ದೇವರ,ಹಿರಿಯರು,ತಂದೆ ತಾಯಿಯ ಬಳಿ ಆಶಿರ್ವಾದ ಪಡೆಯಬಹುದು ಆದರೆ ಮಕ್ಕಳಿಂದ ಆಶಿರ್ವಾದ ಪಡೆಯುವುದು ತುಂಬ ಕಷ್ಟ:ಶ್ರೀಪಾಲ್

ನಂದಿನಿ ಮೈಸೂರು

ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ
ರಾಜ್ಯ ಕಾರ್ಯದರ್ಶಿಗಳಾದ ಆರ್. ಶ್ರೀಪಾಲ್ ರವರು
ಮೈಸೂರಿನ ವಿಜಯನಗರ ಶ್ರೀ ಯೋಗನರಸಿಂಹಸ್ವಾಮಿ ದೇವಸ್ಥಾನದ ರಸ್ತೆಯಲ್ಲಿರುವ ಸವಿನೆನಪು ಫೌಂಡೇಶನ್ (ಹಾಸ್ಟೆಲ್) ನಲ್ಲಿ ಮಕ್ಕಳೊಂದಿಗೆ ಹುಟ್ಟು ಹಬ್ಬದ ಆಚರಿಸಿಕೊಂಡರು.

ಸವಿನೆನಪು ಹಾಸ್ಟೆಲ್ ನಲ್ಲಿರುವ 60 ಮಕ್ಕಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದ ಶ್ರೀಪಾಲ್ ಅವರು ಸ್ವತಃ ತಾವೇ ಮಕ್ಕಳಿಗೆ ಊಟ ಬಡಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಮಕ್ಕಳ ಜೊತೆ ಆಚರಿಸಿಕೊಂಡರು.

ಮಕ್ಕಳು ಕೂಡ ಶ್ರೀಪಾಲ್ ರವರಿಗೆ ಹಾಡುವ ಮೂಲಕ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದರು.ಇದೇ ಸಂದರ್ಭದಲ್ಲಿ ಶ್ರೀಪಾಲ್ ಸ್ನೇಹಿತರು ಸನ್ಮಾನಿಸಿ ಸಿಹಿತಿನಿಸಿದರು.

 

ಇದೆರ ಸಂದರ್ಭದಲ್ಲಿ ಮಾತನಾಡಿದ ಶ್ರೀಪಾಲ್ ರವರು
ದೇವರ ಬಳಿ,ಹಿರಿಯರ ಬಳಿ,ತಂದೆ ತಾಯಿಯ ಬಳಿ ಆಶಿರ್ವಾದ ಪಡೆದುಕೊಳ್ಳಬಹುದು ಆದರೇ ಪುಟ್ಟ ಮಕ್ಕಳಿಂದ ಆಶಿರ್ವಾದ ಪಡೆಯುವುದು ತುಂಬ ಕಷ್ಟ.ಕೆಲ ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಒಂದು ಶಾಲೆಗೆ ತೆರಳಿದ್ರೂ ಮಕ್ಕಳ ಯೋಗಕ್ಷೇಮ ವಿಚಾರಿಸಿ ಅವರ ಜೊತೆಗೆ ಊಟ ಮಾಡಿದ್ದರು. ಇವರ ಕಾರ್ಯ ವೈಖರಿಗೆ ನಾವು ಧನ್ಯವಾದ ತಿಳಿಸುತ್ತೇನೆ.ಅವರೇ ನಮಗೆ ಸ್ಪೂರ್ತಿಯಾಗಿದ್ದಾರೆ.ಹಸಿದವರಿಗರ ಅನ್ನಭಾಗ್ಯದ ಮೂಲಕ ಸಿದ್ದರಾಮಯ್ಯ ಹೊಟ್ಟೆ ತುಂಬಿಸುತ್ತಿದ್ದಾರೆ.ಇಂದು ನನ್ನ ಹುಟ್ಟು ಹಬ್ಬದ ಹಿನ್ನಲೆ ಮಕ್ಕಳ ಜೊತೆ ಆಚರಿಸಿಕೊಂಡಿದ್ದೇನೆ ಎಂದು ಮಕ್ಕಳೊಂದಿಗೆ ಕಳೆದ ಖುಷಿಯ ಕ್ಷಣಗಳನ್ನ ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ರವಿ ಎಸ್ ನಾಯಕ್,ಮೈಸೂರು ಬಸವಣ್ಣ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *