ನಂದಿನಿ ಮನುಪ್ರಸಾದ್ ನಾಯಕ್
ಭಾರತದಲ್ಲಿ ಕ್ರೀಡಾ ಸ್ಪರ್ಧೆಗಳ ಆಯೋಜನೆ ಬಹಳ ಪ್ರಾಚೀನ ಇತಿಹಾಸವನ್ನು ಹೊಂದಿದೆ: ಡಾ.ಈ.ಸಿ.ನಿಂಗರಾಜ್ ಗೌಡ.

ಭಾರತದ ಕ್ರೀಡಾ ಸಂಸ್ಕೃತಿ ವೇದಯುಗದ ಕಾಲದಿಂದಲೇ ಆರಂಭವಾಗಿದೆ. ಪ್ರಾಚೀನ ಕಾಲದ ವೇದಗಳಲ್ಲಿ ಮತ್ತು ಮಹಾಕಾವ್ಯಗಳಲ್ಲಿ ಕ್ರೀಡೆಗಳ ಉಲ್ಲೇಖ ಇದೆ. ಮಹಾಭಾರತದಲ್ಲಿ ದ್ವಂದ್ವಯುದ್ಧ, ರಥಸ್ಪರ್ಧೆ, ಬಿಲ್ಲುಗುಂಡಿ (ಧನುರ್ವಿದ್ಯೆ), ಕುಸ್ತಿ, ಓಟ, ಚದುರಂಗ ಮುಂತಾದ ಕ್ರೀಡೆಗಳ ವಿವರಣೆಗಳಿವೆ. ರಾಮಾಯಣದಲ್ಲೂ ಯುವರಾಜರ ತರಬೇತಿಯಲ್ಲಿ ದೈಹಿಕ ವ್ಯಾಯಾಮ ಮತ್ತು ಕ್ರೀಡೆಗಳು ಸೇರಿದ್ದವು. ಈ ಕಾಲದಲ್ಲಿ ಕ್ರೀಡೆಗಳು ಶೌರ್ಯ, ಧೈರ್ಯ ಮತ್ತು ಶಿಷ್ಟಾಚಾರದ ಭಾಗವಾಗಿದ್ದವು.
ಮೌರ್ಯರು ಮತ್ತು ಗುಪ್ತರ ಕಾಲದಲ್ಲಿ ಕ್ರೀಡಾಂಗಣಗಳು ಮತ್ತು ಸಾರ್ವಜನಿಕ ಆಟಗಳು ನಡೆದವು. ಕುಸ್ತಿ, ಬಿಲ್ಲುಗುಂಡಿ, ಕುದುರೆಸವಾರಿ, ಹಸ್ತಿಪಂದ್ಯ ಇತ್ಯಾದಿ ಜನಪ್ರಿಯವಾಗಿದ್ದವು. ಮುಘಲ್ ಕಾಲದಲ್ಲಿ, ಶಿಕಾರಿ (ಹುಲಿ ಬೇಟೆ), ಪೋಲೋ (ಚೌಗಾನ್), ಕುಸ್ತಿ ಮುಂತಾದ ಕ್ರೀಡೆಗಳು ಅರಸರ ಕ್ರೀಡೆಗಳಾಗಿದ್ದವು ಎಂದು ಮೈಸೂರಿನ ಲಲಿತಾದ್ರಿಪುರದಲ್ಲಿರುವ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆದ ಸಿಲಿಕಾತನ್ -2025 ಜ್ಯೂನಿಯರ್ ಅಥ್ಲೇಟ್ಸ್ ಮೀಟ್ ಕ್ರೀಡಾ ಸ್ಪರ್ಧೆಗಳನ್ನೂ ಉದ್ಘಾಟಿಸಿ ಮೃಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ಮಾತನಾಡಿದರು.
ಬ್ರಿಟಿಷರು ಭಾರತಕ್ಕೆ ಆಧುನಿಕ ಕ್ರೀಡೆಗಳ ಪರಿಕಲ್ಪನೆ ತಂದರು.
ಕ್ರಿಕೆಟ್, ಫುಟ್‌ಬಾಲ್, ಹಾಕಿ, ಟೆನಿಸ್ ಮುಂತಾದ ಪಾಶ್ಚಾತ್ಯ ಕ್ರೀಡೆಗಳು ಶಾಲೆ-ಕಾಲೇಜುಗಳಲ್ಲಿ ಹರಡಿದವು. ಮೊದಲ ಕ್ರಿಕೆಟ್ ಪಂದ್ಯಗಳು ಮುಂಬೈ (1848) ನಲ್ಲಿ ನಡೆದವು. 1928ರಲ್ಲಿ ಭಾರತ ಮೊದಲ ಬಾರಿಗೆ ಒಲಿಂಪಿಕ್ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿತು ಎಂದು ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದರು.

