ನಂದಿನಿ ಮೈಸೂರು
ಶ್ರೀ ಛಾಯಾದೇವಿ ದತ್ತು ಕೇಂದ್ರದ 02 ನೇ ವರ್ಷದ ವಾರ್ಷಿಕೋತ್ಸವ ಹಾಗೂ ದತ್ತು ಕೇಂದ್ರಕ್ಕೆ 50ನೇ ಮಗು ದಾಖಲಾಗಿದ್ದು. ಮಗುವಿನ ನಾಮಕರಣ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕರಾದ ಶ್ರೀವತ್ಸ್ ಆಗಮಿಸಿ ಮಕ್ಕಳ ರಕ್ಷಣೆ ಮತ್ತು ಪೋಷಣೆ ನಮ್ಮೆಲ್ಲರ ಜವಬ್ದಾರಿಯಾಗಿರುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಯೋಗೇಶ್ ರವರು, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಕಮಲಾ , ಸದಸ್ಯರಾದ ಧನಂಜಯ , ಶ್ರೀ ಛಾಯಾದೇವಿ ಸಂಸ್ಥೆಯ ಅಧ್ಯಕ್ಷರಾದ ಬಾನುಪ್ರಕಾಶ್ ರವರು ದತ್ತು ಕೇಂದ್ರದ ಸಿಬ್ಬಂದಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ವರ್ಗದವರು ಇತರೆ ಗಣ್ಯರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಅಧ್ಯಕ್ಷರಾದ ಬಾನುಪ್ರಕಾಶ್ ರವರು ಮಾತನಾಡಿ ದತ್ತು ಕೇಂದ್ರದ ಬಗ್ಗೆ ಮಾಹಿತಿ ನೀಡಿದರು. ಶ್ರೀ ಛಾಯಾದೇವಿ ದತ್ತು ಕೇಂದ್ರವನ್ನು ಪ್ರಾರಂಬಿಸಿ 02 ವರ್ಷಕಳೆದಿರುತ್ತದೆ. ಈ ದತ್ತು ಕೇಂದ್ರಕ್ಕೆ 01 ದಿನದಿಂದ 06 ವರ್ಷದ ಚಿಕ್ಕ ಚಿಕ್ಕ ಅನಾಥ ಒಪ್ಪಿಸಲ್ಪಟ್ಟ ಮಕ್ಕಳು ಹಾಗು ತ್ಯಜಿಸಲ್ಪಟ್ಟ ಒಟ್ಟು 50 ಮಕ್ಕಳು ದಾಖಲಾಗಿದ್ದು ,20 ಮಕ್ಕಳನ್ನು ಇದುವರೆಗು ಮಕ್ಕಳಿಲ್ಲದ ದಂಪತಿಗಳಿಗೆ ಕರ್ನಾಟಕ ಹಾಗೂ ಬೇರೆ ಬೇರೆ ರಾಜ್ಯಗಳಿಗು ಕೂಡ ಮಕ್ಕಳನ್ನು ದತ್ತು ಕೊಡಲಾಗಿದೆ ಮತ್ತು ಹೊರದೇಶಕ್ಕು ಕೂಡ 03 ವಿಶೇಷ ಅಗತ್ಯತೆಹುಳ್ಳ ಮಕ್ಕಳನ್ನು ದತ್ತು ನೀಡಲಾಗಿರುತ್ತದೆ ಎಂದರು.
# ೪೪/೨ಬಿ, ಚಿಕ್ಕಹರದನಹಳ್ಳಿ, (ಬೇಡರ ಕಣ್ಣಪ್ಪ ದೇವಸ್ಥಾನದ ಹಿಂಭಾಗ) ಜಯನಗರ
#44/2B, Chikkaharadanahalli, (Behind Bedara Kannappa Temple), Jayanagar, Mysuru 570014
Ph.: 0821-2568302, Μ.: 9482163177
email: scatmysore@gmail.com
Web: www.scatindia.in