ಕರ್ನಾಟಕ ಸಂಸ್ಕೃತ ವಿವಿ ದತ್ತಿ ನಿಧಿಗೆ ದೇಣಿಗೆ

ನಂದಿನಿ ಮೈಸೂರು

ಕರ್ನಾಟಕ ಸಂಸ್ಕೃತ ವಿವಿ ದತ್ತಿ ನಿಧಿಗೆ ದೇಣಿಗೆ

ಮೈಸೂರು: ಮೈಸೂರಿನ ಸತ್ಯವತಿ ವಿಜಯ ರಾಘವಾಚಾರ್ ಛಾರಿಟಬಲ್ ಟ್ರಸ್ಟ್ ವತಿಯಿಂದ, ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ದತ್ತಿ ನಿಧಿಗೆ ೨.೫ಲಕ್ಷ ಹಣವನ್ನು ದೇಣಿಗೆ ರೂಪದಲ್ಲಿ ನೀಡ ಲಾಯಿತು.

ಕನ್ನಡ ಸೇವೆ ದೇವರ ಸೇವೆ ಎಂಬ ಧ್ಯೇಯದೊಂದಿಗೆ ಹಲವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ, ಎಂದೂ ಎಲ್ಲಿಯೂ ಗುರುತಿಸಿಕೊಳ್ಳದೇ ಎಲೆಮರೆ ಕಾಯಿಯಂತೆ ಸಮಾಜಮುಖಿ ಚಟುವಟಿಕೆಗಳಲ್ಲಿ ಕಾರ್ಯಪ್ರವೃತ್ತರಾಗಿರುವ ಸದಾ ಡಾ.ಎ.ಪುಷ್ಪ ಅಯ್ಯಂಗಾರ್ ಮತ್ತು ಎ.ವೈದೇಹಿ ಅಯ್ಯಂಗಾರ್ ಸಹೋದರಿಯರ ನೇತೃತ್ವದಲ್ಲಿ ಬುಧವಾರ ದೇಣಿಗೆಯ ಚೆಕ್ ಅನ್ನು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಎಸ್.ಅಹಲ್ಯಾ ಅವರಿಗೆ ಮೈಸೂರಿನ ಸರಸ್ವತಿಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಹಸ್ತಾಂತರಿಸಲಾಯಿತು.

ಈ ವೇಳೆ ಡಾ.ಎ.ಪುಷ್ಪ ಅಯ್ಯಂ ಗಾರ್ ಮತ್ತು ಎ.ವೈದೇಹಿ ಅಯ್ಯಂ ಗಾರ್ ಅವರು ಮಾತನಾಡಿ, ಕನ್ನಡ ಸೇವೆಗೆ ನಮ್ಮ ಜೀವನ ಮುಡಿಪಾಗಿದೆ. ಈವರೆಗೂ ನಮ್ಮ ತಂದೆ-ತಾಯಿ ಸತ್ಯವತಿ ಹಾಗೂ ವಿಜಯ ರಾಘ ವಾಚಾರ್ ಅವರ ಹೆಸರಿನಲ್ಲಿ ಇಂತಹ ಸೇವೆಗಳನ್ನು ಮಾಡಿಕೊಂಡು ಬರಲಾ ಗುತ್ತಿದೆ.ಅದರಲ್ಲೂ ಆಹಾರ, ಅಕ್ಷರ ಮತ್ತು ಆರೋಗ್ಯಕ್ಕೆ ಉತ್ತೇಜನ ನೀಡುವುದೇ ನಮ್ಮ ಮೂಲ ಉದ್ದೇಶವಾಗಿದ್ದು, ಯಾವುದೇ ಜಾತಿ-ಮತ ಬೇಧವಿಲ್ಲದೇ ಉತ್ತೇಜನ ನೀಡಿ, ಮುಂದಿನ ದಿನಗಳಲ್ಲೂ ಎಲ್ಲಾ ಸಂಘ ಸಂಸ್ಥೆಗಳಿಗೂ ಈ ಕಾರ್ಯವನ್ನು ವಿಸ್ತರಿಸಿಕೊಂಡು ಮುಂದುವರೆಸಿಕೊಂಡು ಹೋಗುವುದಾಗಿ ನುಡಿದರು.

ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾ ಲಯದ ಉಪಕುಲಪತಿ ಡಾ.ಎಸ್.ಅಹಲ್ಯಾ ಅವರು ಮಾತನಾಡಿ, ಈ ಇಳಿ ವಯಸ್ಸಿನಲ್ಲಿಯೂ ಇವರ ಕನ್ನಡ ಪ್ರೇಮ ಹಾಗೂ ನಿಸ್ವಾರ್ಥ ಸೇವೆ ನಿಜಕ್ಕೂ ಯುವ ಪೀಳಿಗೆಗೆ ಮಾರ್ಗದರ್ಶನವಾಗಿದೆ ಎಂದರಲ್ಲದೇ, ಇವರಿಗೆ ಅಗತ್ಯವಿರುವ ಎಲ್ಲಾ ಸಹಕಾರಗಳನ್ನು ನೀಡುವುದಾಗಿ ಭರವಸೆ ನೀಡಿ, ಮೆಚ್ಚುಗೆಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *