ನಂದಿನಿ ಮೈಸೂರು
ಶ್ರೀ ಯತಿರಾಜ ಮಠ ಹಾಗೂ ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾದ ವತಿಯಿಂದ ನವೆಂಬರ್ ೨೪ರ ಭಾನುವಾರದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಶ್ರೀ ವೈಷ್ಣವ ಬೃಹತ್ ಸಮಾವೇಶ ಯಶಸ್ವಿಯಾಗಲೆಂದು, ಯತಿರಾಜ ಮಠದ ಜಗದ್ಗುರುಗಳಾದ ಶ್ರೀ ಯಧುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ರವರನ್ನು ಮೈಸೂರಿನ ವಿಜಯನಗರದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯದ ಸಂಸ್ಥಾಪಕರಾದ ಪ್ರೊ.ಡಾ.ಭಾಷ್ಯಂ ಸ್ವಾಮೀಜಿ ಅವರು ಭೇಟಿಯಾಗಿ ಶುಭಕೋರಿದರು. ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಕೂಡ ಈ ವೇಳೆ ಉಪಸ್ಥಿತರಿದ್ದರು.