ ಆಡುವರು, ಇಲ್ಲಿ ಗೆದ್ದ ತಂಡವು ನೇರವಾಗಿ ಕಾಂಬೋಡಿಯದಲ್ಲಿ ನಡೆಯುವ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸುವರು.
ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ವತಿಯಿಂದ ಸಂಪೂರ್ಣವಾಗಿ ಕ್ರೀಡಾಕೂಟಕ್ಕೆ ಮತ್ತು ಸಭಾ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ರೀತಿಯ ಸಂಪನ್ಮೂಲವನ್ನು ಒದಗಿಸಿಕೂಡಲಾಗಿತ್ತು ಮತ್ತು ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಿತು.
ಇದಕ್ಕೆ ಸಹಕರಿಸಿದ ರೋಟರಿ ಕ್ಲಬ್ ಆಫ್ ಹೆರಿಟೇಜ್ ಕ್ಲಬ್ ನ ಸರ್ವ ಸದಸ್ಯರುಗಳಿಗೆ ಕ್ಲಬ್ ನ ಅಧ್ಯಕ್ಷರಾದ ರಾಜೇಶ್.ಆರ್ ಧನ್ಯವಾದಗಳನ್ನು ಇದೇ ವೇಳೆ ತಿಳಿಸಿದರು.
ಮತ್ತೊಂದು ಹೆಮ್ಮೆಯ ವಿಚಾರವೆಂದರೆ ನಮ್ಮ ಕ್ಲಬ್ ನ ಮಾಜಿ ಅಧ್ಯಕ್ಷರಾದ ರೊ.ಸುರೇಶ್.ಜಿ.ಎಂ ರವರು ಪ್ಯಾರ ಥ್ರೋ-ಬಾಲ್ ಫೆಡರೇಷನ್ ಆಫ್ ಇಂಡಿಯಾದ ಚೇರ್ಮನ್ ಆಗಿ ಆಯ್ಕೆಯಾಗಿ ಕಾರ್ಯ ನಿರ್ವಹಿಸುತ್ತಿರುವುದು.
ಈ ಕಾರ್ಯಕ್ರಮವನ್ನು ಎಂ.ಮಹಾದೇವ್ [ಅರ್ಜುನ ಅವಾರ್ಡ್ ವಿಜೇತರು], ಸಂಸ್ಥಾಪಕ ಅಧ್ಯಕ್ಷರು ಮತ್ತು ಭಾರತದ ಪ್ಯಾರಲಿಂಪಿಕ್ ಸಮಿತಿ, ಗೌರವಾನ್ವಿತ ಅಧ್ಯಕ್ಷರು, ಪಿ.ಟಿ.ಎಫ್.ಐ, ಇವರು ಉದ್ಘಾಟಿಸಿದರು, ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರೋಟರಿ ಕ್ಲಬ್ ಆಫ್ ಹೆರಿಟೀಜ್ ನ ಸಂಸ್ಥಾಪಕ ಅಧ್ಯಕ್ಷರಾದ ರೊ.ಮಂಜುನಾಥ್.ಕೆ ಮತ್ತು ಚಂದ್ರಶೇಖರ್, ಮಾಜಿ ಪ್ರಧಾನ ಕಾರ್ಯದರ್ಶಿ, [ಪಿ.ಸಿ.ಐ] ಆಗಮಿಸಿದ್ದರು. ಹಾಗೂ ಕಾರ್ಯಕ್ರಮವು ಜಿ.ಎಂ.ಸುರೇಶ್ [ಪಿ.ಟಿ.ಎಫ್.ಐ] ಮತ್ತು ರೋಟರಿ ಕ್ಲಬ್ ಆಫ್ ಹೆರಿಟೇಜ್ ನ ಅಧ್ಯಕ್ಷರಾದ ರಾಜೇಶ್.ಆರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜೇಶ್.ಆರ್ ರವರು, ಎಲ್ಲಾ ಕ್ರೀಡಾಪಟುಗಳಿಗೆ ಪ್ರೋತ್ಸಾಹ ತುಂಬುವ ಮೂಲಕ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ರಾಮಚಂದ್ರ.ಆರ್, ಅಧ್ಯಕ್ಷರು [ಪಿ.ಟಿ.ಎಫ್.ಐ], ಮಂಜುನಾಥ್.ಎಲ್ ಪ್ರಧಾನ ಕಾರ್ಯದರ್ಶಿ [ಪಿ.ಟಿ.ಎಫ್.ಐ], ರೋಟರಿ ಕ್ಲಬ್ ಆಫ್ ಹೆರಿಟೇಜ್ ನ ಕಾರ್ಯದರ್ಶಿ ರೊ.ಗೌರವ್ ಜಿ ಶರ್ಮ ಮತ್ತು ಮಾಜಿ ಅಧ್ಯಕ್ಷರಾದ ರೊ.ವೆಂಕಟೇಶ್.ಎಚ್.ಎಂ ಸದಸ್ಯರುಗಳಾದ ರೊ.ಮಧುಸೂದನ್ ಉಪಸ್ಥಿತರಿದ್ದರು.
ಹಾಗೂ ರೊ.ಶಿವಕುಮಾರ್, ರೊ.ಸುಂದರರಾಜ, ರೊ.ಜಗದೀಶ್ ಗೌಡ ಮತ್ತು ರೊ.ರಾಘವೇಂದ್ರ ಆಚಾರ್ ರವರು ಕಾರ್ಯಕ್ರಮಕ್ಕೆ ಧನ ಸಂಪನ್ಮೂಲದ ಸಹಕಾರ ಮಾಡಿದರು. ರೋಟರಿ ಮೈಸೂರು ಅಂಬಾರಿ ಅಧ್ಯಕ್ಷರಾದ ರೊ.ಯದುಕೃಷ್ಣ ರವರು ಸಹ ಭಾಗವಹಿಸಿದ್ದರು.