ನಂದಿನಿ ಮನುಪ್ರಸಾದ್ ನಾಯಕ್
ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಲಕ್ಷ್ಮಿದೇವಿ ದೇವಸ್ಥಾನ ಸಾಂಪ್ರದಾಯಕವಾಗಿ ಉದ್ಘಾಟನೆಗೊಂಡಿತು.
ನಾಗನಹಳ್ಳಿ ಗ್ರಾಮದಲ್ಲಿರುವ ದೇವಸ್ಥಾನದಲ್ಲಿ ಅ.22,23,24 ರಂದು ಮೂರು ದಿನಗಳ ಕಾಲ ದೇವಸ್ಥಾನದಲ್ಲಿ ಹುಣಸೂರಿನ ನಿಜಗುಣ ಸಿದ್ದಲಿಂಗಯ್ಯ ಒಡೆಯರ್ ಸ್ವಾಮೀಜಿಗಳು ಮುಂಜಾನೆಯಿಂದಲೇ ಹೋಮ,ಹವನ ನೆರವೇರಿಸಿದರು.
ಶ್ರೀ ಲಕ್ಷ್ಮೀದೇವಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. 101 ಜನ ಮಹಿಳೆಯರು ಪೂರ್ಣಕುಂಭದೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಕುಂಭಾಭಿಷೇಕ ಮಾಡಿದರು.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಶ್ರೀ ಸೋಮನಾಥ್ ಸ್ವಾಮೀಜಿ ರವರ ದಿವ್ಯ ಸಾನಿಧ್ಯದಲ್ಲಿ
ಭಾಜಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ನಿಕಟ ಪೂರ್ವ ಸಚಿವರು ಮತ್ತು ಶಾಸಕರಾದ ಸಿಟಿ ರವಿ ರವರು ದೇವಸ್ಥಾನ ಉದ್ಘಾಟಿಸಿದರು.ಸುಮಾರು 10 ಸಾವಿರ ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ದೇವಸ್ಥಾನದ ಟ್ರಸ್ಟಿ,ಮೈಸೂರು ಜಿಲ್ಲೆಯ ಮುಖಂಡರಾದ ಜಗದೀಶ್ ಗೌಡರಿಗೆ ” ನಾಗನಹಳ್ಳಿ ರತ್ನ ” ಎಂಬ ಪ್ರಶಸ್ತಿ ನೀಡಿ
ಸನ್ಮಾನಿಸಿ ಗೌರವಿಸಲಾಯಿತು.
ಇನ್ನೂ 48 ದಿನಗಳ ಕಾಲ ಶ್ರೀಲಕ್ಷ್ಮೀದೇವಿ ದೇವಸ್ಥಾನದಲ್ಲಿ ಪೂಜೆ ನಡೆಯಲಿದೆ.
ಶಾಸಕ ಶ್ರೀವತ್ಸ,
ಮಾಜಿ ಶಾಸಕರು, ಮೈಸೂರು ಜಿಲ್ಲಾ ನಗರಾಧ್ಯಕ್ಷರಾದ ಎಲ್. ನಾಗೇಂದ್ರ , ಜೆಡಿಎಸ್ ಮುಖಂಡರು ಮಾಜಿ ನಗರ ಪಾಲಿಕೆ ಸದಸ್ಯ ಅವ್ವಾ ಮಾದೇಶ್ ಸೇರಿದಂತೆ ಅನೇಕ ಮುಖಂಡರುಗಳು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.