ನಂದಿನಿ ಮೈಸೂರು
ಅವರೆಕಾಳು ಮುದ್ದೆ ಊಟದ ಅನ್ನ ದಾಸೋಹ
ಮೈಸೂರು: ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಶನಿವಾರ ಶ್ರಾವಣ ಮಾಸದ ಪ್ರಯುಕ್ತ ಸುಮಾರು 12 ಸಾವಿರ ಭಕ್ತರಿಗೆ ‘ಅವರೆಕಾಳು ಮುದ್ದೆ ಊಟ’ದ ಅನ್ನದಾಸೋಹ ಕಾರ್ಯವನ್ನು ಆಯೋಜಿಸಲಾಗಿತ್ತು.
ಮಂಡ್ಯ ಜಿಲ್ಲೆಯ ನಿವಾಸಿಗಳು, ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಮತ್ತು ಪುಣ್ಯಕೋಟಿ ಸೇವಾ ಟ್ರಸ್ಟ್ ವತಿಯಿಂದ ಈ ದಾಸೋಹವನ್ನು ಹಮ್ಮಿಕೊಳ್ಳಲಾಗಿತ್ತು.
ಯೋಗಾನರಸಿಂಹ ಸ್ವಾಮಿ ದೇವಾಲಯದ ಸಂಸ್ಥಾಪಕರು ಹಾಗೂ ನಾಡೋಜ ಶ್ರೀ ಭಾಷ್ಯಂ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಈ ದಾಸೋಹ ನಡೆಸಲಾಗಿದ್ದು,ದೇವಾಲಯದ ಅಡಳಿತಾಧಿಕಾರಿ ಎನ್.ಶ್ರೀನಿವಾಸನ್ ಅವರು ಭಕ್ತಾದಿಗಳಿಗೆ ಊಟ ಬಡಿಸುವ ಮೂಲಕ ದಾಸೋಹಕ್ಕೆ ಚಾಲನೆ ನೀಡಿದರು.
ಮುದ್ದೆ, ಅವರೆಕಾಳು ಸಾಂಬಾರು ಮತ್ತಿ ಸಿಹಿ ಪಾಯಸ ದಾಸೋಹದ ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಅಧ್ಯಕ್ಷರಾದ ರಾಜೇಶ್, ಮಾಜಿ ಅಧ್ಯಕ್ಷ ವೆಂಕಟೇಶ್, ಪುಣ್ಯಕೋಟಿ ಟ್ರಸ್ಟ್ ಅಧ್ಯಕ್ಷ ಹನುಮಂತೇಶ, ಕಾರ್ಯದರ್ಶಿ ಸುಂದರ್ ರಾಜ್, ಪ್ರಭಾಕರ್ ಉಪಸ್ಥಿತರಿದ್ದರು.