ನಂದಿನಿ ಮನುಪ್ರಸಾದ್ ನಾಯಕ್
ರೈಲ್ವೇ ಸಹಕಾರ ಬ್ಯಾಂಕ್ ತನ್ನ ಶತಮಾನೋತ್ಸವ ಹಾಗೂ 105ನೇ ವರ್ಷದ ಸಂಭ್ರಮ ‘ಶತ ಪಯಣ’ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಮೈಸೂರಿನ ಜೆ.ಕೆ. ಮೈದಾನದಲ್ಲಿರುವ ಎಂಎಂಸಿ & ಆರ್ಐ ಪ್ಲಾಟಿನಮ್ ಜುಬಿಲಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ವೇದಿಕೆ ಗಣ್ಯರು ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ 100 ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ತದನಂತರ 3 ಜನ ಠೇವಣಿ ಇಟ್ಟಿರುವ ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಬ್ಯಾಂಕಿನ ಸದಸ್ಯರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.ಗಾಯಕಿ ಶಮೀತಾ ಮಲ್ನಾಡ್ ರವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ದೇಶದ ಒಗ್ಗೂಡುವಿಕೆಗೆ, ಸ್ವಾತಂತ್ರ್ಯಕ್ಕೆ ರೈಲ್ವೆಯು ಇತಿಹಾಸವಾಗಿ ನಿಂತಿದೆ. ಹೆಚ್ಚಿನ ನೌಕರರನ್ನು ಹೊಂದಿರುವ ರೈಲ್ವೆ ಇಲಾಖೆಯು ಸಾಕಷ್ಟು ಜನರಿಗೆ ಬದುಕನ್ನು ಕಟ್ಟಿಕೊಟ್ಟಿದೆ. ದೇಶದ ಅಭಿವೃದ್ಧಿಯಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದೆ. ಅಷ್ಟೇ ಅಲ್ಲದೆ ಸ್ವಾತಂತ್ರ್ಯ ಬರುವಿಕೆಗೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ ಎಂದು ತಿಳಿಸಿದರು.
ನಂತರ ಬ್ಯಾಂಕಿನ ಅಧ್ಯಕ್ಷರಾದ ಎಂ.ಬಿ. ಮಂಜೇಗೌಡ ಮಾತನಾಡಿ
1920 ರಲ್ಲಿ ಆರಂಭಗೊಂಡ ಬ್ಯಾಂಕ್ ಇದಾಗಿದೆ. ಮೈಸೂರು ಸೇರಿದಂತೆ ರಾಜ್ಯ ವ್ಯಾಪ್ತಿ ರೈಲ್ವೆ ನೌಕರರಿಗೆ ಸೇವಾ ಸೌಲಭ್ಯವನ್ನು ಕಲ್ಪಿಸುವ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕಿನ ಕಾರ್ಯ ಚಟುವಟಿಕೆಯನ್ನು ಮುಂದಿನ ದಿನಗಳಲ್ಲಿ ರಾಷ್ಟ್ರ ವ್ಯಾಪ್ತಿ ವಿಸ್ತರಣೆ ಮಾಡಿ ನೆರೆ ರಾಜ್ಯಗಳಲ್ಲಿ ಶಾಖೆಗಳನ್ನು ತೆರೆಯಲಾಗುವುದು.ಬ್ಯಾಂಕಿನ ಸದಸ್ಯರೇ ಆಧಾರ ಸ್ತಂಭಗಳಾಗಿದ್ದಾರೆ.
ಸದ್ಯ ಬ್ಯಾಂಕಿನ ವಾರ್ಷಿಕ ವಾಹಿವಾಟು 1250 ಕೋಟಿ ರೂ. ಇದ್ದುಘಿ, ಅದನ್ನು 2 ಸಾವಿರ ಕೋಟಿ ರೂ.ವರೆಗೆ ವಿಸ್ತರಣೆ ಮಾಡಲಾಗುವುದು. ಜತೆಗೆ 510 ಕೋಟಿ ರೂ. ಠೇವಣಿ ಇದ್ದುಘಿ, ಅದನ್ನು ಸಾವಿರ ಕೋಟಿ ರೂ. ಹೆಚ್ಚಳ ಮಾಡುವ ಗುರಿ ಹೊಂದಲಾಗಿದೆ. ಅದಕ್ಕೆ ಬ್ಯಾಂಕಿನ ಎಲ್ಲಾ ಸದಸ್ಯರ ಸಹಕಾರ ಅಗತ್ಯ.
ಬ್ಯಾಂಕಿನಿಂದ ಹೊಸದಾಗಿ ಯುಪಿಐ ಸೇವೆ ಆರಂಭಿಸುವುದರೊಂದಿಗೆ 25 ಲಕ್ಷ ರೂ. ವರೆಗೆ ಶ್ಷೆಕ್ಷಣಿಕ ಸಾಲ, ಗೃಹ ಸಾಲವನ್ನು 75 ಲಕ್ಷ ರೂ.ವರೆಗೆ, ವೈಯಕ್ತಿಕ ಸಾಲವನ್ನು 25 ರಿಂದ 40 ಲಕ್ಷ ರೂ.ವರೆಗೆ ವಿಸ್ತರಿಸಲಾಗುವುದು. ಜತೆಗೆ ಚಿನ್ನಾಭರಣ ಅಡಮಾನ ಸಾಲವನ್ನು ಸಹ ಆರಂಭಿಸಲಾಗುವುದು
ಎಂದರು.
ಕಾರ್ಯಕ್ರಮದಲ್ಲಿ ನಿಚ್ಚಲಾನಂದ ಸ್ವಾಮೀಜಿ, ಕೆ.ಆರ್. ನಗರ ಕಾಗಿನೆಲೆ ಮಠದ ಡಾ.ಶಿವಾನಂದ ಪೂರಿ ಸ್ವಾಮೀಜಿ, ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಶಾಸಕರಾದ ಜಿಟಿ.ಹರೀಶ್ ಗೌಡ,ಶಾಸಕರಾದ ಟಿ.ಎಸ್.ಶ್ರೀವತ್ಸ, ಸೌತ್ ವೆರ್ಸ್ಟನ್ ರೈಲ್ವೆ ಮೈಸೂರು ಕಾರ್ಯಾಗಾರದ ಚ್‌ೀ ವರ್ಕ್ಸ್ ಮ್ಯಾನೆಜರ್ ವಿ.ಕೆ.ಚಡ್ಡಾ, ಹುಬ್ಭಳ್ಳಿ ಕಾರ್ಯಾಗಾರದ ವಿಜಯ ಸಿಂಗ್ ಯಾದವ್, ರೈಲ್ವೆಯ ವಿಭಾಗೀಯ ರೈಲ್ವೆ ಮ್ಯಾನೆಜರ್‌ಗಳಾದ ಬೇಲಾ ಮೀನಾ, ಮುದಿತ್ ಮಿತ್ತಲ್, ಅಶುತೋಷ್ ಕುಮಾರ್ ಸಿಂಗ್, ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಬ್ಯಾಂಕಿನ ಉಪಾಧ್ಯಕ್ಷ ಡಾ.ಎಸ್.ಆನಂದ. ಪದಾಧಿಕಾರಿಗಳಾದ ಹನುಮಂತ, ಎಸ್. ಮುತ್ತುಕುಮಾರ್, ಎಂ.ಯತಿರಾಜು, ಸಿ.ಎಚ್. ಮಂಜುನಾಥ್, ಎಸ್. ಉತ್ತೇಜ್, ಸಿ.ನಿರ್ಮಲ, ಎನ್.ಎಸ್. ನಂದ ಕುಮಾರ್, ಎಂ.ಬಿ.ಯೋಗಾನಂದ, ಆರ್. ಚಂದ್ರ ಶೇಖರ್, ಸಿ.ರಾಮನಾಥನ್, ಸಿ.ಶಿವಶಂಕರ್, ಎಸ್.ಶ್ವೇತಾ, ಪಿ. ಚಂದ್ರ ಶೇಖರ್ , ಬ್ಯಾಂಕಿನ ಸಿಇಒ ಎಸ್.ಜೆ.ನಾರಾಯಣ, ಜನರಲ್ ಮ್ಯಾನೆಜರ್ ಎಂ.ಸಿ.ಲಕ್ಷ್ಮೀ ಪ್ರಸಾದ್, ಎಚ್.ಸಿ. ಸತ್ಯ ನಾರಾಯಣ ಇದ್ದರು.