ಕರ್ನಾಟಕ ಸಾವಿತ್ರಿಬಾಯಿಫುಲೆ ಶೀಕ್ಷಕಿಯರ ಸಂಘದಿಂದ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ, ಸಾವಿತ್ರಿಬಾಯಿಫುಲೆ ವಿಚಾರ ಸಂಕೀರ್ಣ, ರಾಜ್ಯ ಕಾರ್ಯಕಾರಿ ಸಭೆ

ನಂದಿನಿ ಮೈಸೂರು

ಸಾವಿತ್ರಿಬಾಯಿ ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಸ್ಫೂರ್ತಿ ಶಾಸಕ ಜಿ.ಟಿ.ದೇವೇಗೌಡ

ಮಹಿಳೆಯೊಬ್ಬರು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂಬ ಭಾವನೆ ಹೊಂದಿದ್ದ ಸಮಾಜದಲ್ಲಿ ದಿಟ್ಟತನದಿಂದ ಶಿಕ್ಷಕ ತರಬೇತಿ ಪಡೆದು, ಎಲ್ಲರ ವಿರೋಧದ ನಡುವೆ ತಾವು ಅಂದುಕೊAಡಿದ್ದನ್ನು ಸಾಧಿಸಿದ ಗಟ್ಟಿಗಿತ್ತಿ ಸಾವಿತ್ರಿಬಾಯಿ ಫುಲೆ ಎಂದು ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯ ಪಟ್ಟರು.

ಅವರು ಇಂದು ಮೈಸೂರಿನ ಶ್ರೀರಾಂಪುರದಲ್ಲಿರುವ ಟಿ.ಎಸ್. ಕನ್ವೆನ್ಷನ್ ಹಾಲ್‌ನಲ್ಲಿ ಕರ್ನಾಟಕ ಸಾವಿತ್ರಬಾಯಿಫುಲೆ ಶೀಕ್ಷಕಿಯರ ಸಂಘದವತಿಯಿAದ ನಡೆದ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಮತ್ತು ಸಾವಿತ್ರಿಬಾಯಿಫುಲೆ ವಿಚಾರ ಸಂಕೀರ್ಣ ಮತ್ತು ರಾಜ್ಯ ಕಾರ್ಯಕಾರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಾವಿತ್ರಿಬಾಯಿ ಫುಲೆ ಅವರು ಭಾರತದ ಮೊಟ್ಟಮೊದಲ ಶಿಕ್ಷಕಿ. ಆಧುನಿಕ ಶಿಕ್ಷಣದ ಜನನಿ. ಸಾಮಾಜಿಕ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಜೊತೆಗೆ ಸಾಹಿತಿ. ಮಹಾರಾಷ್ಟ್ರದಲ್ಲಿ ತರಬೇತಿ ಹೊಂದಿದ ಮೊದಲ ಶಿಕ್ಷಕಿ ಅವರು. ಮಹಿಳೆಯರು ಮನೆಯಿಂದ ಹೊರಬಂದು ಸಾಮಾಜಿಕ ಚಳವಳಿಯಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಿದ್ದ ಕಾಲದಲ್ಲಿ ಪತಿ ಜ್ಯೋತಿ ಬಾ ಫುಲೆ ಅವರ ಜೊತೆಗೂಡಿ ಹದಿನಾಲ್ಕು ಶಾಲೆಗಳನ್ನು ಸ್ಥಾಪಿಸಿದವರು.
