ಸಂಸ್ಥೆಗಳು ಸರ್ಕಾರಗಳು ಮಾಡುವ ಕೆಲಸವನ್ನು ಮಾಡುತ್ತಿವೆ: ಶ್ರೀನಿವಾಸ್

ನಂದಿನಿ ಮನುಪ್ರಸಾದ್ ನಾಯಕ್

ಪಿ.ಜಿ.ಆರ್.ಎಸ್.ಎಸ್. ಸಂಸ್ಥೆಯಲ್ಲಿ ಎರಡನೆಯ ಆಷಾಡ ಶುಕ್ರವಾರದ ಚಾಮುಂಡೇಶ್ವರಿ ದೇವಿಯ ಪೂಜಾ ಕಾರ್ಯಕ್ರಮ
“ಸಂಸ್ಥೆಗಳು ಸರ್ಕಾರಗಳು ಮಾಡುವ ಕೆಲಸವನ್ನು ಮಾಡುತ್ತಿವೆ ಮೈಸೂರಿನಲ್ಲಿ ಪಿ.ಜಿ.ಆರ್.ಎಸ್.ಎಸ್. ಸಂಸ್ಥೆಯು ತನ್ನದೇ ಆದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದೆ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡುತ್ತಲ್ಲಿರುವುದು ಸ್ತ್ಯುತ್ಯ್ರರ್ಹ” ಎಂದು ಯೋಗ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿಯಾದ ಶ್ರೀ ಶ್ರೀನಿವಾಸ್ ರವರು ತಿಳಿಸಿದರು. ಹೂಟಗಳ್ಳಿಯಲ್ಲಿರುವ ಪಿ.ಜಿ.ಅರ್.ಎಸ್.ಎಸ್. ಸಂಸ್ಥೆಯವತಿಯಿಂದ ಎರಡನೆಯ ಆಷಾಡ ಶುಕ್ರವಾರದ ಚಾಮುಂಡೇಶ್ವರಿ ದೇವಿಯ ಪೂಜಾ ಸಮಾರಂಭದಲ್ಲಿ ಭಾಗವಹಿಸಿದರು.
ಪಿ.ಜಿ.ಆರ್.ಎಸ್. ಎಸ್. ಸಂಸ್ಥೆಯು ಕಳೆದ ನಾಲ್ಕು ವರ್ಷಗಳಿಂದ ಮೈಸೂರು ಜಿಲ್ಲೆಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಲ್ಲಿದ್ದು ಸಮಾಜಮುಖಿಯಾಗಿ ಕಾರ್ಯವನ್ನು ನಿರ್ವಹಿಸುತ್ತಲ್ಲಿದೆ ಎಂದು ಶ್ರೀ ಹರೀಶ ಯಾದವ್, ಸಂಸ್ಥಾಪಕ ಅಧ್ಯಕ್ಷರು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ವಿ. ರವೀಂದ್ರ, ಪ್ರಧಾನ ಕಾರ್ಯದರ್ಶಿ, ಶ್ರೀ ಸತೀಶ್, ಉಪಾಧ್ಯಕ್ಷರು, ಶ್ರೀಮತಿ ಎ.ಸವಿತ, ಗೌರವಾಧ್ಯಕ್ಷರು,. ಶ್ರೀಮತಿ ಪಲ್ಲವಿ, ಸಹ ಕಾರ್ಯದರ್ಶಿ, ರಾಜ್ಯ ಸಂಚಾಲಕರು ಶ್ರೀ ರಕ್ತದಾನಿ ಮಂಜು, ಶ್ರೀಮತಿ ಝನ್ಸಿರಾಣಿ, ಸಂಘಟನಾ ಕಾರ್ಯದರ್ಶಿ ಮತ್ತು ಶ್ರೀಮತಿ ಮಂಜುಳಾ, ಖಜಾಂಜಿ ಇವರು ಹಾಗೂ ಪತ್ರಕರ್ತರಾದ ಮನೋಹರ ಮತ್ತು ಸಾರ್ವಜನಿಕರು ಭಾಗವನಸಿದ್ದರು.

Leave a Reply

Your email address will not be published. Required fields are marked *