ನಂದಿನಿ ಮೈಸೂರು
ಸುತ್ತೂರು: ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಂಡು
ಉತ್ತಮ ಪ್ರಜೆಯಾಗಲು ಸಂಸ್ಕೃತ ಪಾಠ ಮುಖ್ಯ ಪಾತ್ರ ಎಂದು ಸುತ್ತೂರು ಶ್ರೀ ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ತಿಳಿಸಿದರು.
ಸುತ್ತೂರು ಶ್ರೀ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘ,ರಾಜ್ಯ ಮಟ್ಟದ ಸಂಸ್ಕೃತ
ಶೈಕ್ಷಣಿಕ ಸಮ್ಮೇಳನ ಹಾಗೂ
ವಾರ್ಷಿಕ ಮಹಾ ಅಧಿವೇಶ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತ ಭಾಷೆಗಳ ಕಲಿಕೆ ಶಾಲೆಗಳು ಹೆಚ್ಚು ತೆರೆಯಬೇಕಾಗಿದೆ ಹಾಗೂ ಕಲಿಸಿ ಕಲಿಸುವ ಶಿಕ್ಷಕರ ಪಾತ್ರ ಮುಖ್ಯವಾಗಿದೆ .ವಿದ್ಯಾರ್ಥಿಗಳು ಉತ್ತಮ ಬದುಕು ರೂಪಿಸಿಕೊಳ್ಳಲು ಸಂಸ್ಕೃತ ಪಾಠಶಾಲೆ ಅಗತ್ಯ .
ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೂ ಸಂಸ್ಕೃತ ಬಗ್ಗೆ ಅವರಿಗೆ ಬಹಳ ಆಸಕ್ತಿ ಇದೆ ಎಂದು ಸಮಾರಂಭದಲ್ಲಿ ಸಿದ್ದರಾಮಯ್ಯರವರನ್ನು ಸುತ್ತೂರು ಶ್ರೀಗಳು ನೆನಪಿಸಿಕೊಂಡರು.
ಈ ಸಮಾರಂಭದಲ್ಲಿ. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಕುಲಪತಿಗಳಾದ ಡಾ. ಎಸ್ ಅಹಲ್ಯಾ ಅವರು ಮಾತನಾಡುತ್ತಾ ಇಡೀ ಭಾರತದಲ್ಲಿ
ಸಂಸ್ಕೃತ ಪಾಠಶಾಲೆಗಳು ಉಳಿಯಲು ಹಾಗೂ ಬೆಳೆಯಲು. ಮಠ ಮಾನ್ಯಗಳ ಪಾತ್ರ ಮುಖ್ಯವಾಗಿದೆ. ರಾಜ್ಯದ ಎಲ್ಲಾ ಶಾಲೆಗಳನ್ನು ಸಂಸ್ಕೃತ ಪಾಠ ಶಾಲೆ ತೆರೆಯಲು ಹಾಗೂ ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಸಂಸ್ಕೃತ ಪಾಠ ಬೇಕಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ. ಸಂಸ್ಕೃತ ಪಾಠ ಶಾಲೆಯ ನಿವೃತ್ತಿ ಅಧಿಕಾರಿಗಳಿಗೆ ಸುತ್ತೂರು ಶ್ರೀಗಳು ಸನ್ಮಾನಿಸಿ ಗೌರವಿಸಿದರು.
ಈ ಸಮಾರಂಭದಲ್ಲಿ. ಸಂಸ್ಕೃತ ನಿರ್ದೇಶಕರಾದ ಪ್ರೋ. ಸಿ ಪಾಲಯ್ಯ, ಎಸ್ ಕುಮಾರ್ , ವಿದ್ವಾನ್ ಚಂದ್ರಶೇಖರಯ್ಯ
ವಿದ್ವಾನ್ ಗಂಗಾಧರಯ್ಯ, ವಿದ್ವಾನ್ ಜಿ ಪರಶಿವಮೂರ್ತಿ. ನಂಜುಂಡಯ್ಯ,ನಿರಂಜನ ಮೂರ್ತಿ, ಮಹದೇವಯ್ಯ. ನಾಗೇಂದ್ರ. ರಂಗರಾಜು. ಮಹದೇವ ಶಾಸ್ತ್ರಿಗಳು ಸೇರಿದಂತೆ
ರಾಜ್ಯದ ಎಲ್ಲಾ ಜಿಲ್ಲೆಯ ಸಂಸ್ಕೃತ ಶಾಲೆಯ ಮುಖಂಡರು, ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.