ಸಾವಿತ್ರಿ ಬಾಯಿ ಪುಲೆರವರು ಪಾಠ ಮಾಡಲು ಶಾಲೆಗೆ ಹೊರಟಾಗ ಊರಿನ ಜನರು ಲೇವಡಿ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಕಲ್ಲು ತೂರುವುದು, ಸಗಣಿ ಎರಚುವುದು, ಮೈಮೇಲೆ ಕೆಸರು ಸುರಿಯುವುದು… ಒಂದೇ ಎರಡೇ ಕಿರುಕುಳ ಸಹಿಸಿಕೊಂಡು ಕೈಚೀಲದಲ್ಲಿ ಇನ್ನೊಂದು ಸೀರೆ ಇಟ್ಟುಕೊಂಡು ಮಕ್ಕಳು ಬರುವ ಮೊದಲೇ ಶಾಲೆಗೆ ಹೋಗಿ ಸೀರೆ ಬದಲಾಯಿಸಿ ಪಾಠ ಮಾಡಲು ಸಿದ್ಧರಾಗುತ್ತಿದ್ದರು. ಅವರ ಈ ಎಲ್ಲಾ ಹೋರಾಟದಲ್ಲೂ ಭುಜಕ್ಕೆ ಭುಜ ಕೊಟ್ಟು ನಿಂತವರು ಪತಿ ಜ್ಯೊತಿಬಾ ಅವರು ಎಂದರು.
ಸಾವಿತ್ರಿಬಾಯಿ ಫುಲೆ ರವರು ಎಂಟನೆ ವಯಸ್ಸಿನಲ್ಲಿ ಜ್ಯೋತಿ ಬಾ ಪುಲೆರವರನ್ನು ವಿವಾಹವಾದರು. ಮನೆಯೇ ಮೊದಲ ಪಾಠಶಾಲೆ ಎಂಬAತೆ ಸಾವಿತ್ರಿಬಾಯಿ ಫುಲೆ ಅವರಿಗೆ ಪತಿಯೇ ಮೊದಲ ಗುರು. ೧೮೪೭ರಲ್ಲಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದಾಗ ಸಾವಿತ್ರಿಬಾಯಿ ಫುಲೆ ಅವರಿಗೆ ಹದಿನೇಳು ವರ್ಷ. ಭಿಡೆಯವರ ಮನೆಯಲ್ಲಿ ಆರಂಭವಾದ ಕನ್ಯಾಶಾಲೆಯ ಪ್ರಧಾನ ಶಿಕ್ಷಕಿ ಅವರಾಗಿದ್ದರು.
೧೮೪೮ರಿಂದ ೧೮೫೨ರ ಅವಧಿಯಲ್ಲಿ ೧೪ ಶಾಲೆಗಳನ್ನು ದಂಪತಿಗಳು ತೆರೆದರು. ಆಡಳಿತದ ಸಂಪೂರ್ಣ ಜವಾಬ್ದಾರಿ ಸಾವಿತ್ರಿ ಅವರದು. ಬ್ರಿಟಿಷ್ ಸರ್ಕಾರ ಅವರ ಕಾರ್ಯವನ್ನು ಮೆಚ್ಚಿ ಭಾರತದ ಮೊದಲ ಶಿಕ್ಷಕಿ ಎಂಬ ಮನ್ನಣೆ ನೀಡಿತು. ಸ್ತಿçÃಯರು ಸಹ ಪುರುಷರಂತೆ ಶಿಕ್ಷಣ ಪಡೆಯಬೇಕು ಎಂಬುದು ಈ ದಂಪತಿಗಳ ಹಂಬಲವಾಗಿತ್ತು. ಸಮಾಜಕ್ಕೆ ಶಿಕ್ಷಕಿಯಾದವರು ಸಾವಿತ್ರಿಬಾಯಿ. ಬಾಲ್ಯವಿವಾಹ, ಸತಿ ಸಹಗಮನ, ವಿಧವೆಯರಿಗೆ ಕೇಶಮುಂಡನ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ ನಡೆಸಿದ ಅವರು, ಮಹಿಳೆಯರಿಗಾಗಿಯೇ ಶಾಲೆಗಳು, ಅಬಲಾಶ್ರಮಗಳನ್ನು ಸ್ಥಾಪಿಸಿದರು.
