ಎಚ್ ಡಿ ಕೋಟೆ :17 ಜನವರಿ 2022
ನಂದಿನಿ ಮೈಸೂರು
ಇದ್ದ ಹಾಡಿಯಿಂದ ಮತ್ತೊಂದು ಹಾಡಿಗೆ ಕಳಿಸಿದ್ರು.ಎಲ್ಲಾ ಸೌಲಭ್ಯ ಕೊಡ್ತೀವಿ ಅಂತ ವಾಸಕ್ಕೆ ಮನೆ ಕೊಟ್ರು.ಕೊಟ್ಟ ಮನೆಗಳು ಶಿಥಿಲಗೊಂಡಿವೆ.ಹೊಟ್ಟೆಪಾಡಿಗಾಗಿ ಒಂದಿಷ್ಟು ಜಮೀನು ಕೊಟ್ರು. ಉಳುಮೆಗೆ ಯೋಗ್ಯವಿಲ್ಲದ ಜಮೀನು ನೀಡಿದ್ರು.18 ವರ್ಷ ತುಂಬಿದವರಿಗೆ 10 ಲಕ್ಷ ಪ್ಯಾಕೇಜ್ ಕೊಡ್ತೀವಿ ಅಂದ್ರೂ 10 ವರ್ಷಗಳಾದ್ರೂ ಕೊಟ್ಟ ಭರವಸೆ ಈಡೇರಲಿಲ್ಲ. ನಮ್ಮ ಹಾಡಿಗೆ ನಾವು ಬಂದ್ರೇ ಅರಣ್ಯ ಅಧಿಕಾರಿಗಳು ಮಕ್ಕಳಿಗೆ ತಿನ್ನಿಸೋ ಅನ್ನ ಕಿತ್ತುಕೊಂಡು ದೌರ್ಜನ್ಯ ಮಾಡ್ತೀದ್ದಾರೆ.ನಮ್ಮ ಬೇಡಿಕೆ ಈಡೇರಲಿಲ್ಲ ಅಂದ್ರೇ ಸಾಮೂಹಿಕ ಆತ್ಮಹತ್ಯೆ ಮಾಡ್ಕೊಳ್ಳುತ್ತೇವೆ ಅಂತ ಹಾಡಿ ಜನ ರೊಚ್ಚಿಗೆದ್ದಿದ್ದ ದೃಶ್ಯ ಕಂಡು ಬಂತು ಅಷ್ಟಕ್ಕೂ ಹಾಡಿಯ ಜನರ ಗೋಳೆನೂ ಅಂತ ಹೇಳ್ತೀವಿ ಬನ್ನಿ.
ಹೌದು ಲಕ್ಕಪಟ್ಟಣದಿಂದ
ಗಂಟುಮೂಟೆ ಕಟ್ಟಿಕೊಂಡು ಬಂದ ಸುಮಾರು 60 ಕ್ಕೂ ಹೆಚ್ಚು ಹಾಡಿ ನಿವಾಸಿಗಳು ಬಹುಪುರ
ಬೋಗಾಪುರ ಹಾಡಿಗೆ ಆಗಮಿಸುತ್ತಿದ್ದಂತೆ
ಅರಣ್ಯ ಇಲಾಖೆ ಅಧಿಕಾರಿಗಳು ತಡೆ ಹಿಡಿದಿದ್ರು.
ನಾವು ಹಾಡಿ ಒಳಗೆ ಹೋಗಬೇಕು ಬಿಡಿ ಎಂದು ಅರಣ್ಯ ಅಧಿಕಾರಿಗಳ ಜೊತೆ ಹಾಡಿ ಜನ ಮಾತಿನ ಚಕಮಕಿ ನಡೆಸಿದ್ರು. ಈ ವಾಗ್ವಾದಕ್ಕೆ ಕಾರಣವಾಗಿದ್ದು ಸರ್ಕಾರ ಕೊಟ್ಟ ಭರವಸೆ ಈಡೇರಿಸದೇ ಇರೋದು.
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೋಗಾಪುರ ಹಾಡಿ ನಿವಾಸಿಗಳು 10 ವರ್ಷಗಳ ನಂತರ ಸ್ವಸ್ಥಾನಕ್ಕೆ ಹಿಂದಿರುಗಿದ್ದಾರೆ.ಮೂಲ
ಸೌಲಭ್ಯಗಳನ್ನ ಒದಗಿಸಿದರೆ ಹಿಂದಿರುಗುತ್ತೇವೆ. ಇಲ್ಲದಿದ್ದಲ್ಲಿ ಇದೇ ಜಾಗದಲ್ಲಿ ಠಿಕಾಣೆ ಹೂಡುತ್ತೇವೆ ಎಂದ ಕ್ಷಣ ಅರಣ್ಯಾಧಿಕಾರಿಗಳು ಕಕ್ಕಾಭಿಕ್ಕಿಯಾಗಿದ್ದಾರೆ.
2010-11 ರ ಸಾಲಿನಲ್ಲಿ ಬೋಗಾಪುರ ಹಾಡಿ ಜನಕ್ಕೆ ಪುನರ್ವಸತಿ ಕಲ್ಪಿಸುವುದಾಗಿ ಭರವಸೆ ಕೊಟ್ಟ ಸರ್ಕಾರ ಸುಮಾರು 40 ಕ್ಕೂ ಹೆಚ್ಚು ಕುಟುಂಬಗಳನ್ನ ಎತ್ತಂಗಡಿ ಮಾಡಿಸಿತು.ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಲಕ್ಕಪಟ್ಟಣಕ್ಕೆ ಸ್ಥಳಾಂತರಿಸಲಾಯಿತು.ಈ ವೇಳೆ ಸರ್ಕಾರ ನೀಡಿದ ಭರವಸೆಗಳೆಲ್ಲಾ ಕೇವಲ ಭರವಸೆಯಾಗೇ ಉಳಿಯಿತು.
ಸರ್ಕಾರ ಕೊಟ್ಟ ಭರವಸೆ ಈಡೇರಿದರೆ ಲಕ್ಕಪಟ್ಟಣಕ್ಕೆ ಹೋಗ್ತೀವಿ ಇಲ್ಲದಿದ್ರೆ ಬೋಗಾಪುರ ಹಾಡಿಯಲ್ಲೇ ಇರ್ತೀವಿ. ಹಾಗೊಂದು ವೇಳೆ ಬಲವಂತ ಮಾಡಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.
ಹಾಡಿ ಜನರ ಸಾಮೂಹಿಕ ನಿರ್ಧಾರಕ್ಕೆ ಸರ್ಕಾರ ಹೆದರ ಹಾಡಿ ಜನರಿಗೆ ಕೊಟ್ಟ ಮಾತನಂತೆ ಸರ್ಕಾರ ಸೌಲಭ್ಯ ನೀಡುತ್ತಾ ಕಾದಷ್ಟೇ ನೋಡಬೇಕಿದೆ.
ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು