ನಂದಿನಿ ಮೈಸೂರು
ಶಾಲೆಯಲ್ಲಾ ಹಳದಿ ಕೆಂಪು ಬಣ್ಣದಿಂದ ಕೂಡಿತ್ತು,ಮಕ್ಕಳ ಕೈಯಲ್ಲಿ ಕನ್ನಡದ ಬಾವುಟ ರಾರಾಜಿಸುತ್ತಿತ್ತು.ಡೊಳ್ಳು ಕುಣಿತ,ವೀರಗಾಸೆ ನೆರೆದಿದ್ದವರನ್ನ ಕುಳಿತಲ್ಲಿಯೇ ಕುಣಿಯುವಂತೆ ಮಾಡಿತ್ತು.ಇದೆಲ್ಲಾ ಕಂಡು ಬಂದಿದ್ದು ಶಾಂತಲ ವಿದ್ಯಾಪೀಠ ದಲ್ಲಿ.
ಕರ್ನಾಟಕದ
ಕಲೆ, ಸಾಹಿತ್ಯ, ಸಂಸ್ಕೃತಿ,ಪಾರಂಪರೆಯನ್ನ ಮಕ್ಕಳಿಗೆ ತಿಳಿಸಲು
ಶಾಂತಲ ವಿದ್ಯಾಪೀಠದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮೊದಲಿಗೆ ವಿದ್ಯಾರ್ಥಿಗಳು ಪ್ರಮುಖ ರಸ್ತೆಯಲ್ಲಿ ಸರತಿ ಸಾಲಿನಲ್ಲಿ ಸಾಗುತ್ತಾ ಕನ್ನಡ ಕಂಪನ್ನು ಸಾರಿದರು.ತದ ನಂತರ ಆಯೋಜಿಸಿದ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತರು ವಿಜಯವಾಣಿ ದಿನಪತ್ರಿಕೆಯ ಎಂ.ಆರ್ ಸತ್ಯ ನಾರಾಯಣ ಅವರು ಜ್ಯೋತಿ ಬೆಳಗಿಸಿ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೂಲಕ ಚಾಲನೆ ನೀಡಿದರು.
ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಛಾಯಾಗ್ರಾಹಕ ವಿ.ಜಿ. ಶ್ರೀಧರ್, ಹಾಗೂ ಆರ್ .ಜೆ. ರಶ್ಮಿ ಅವರಿಗೆ ಶಾಂತಲಾ ಮಾದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕತರಾದ ವಿ.ಜಿ.ಶ್ರೀಧರ ಮಾತನಾಡಿ ನಾನು ಒಬ್ಬ ಛಾಯಾಗ್ರಾಹಕ ನನಗೆ ಫೋಟೋ ತೆಗೆಯೋದು ಮಾತ್ರ ಗೊತ್ತು.ನಾನು ಮಾತನಾಡೋದಿಲ್ಲ ಆರ್.ಜೆ.ರಶ್ಮಿ ಮಾತನಾಡುತ್ತಾರೆ ಎಂದು ಅರ್ಥಪೂರ್ಣವಾಗಿ ನಮ್ಮ ಕಾಯಕದ ಬಗ್ಗೆ ತಿಳಿಸಿದರು.ನಂತರ ಆರ್.ಜೆ.ರಶ್ಮಿ ಮಾತನಾಡಿ ಮಾತೃಭಾಷೆ
ಕನ್ನಡವನ್ನ ಮಾತನಾಡದವರು ಬಡವರು,ಕನ್ನಡ ಮಾತನಾಡುವವರು ಶ್ರೀಮಂತರು ಎಂದು ಮಕ್ಕಳಿಗೆ,ಪೋಷಕರಿಗೆ
ಒಂದಿಷ್ಟು ಉದಾಹರಣೆ ನೀಡುತ್ತಾ ಮಾತನಾಡಿದರು.
ಭವಿಷ್ಯಕ್ಕೆ ಇಂಗ್ಲಿಷ್ ಮುಖ್ಯವಾಗಿದ್ದರೂ ಸಹ ಕನ್ನಡ ಮಾತನಾಡುವುದನ್ನ ಬಿಡಬಾರದು ಎಂದರು.
ಕನ್ನಡಿಗರು 365 ದಿನಗಳಲ್ಲಿಯೂ ಕನ್ನಡ ಕಂಪು ಪಸರಿಸಬೇಕೆ ಹೊರೆತು
ನವೆಂಬರ್ 1 ರಿಂದ ಒಂದು ತಿಂಗಳ ಕಾಲ ಮಾತ್ರ ಕನ್ನಡದ ಕಂಪು ಪಸರಿಸಬಾರದು.ಉಳಿದ ದಿನಗಳಲ್ಲಿ ಅಂತಹ ಉತ್ಸಾಹ ಇರುವುದಿಲ್ಲ ಯಾಕೆ ಎಂದು ಸತ್ಯನಾರಾಯಣ್ ರವರು ಬೇಸರ ವ್ಯಕ್ತಪಡಿಸಿದರು.
ಸಿದ್ಧಾರ್ಥ ಬಡಾವಣೆಯಲ್ಲಿರುವ ಶಾಂತಲ ವಿದ್ಯಾಪೀಠ ಶಾಲೆಯಲ್ಲಿ ಅದ್ದೂರಿಯಾಗಿ 69 ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ.
ಶಾಂತಲ ವಿದ್ಯಾಪೀಠ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವಲ್ಲಿ ಹೆಚ್ಚು ಮುತುವರ್ಜಿ ವಹಿಸಿದೆ. ವಿದ್ಯೆಗಿಂತಲೂ ಸಂಸ್ಕಾರ ಮುಖ್ಯವಾಗಿದೆ. ಎಷ್ಟೇ ವಿದ್ಯೆ ಕಲಿತರೂ ಸಂಸ್ಕಾರ ಇಲ್ಲದಿದ್ದರೆ ಕಲಿತ ವಿದ್ಯೆ ವ್ಯರ್ಥ .ಈ ಬಾರಿಯ ಕನ್ನಡ ರಾಜ್ಯೋತ್ಸವದಲ್ಲಿ ಮಕ್ಕಳಿಂದ ನಮ್ಮ ಸಂಸ್ಕೃತಿಯ ಅನಾವರಣಗೊಳಿಸಲಾಯಿತು ಎಂದು ಶಾಲಾ ಆಡಳಿತ ಸಮಿತಿ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಕುಮಾರ್ ತಿಳಿಸಿದರು.
ನಂತರ ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು
ಕಾರ್ಯಕ್ರಮದಲ್ಲಿ , ಪ್ರಾಂಶುಪಾಲರಾದ ಡಿಂಬಲ್ ಸಬಾಸ್ಟಿಯನ್ ಹಾಗೂ ಶಿಕ್ಷಕವೃಂದ ಉಪಸ್ಥಿತರಿದ್ದರು.