ಶಾಂತಲಾ ವಿದ್ಯಾಪೀಠದಲ್ಲಿ ಅದ್ದೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ

ನಂದಿನಿ ಮನುಪ್ರಸಾದ್ ನಾಯಕ್

 

*ಶಾಂತಲಾ ವಿದ್ಯಾಪೀಠದಲ್ಲಿ ಅದ್ದೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ*

ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಶಾಂತಲಾ ವಿದ್ಯಾಪೀಠದಲ್ಲಿ ಭುವನೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜ್ಯೋತಿ ಬೆಳಗಿಸುವ ಮುಲಕ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಾಯಿತು, ಸಮಾರಂಭದಲ್ಲಿ ಮಕ್ಕಳ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ನಂತರ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಶಾಂತಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು,
ಮಹದೇವ ಪ್ರಸಾದ್, ವಕೀಲರು ಮೈಸೂರು
ಗಿರೀಶ್, ವಕೀಲರು ಮೈಸೂರು ಲಕ್ಷ್ಮಿ ರಂಗೋಲಿ ಕಲಾವಿದೆ ಇವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು,

ಇದೆ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಿಮಿಸಿದ್ದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ,ಹಿರಿಯ ಪತ್ರಕರ್ತ ರವಿಕುಮಾರ್ ಅವರು ಮಾತನಾಡಿ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದು, ಮಕ್ಕಳಿಗೆ ಪೋಷಕರು ಸಂಸ್ಕಾರವನ್ನು ಹೇಳಿಕೊಡಬೇಕು, ಹಿರಿಯರಿಗೆ ಗೌರವಿಸುವುದನ್ನು ಕಲಿಸಬೇಕು , ನಾವುಗಳು ನಮ್ಮ ಜನ್ಮದಾತರುಗಳನ್ನು ಸಂಧ್ಯಾಕಾಲದಲ್ಲಿ ಕೈಬಿಡಬಾರದು ಇದನ್ನು ನಮ್ಮೆಲ್ಲ ಮಕ್ಕಳಿಗೆ ಅರ್ಥೈಸಬೇಕು , ದೊಡ್ಡ ದೊಡ್ಡ ವಿಧ್ಯವಂತರೇ ತಂದೆ ತಾಯಿಯರನ್ನು ಬೀದಿಗೆ ಬಿಟ್ಟಂತಹ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣುಮುಂದೆ ಇದೆ ಎಂದು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ರವಿಕುಮಾರ್ , ನಾರಾಯಣ್ ಹೆಗಡೆ, ಅಲೈ ನಟರಾಜ್, ಬೆಟ್ಟೆಗೌಡ, ಶಾಲೆಯ ಕಾರ್ಯದರ್ಶಿಗಳಾದ ಸಂತೋಷ್ ಕುಮಾರ್, ಡಿಂಬಲ್ ಸೆಬಾಸ್ಟಿಯನ್, ಶಿಕ್ಷಕ ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *