ಶಿವರಾತ್ರಿ ವಿಶೇಷ ಪ್ರಸಿದ್ಧ ಕಾಶಿ ವಿಶ್ವನಾಥ ದರ್ಶನ ಕಾರ್ಯಕ್ರಮ

ನಂದಿನಿ ಮೈಸೂರು

ಮೈಸೂರು: ಶಿವರಾತ್ರಿ ಅಂಗವಾಗಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾನಿಲಯದ ವತಿಯಿಂದ ಇದೇ ಫೆ. ೧೯ ರಿಂದ ಮಾರ್ಚ್ ಎರಡರವರೆಗೆ ನಗರದ ವಿಜಯನಗರ ಮೊದಲನೇ ಹಂತದ ಐಶ್ವರ್ಯ ಪೆಟ್ರೋಲ್ ಪಂಪ್ ಎದುರಿನ ಮುಡಾ ಖಾಲಿ ನಿವೇಶನದಲ್ಲಿ ಪ್ರಸಿದ್ಧ ಕಾಶಿ ವಿಶ್ವನಾಥ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಕುರಿತು ನಗರದಲ್ಲಿ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮಿಜಿ ಮಾಹಿತಿ ನೀಡಿ, ಫೆ. ೧೯ ರ ಸಂಜೆ ೬.೩೦ಕ್ಕೆ ನಾಡೋಜ ಡಾ. ಮಹೇಶ್ ಜೋಶಿ ಉದ್ಘಾಟಿಸುವರು, ನಾಡೋಜ ಪ್ರೊ. ಭಾಷ್ಯಂ ಸ್ವಾಮೀಜಿ ಆಶೀರ್ವಚನ ನೀಡುವರು, ಎ.ಎನ್. ರಘುನಂದನ್ ಅತಿಥಿಗಳಾಗಿರುವರು. ಸಮಾರೋಪ ಸಮಾರಂಭ ಮಾರ್ಚ್ ಎರಡರ ಸಂಜೆ ೬.೩೦ಕ್ಕೆ ನಡೆಯಲಿದೆ.
ಇನ್ನು, ಪ್ರತಿದಿನ ಬೆಳಗ್ಗೆ ಎಂಟರಿAದ ರಾತ್ರಿ ಒಂಭತ್ತರವರೆಗೆ ಸಾರ್ವಜನಿಕರಿಗೆ ಪ್ರವೇಶವಿದೆ. ಇಲ್ಲಿ ೧೫೦ ಅಡಿ ಉದ್ದ, ೫೦ ಅಡಿ ಎತ್ತರದ ಕಾಶಿ ವಿಶ್ವನಾಥ ಮಂದಿರದ ಪ್ರತಿರೂಪ, ೨೧ ಅಡಿ ಎತ್ತರದ ರೂಬಿ ಕಲ್ಲಿನ ಶಿವಲಿಂಗ, ಮಾದಕ ದ್ರವ್ಯ ಸೇವನೆ ವಿರುದ್ಧ ಜಾಗೃತಿ ಮೂಡಿಸುವ ಕುಂಭಕರ್ಣ, ಗೃಹಸ್ಥದಲ್ಲಿ ಸಾಮರಸ್ಯದಿಂದಿರಲು ಪ್ರಾಯೋಗಿಕ ಚಿತ್ರ ಪ್ರದರ್ಶನ, ಮನಸ್ಸಿನ ಮಸಾಜ್ ಮಾಡುವ ಐದು ನಿಮಿಷಗಳ ಕಂಪ್ಯೂಟರ್ ಪ್ರೋಗ್ರಾಂ, ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ಮತ್ತು ಗುರಿ ಸಾಧನೆಯ ಬಗ್ಗೆ ಸಮಾಲೋಚನೆ, ಮೌಲ್ಯಗಳ ಪ್ರಯೋಗ ವಿವರಿಸುವ ಆಟ, ಪ್ರತಿದಿನ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ, ಚಿಂತನ, ಧ್ಯಾನ ಮೊದಲಾದವು ಇರಲಿವೆ ಎಂದು ಮಾಹಿತಿ ನೀಡಿದರು.
ರಂಗನಾಥ್, ರಾಮಚಂದ್ರರಾವ್ ಇದ್ದರು.

Leave a Reply

Your email address will not be published. Required fields are marked *