ಪಿರಿಯಾಪಟ್ಟಣ:6 ಜುಲೈ 2022
ಸತೀಶ್ ಆರಾಧ್ಯ
ತಾಲ್ಲೂಕಿನ ಬೆಟ್ಟದಪುರ ಸಮೀಪದ ಗೊರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಹರೀಶ್ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ರವಿಯವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಹರೀಶ್ ನೂತನವಾಗಿ ಆಯ್ಕೆಯಾದರು, ನೂತನ ಅಧ್ಯಕ್ಷರು ಹಾಗೂ ಈ ಹಿಂದಿನ ಅಧ್ಯಕ್ಷರನ್ನು ಶಾಲೆ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭ ಮುಖ್ಯ ಶಿಕ್ಷಕ ಪುಟ್ಟರಾಜು, ಶಿಕ್ಷಕರಾದ ಶಿವಣ್ಣ, ನಟರಾಜ್, ಎಸ್.ಡಿ.ಎಂ.ಸಿ ಸದಸ್ಯರಾದ ಶಂಕರಶೆಟ್ಟಿ, ಕುಮಾರ್ ನಾಯಕ್, ವಸಂತ್, ಸ್ವಾಮಿ, ರಾಜನಾಯಕ್, ಪುರ್ಣಿಮಾ, ಕಲಾವತಿ ,ಶಾಂಭವಿ, ಪವಿತ್ರಾ ಇದ್ದರು.