ಮೈಸೂರಿನ ಅರಸರು ಕೂಡ ಕ್ರೀಡೆಗಳಿಗೆ ಪ್ರೊತ್ಸಾಹ ನೀಡಿದ್ದಾರೆ.
ಸ್ವಾತಂತ್ರ್ಯೋತ್ತರ ನಂತರ (1947 ನಂತರ) ಭಾರತ ಸರ್ಕಾರ ಕ್ರೀಡೆಗಳ ಅಭಿವೃದ್ಧಿಗೆ ಯುವಕಲಾ ಮತ್ತು ಕ್ರೀಡಾ ಇಲಾಖೆಯನ್ನು ಸ್ಥಾಪಿಸಿತು. ರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳು, ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (SAI) ಮುಂತಾದ ಸಂಸ್ಥೆಗಳು ಸ್ಥಾಪಿಸಲ್ಪಟ್ಟವು. ಹಾಕಿ, ಕ್ರಿಕೆಟ್, ಬ್ಯಾಡ್ಮಿಂಟನ್, ಕುಸ್ತಿ, ಅಥ್ಲೆಟಿಕ್ಸ್, ಶೂಟಿಂಗ್ ಮುಂತಾದ ಕ್ರೀಡೆಗಳಲ್ಲಿ ಭಾರತೀಯರು ವಿಶ್ವಮಟ್ಟದಲ್ಲಿ ಹೆಸರು ಮಾಡಿದರು.
ಭಾರತದಲ್ಲಿ ಈಗ ಏಷಿಯನ್ ಕ್ರೀಡಾಕೂಟ, ಕಾಮನ್‌ವೆಲ್ತ್ ಗೇಮ್ಸ್, ಐಪಿಎಲ್, ಪ್ರೊ ಕಬಡ್ಡಿ ಲೀಗ್, ಐಎಸ್‌ಎಲ್ (ಫುಟ್‌ಬಾಲ್) ಮುಂತಾದ ದೊಡ್ಡ ಕ್ರೀಡಾ ಲೀಗ್‌ಗಳು ನಡೆಯುತ್ತಿವೆ. ಕ್ರೀಡೆ ಈಗ ವೃತ್ತಿಪರ ಕ್ಷೇತ್ರವಾಗಿದ್ದು, ರಾಷ್ಟ್ರದ ಗೌರವದ ಸಂಕೇತವಾಗಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ರವರು 2036 ರ ಒಲಂಪಿಕ್ಸ್ ಕ್ರೀಡಾಕೂಟವನ್ನೂ ಭಾರತದಲ್ಲಿ ಆಯೋಜಿಸಲೂ ಪ್ರಯತ್ನ ಪಡುತ್ತಿದ್ದಾರೆ. ಈಗಿನ ಕೇಂದ್ರ ಸರ್ಕಾರವೂ ಕ್ರೀಡೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ತರಭೇತಿ ಮತ್ತು ಉಚಿತ ಶಿಕ್ಷಣವನ್ನೂ ಶಾಲಾ ಮಟ್ಟದಿಂದಲೇ ನೀಡುತ್ತೀದೆ. ಹಾಗಾಗಿ ಮೈಸೂರಿನ ಎಲ್ಲಾ ಮಕ್ಕಳು ಇದರ ಸದುಪಯೋಗ ಪಡಿದುಕೊಳ್ಳಬೇಕು ಎಂದು ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದರು.

ಸಂಸ್ಧೆಯ ಕಾರ್ಯದರ್ಶಿ ಎಲ್. ರವಿ ರವರು ಮಾತನಾಡಿ ಸಿಲಿಕಾನ್ ಸಿಟಿ ಸ್ಕೂಲ್ ಸಂಸ್ಧೆಯೂ ಕ್ರೀಡಾ ಸ್ಪರ್ಧೇಗಳಿಗೆ ಉತ್ತೇಜನ ನೀಡುತ್ತೀದೆ. ಸುಸಜ್ಜೀತ ಈಜುಕೋಳವನ್ನೂ ಹೊಂದಿದೆ. ಚೆಸ್, ಬ್ಯಾಡಮಿಟನ್, ಅಥ್ಲೇಟಿಕ್ಸ್, ಈಜು, ಸ್ಕೇಟಿಂಗ್ ಹೀಗೆ ಎಲ್ಲಾ ಕ್ರೀಡೆಗಳಿಗೂ ಪ್ರೊತ್ಸಾಹ ನೀಡುತ್ತೀದೆ. ಕ್ರೀಡೆಗಳಲ್ಲಿ ರಾಜ್ಯ ಮತ್ತು ದೇಶವನ್ನೂ ಪ್ರತಿನಿಧಿಸುವ ಮಕ್ಕಳಿಗೆ ಉಚಿತ ಶಿಕ್ಷಣವನ್ನೂನೀಡುತ್ತಿದೆ ಎಂದು ತಿಳಿಸಿದರು. ನಮ್ಮ ಸಂಸ್ಧೆಯೂ NEP ಅನ್ನೂ ಅಳವಡಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡುತ್ತೀದೆ. ವಿದ್ಯಾರ್ಥಿಗಳು ಕ್ರೀಡೆಯ ಜೊತೆಗೆ ಓದಿನ ಕಡೆಗೂ ಗಮನ ಕೊಡಬೇಕು.. ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಿ ದೇಶಕ್ಕೆ ಕೀರ್ತಿ ತರಬೇಕು ಎಂದು ಎಲ್.ರವಿ ರವರು ಮಕ್ಕಳಿಗೆ ತಿಳಿಸಿದರು.
ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲರಾದ ಡಾ.ದೀಪ್ತಿ ಚತುರ್ವೇದಿ ಅಧ್ಯಕ್ಷತೆವಹಿಸದ್ದರು. ಬಿ.ಜಯಶ್ರೀ ರವರು ಸ್ವಾಗತಿಸಿದರು, ಶ್ರುತಿರವರು ನಿರೂಪಿಸಿದರು.. ಸಂದೀಪ್ ರವರು ವಂದನಾರ್ಪಣೆ ಮಾಡಿದರು.. ಮೈಸೂರಿನ ಎಲ್ಲಾ ಶಾಲೆಗಳಿಂದ 352 ಮಕ್ಕಳು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.