ಜ್ಯೋತಿಬಾ ಫುಲೆ ಅವರ ತತ್ವ, ಪ್ರಗತಿಪರ ದೃಷ್ಟಿಕೋನವನ್ನು ತಮ್ಮದಾಗಿಸಿಕೊಂಡು ಜೀವನಪೂರ್ತಿ ಪತಿಗೆ ಬೆಂಗಾವಲಾಗಿ ನಿಂತರು. ಇಬ್ಬರೂ ಪರಸ್ಪರರ ಭಾವನೆಗಳನ್ನು ಗೌರವಿಸುತ್ತಲೇ ತಾವು ಅಂದುಕೊAಡಿದ್ದನ್ನು ಸಾಧಿಸುತ್ತಾ ಹೋದರು. ಮಕ್ಕಳಿರದ ಈ ದಂಪತಿಗಳು ವಿಧವೆಯ ಮಗ ಯಶವಂತನನ್ನು ದತ್ತು ತೆಗೆದುಕೊಂಡರು.
೧೮೭೩ ರಲ್ಲಿ ಅನಾಥ ಮಕ್ಕಳಿಗೆ ಶಿಶುಕೇಂದ್ರ ತೆರೆಯುವುದರ ಜೊತೆಗೆ ವಿಧವೆಯರಿಗೆ ಹುಟ್ಟಿದ ಮಕ್ಕಳಿಗೆ ಭಿನ್ನವಾದ ಶಿಶುಕೇಂದ್ರಗಳನ್ನು ಪ್ರಾರಂಭಿಸಿ ಅವರಿಗೂ ಬದುಕು ಕಟ್ಟಿಕೊಟ್ಟರು. ೧೫೦ ವರ್ಷಗಳ ಹಿಂದೆಯೇ ಶಾಲೆಯನ್ನು ತೊರೆಯದ ವಿದ್ಯಾರ್ಥಿಗಳಿಗೆ ಸ್ಟೈಪೆಂಡ್ ಕೊಡುವ ಯೋಜನೆ ಆರಂಭಿಸಿದರು.
ಸತ್ಯಶೋಧಕ ಸಮಾಜದ ಅಧ್ಯಕ್ಷೆಯಾದ ಸಾವಿತ್ರಿಯವರು ಪೂಜಾರಿಗಳಿಲ್ಲದೆ ವಿವಾಹಗಳನ್ನು ನಡೆಸಿ ಕ್ರಾಂತಿಗೆ ಮುನ್ನುಡಿ ಬರೆದರು. ೧೮೪೮ರಲ್ಲಿ ಸಮಾಜದ ತಳ ವರ್ಗದ ಹೆಣ್ಣುಮಕ್ಕಳಿಗಾಗಿ ಶಾಲೆ, ೧೮೫೫ರಲ್ಲಿ ಕೂಲಿ ಕಾರ್ಮಿಕರಿಗಾಗಿ ರಾತ್ರಿ ಪಾಳಿ ಶಾಲೆ, ೧೮೭೮ರಲ್ಲಿ ದಲಿತರಿಗಾಗಿ ಕುಡಿಯುವ ನೀರಿನ ಟ್ಯಾಂಕ್ ಸ್ಥಾಪನೆ.. ಹೀಗೆ ಸಮಾಜಮುಖಿಯಾದ ಹತ್ತಾರು ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ಸಾವಿತ್ರಿಬಾಯಿ.
ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಲು ಇವರ ಕೊಡುಗೆ ದೊಡ್ಡದು. ಸಾವಿತ್ರಿಯವರು ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದರು. ೧೮೫೪ರಲ್ಲಿ ಕಾವ್ಯ ಫ್ಮಲೆ (ಕಾವ್ಯ ಅರಳಿದೆ) ಕವನ ಸಂಕಲನದ ಮೂಲಕ ೧೯ನೇ ಶತಮಾನದ ಸಮಾಜವನ್ನು ಚಿತ್ರಿಸುವ ಪ್ರಯತ್ನ ಮಾಡಿದರು. ೧೮೯೧ರಲ್ಲಿ ಭವನ ಕಾಶಿ ಸುಬೋಧ ರತ್ನಾಕರ (ಅಪ್ಪಟ ಮುತ್ತುಗಳ ಸಾಗರ) ಜ್ಯೋತಿಬಾ ಅವರನ್ನು ಒಳಗೊಂಡು ಬರೆದ ಆತ್ಮಕತೆ, ೧೮೯೨ರಲ್ಲಿ ಜ್ಯೋತಿಬಾ ಅವರ ಭಾಷಣಗಳ ಸಂಪಾದಿತ ಕೃತಿ ಹಾಗೂ ಕಜ್ರ್ (ಸಾಲ) ಸಾವಿತ್ರಿ ಬಾಯಿಯವರ ಸಾಹಿತ್ಯ ರಚನೆಯಿಂದ ಹೊರಹೊಮ್ಮಿದ ಸಾಮಾಜಿಕ ಕೃತಿಗಳು.
ಪಶ್ಚಿಮ ಮಹಾರಾಷ್ಟ್ರದ ಕ್ಷಾಮಪೀಡಿತ ಪ್ರದೇಶಗಳಲ್ಲಿ ಎರಡು ವರ್ಷಗಳ ಕಾಲ ಸಾವಿತ್ರಿಬಾಯಿ ಕಾರ್ಯನಿರ್ವಹಿಸಿದರು. ೧೮೯೭ರ ಮಾಚ್ರ್ ೧೦ರಂದು ಪ್ಲೇಗ್‌ಪೀಡಿತ ರೋಗಿಗಳ ಸೇವೆ ಮಾಡುತ್ತಲೇ ಸ್ವತಃ ಆ ರೋಗಕ್ಕೆ ಬಲಿಯಾದರು. ಸಾವಿತ್ರಿ ಬಾಯಿ ಫುಲೆ ನಮ್ಮೆಲ್ಲರಿಗೂ ಆದರ್ಶ ತೋರಿದ ಧೀಮಂತ ಮಹಿಳೆ.
ಅವರಿದ್ದ ಕಾಲ, ಅವರು ಎದುರಿಸಿದ ಸವಾಲುಗಳು, ಅವರು ಮಾಡಿದ ಕಾರ್ಯ ಎಲ್ಲವನ್ನೂ ಒಮ್ಮೆ ನೆನಪಿಸಿಕೊಂಡರೆ ಅವರಿಗೆ ತಲೆಬಾಗಿ ನಮಸ್ಕರಿಸಬೇಕು ಎಂಬ ಭಾವನೆ ಮೂಡುವುದು ಅತ್ಯಂತ ಸಹಜ. ಸಾವಿತ್ರಿಬಾಯಿ ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಸ್ಫೂರ್ತಿ ತುಂಬಲಿ ಎಂಬುದು ನನ್ನ ಆಶಯ. ಆ ಮಹಾನ್ ಚೇತನಕ್ಕೆ ನನ್ನ ಪ್ರಣಾಮಗಳು.

ಸಮಾರಂಭದಲ್ಲಿ ಉಪ ನಿರ್ದೇಶಕರಾದ ಜವರೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಗೋವಿಂದರಾಜು, ರಾಷ್ಟಿçÃಯ ಅಧ್ಯಕ್ಷರಾದ ಡಾ. ಲತಾ ಎಸ್. ಮುಳ್ಳೂರು, ಜಿಲ್ಲಾಧ್ಯಕ್ಷರಾದ ಸರಸ್ವತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರಕಾಶ್, ಮಹೇಶ್, ಮಹದೇವ್, ರವಿಪ್ರಸನ್ನ, ರವಿಪ್ರಸನ್ನ, ಶಿವಮೂರ್ತಿ ಹಾಗೂ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *