ಸಾಲುಮರದ ತಿಮ್ಮಕ್ಕ ರವರ ನಿಧನಕ್ಕೆ ಡಾ.ಈ.ಸಿ.ನಿಂಗರಾಜ್ ಗೌಡ ಸಂತಾಪ.

ನಂದಿನಿ ಮನುಪ್ರಸಾದ್ ನಾಯಕ್

ಸಾಲುಮರದ ತಿಮ್ಮಕ್ಕ ರವರ ನಿಧನಕ್ಕೆ ಡಾ.ಈ.ಸಿ.ನಿಂಗರಾಜ್ ಗೌಡ ಸಂತಾಪ.

ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ರವರು ಸಂತಾಪ ಸೂಚಿಸಿದ್ದಾರೆ.

ಕಳೆದ 4 ವರ್ಷಗಳ ಹಿಂದೆ ಮೈಸೂರಿನ ಹೆಬ್ಬಾಳದ ಹತ್ತಿರ ಇರುವ ಕೆ.ಬಿ.ಎಲ್. ಸಿಲಿಕಾನ್ ಸಿಟೆ ಲೇಔಟ್ ನಲ್ಲೀರುವ ಸುಮಾರು 5 ಎಕರೆಯ ಉಧ್ಯಾನವನಕ್ಕೆ ಸಾಲು ಮರದ ತಿಮ್ಮಕ್ಕರವರಿಂದಲೇ ಶ್ರೀಗಂಧವೂ ಸೇರಿದಂತೆ ನೂರಾರು ಗಿಡ ನೆಡುಸುವುದರ ಮೂಲಕ “ಸಾಲು ಮರದ ತಿಮ್ಮಕ್ಕ ಪಾರ್ಕ್ “ ಅನ್ನೂ ರೋಟರಿ ಮೈಸೂರು ಸೌತ್ -ಈಸ್ಟ್ ಸಹಯೋಗದೊಂದಿಗೆ ವ್ಯವಸ್ಥೀವಾಗಿ ನಿರ್ವಹಿಸಲಾಗುತ್ತೀದೆ.

ಪರಿಸರ ಸಂರಕ್ಷಣೆಗೆ ತಮ್ಮ ಸಂಪೂರ್ಣ ಬದುಕನ್ನೇ ಅರ್ಪಿಸಿದ ತಿಮ್ಮಕ್ಕ ಅವರ ಅಪಾರ ಸೇವೆ ಸದಾ ಸ್ಮರಣೀಯ.
ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಡಾ.ಈ.ಸಿ.ನಿಂಗರಾಜ್ ಗೌಡ ರವರು ಪ್ರಾರ್ಥಿಸಿದ್ದಾರೆ.

ಸಾಲುಮರದ ತಿಮ್ಮಕ್ಕ (Saalumarada Thimmakka) ಅವರು ಕರ್ನಾಟಕದ ಪ್ರಸಿದ್ಧ ಪರಿಸರ ಸಂರಕ್ಷಕಿ, “ವೃಕ್ಷ ಮಾತೆ” ಎಂದೂ ಕರೆಯಲ್ಪಡುತ್ತೀದ್ದರು.
ಇವರು ಕೊಡಗ, ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕಿನ ಹೋಸೂರು ಗ್ರಾಮದಲ್ಲಿ ಜನಿಸಿದರು. 

ಅವರು ಯಾವುದೇ ಅಧಿಕವಾದ ಶಿಕ್ಷಣ ಪಡೆದಿರಲಿಲ್ಲ ಮತ್ತು ಬಾಲ್ಯದಲ್ಲಿ ದನಕಾಯುವ ಕೆಲಸ ಮಾಡಿದ್ದರು. 
ಮದುವೆಯಾದ ನಂತರ ರಸ್ತೆಯ ಬದಿಯ ಆಲದ ಸಸಿಗಳನ್ನು ನೆಟ್ಟು, ಅವುಗಳನ್ನು “ಮಕ್ಕಳಂತೆ” ಪೋಷಿಸಲು ಆರಂಭಿಸಿದರು. 
ಮೊದಲನೇ ವರ್ಷದ ಯಶಸ್ಸಿನ ನಂತರ, ತಮ್ಮ ಜೀವನದ ಕ್ಷೀಣ ಆದಾಯವನ್ನು ಸಾಲೂ ಮರಗಳ ನೆಡುವುದು, ನೀರುಣಿಸುವು, ಪಾಲನೆ ಮಾಡುವುದಕ್ಕೆ ಬಳಿಸಿದ್ದು, ದನ ಕಾಯುವವರಾಗಿದ್ದ ಗಂಡ–ಹೆಂಡತಿ ಇಬ್ಬರೂ ಈ ಕಾರ್ಯದಲ್ಲಿ ಸಕ್ರಿಯವಾಗಿದ್ದರು. 

ಅವರು ಸುಮಾರು 385 ಆಲದ ಮರಗಳನ್ನು 4.5 ಕಿಮೀ ದೂರವಿದ್ದ ಹೆದ್ದಾರಿ ಬದಿಯಲ್ಲಿ ನೆಟ್ಟು, ಬೆಳೆಸಿದರು. ಇದಲ್ಲದೆ 8000ಕ್ಕೂ ಹೆಚ್ಚು ಸಸಿಗಳನ್ನು ಅವರ ಜೀವನದಲ್ಲಿ ನೆಟ್ಟು ಬೆಳೆಸಿದ್ದಾರೆ ಎಂದು ಕೂಡಾ ವರದಿಯಾಗಿದ್ದು, ಮರಗಳ ನಿರ್ವಹಣೆಯನ್ನು ಈಗ ರಾಜ್ಯ ಸರ್ಕಾರವು ಸ್ವೀಕರಿಸಿರುವುದು ಗಮನಾರ್ಹವಾಗಿದೆ. 2019ರಲ್ಲಿ ಅವರಿಗೆ ಪದ್ಮಶ್ರೀ (Padma Shri) ಪ್ರಶಸ್ತಿ ದೊರೆತಿದೆ.  2016ರಲ್ಲಿ BBC “World’s Most Influential Women”ಪಟ್ಟಿಯಲ್ಲಿ ಅವರಿಗೆ ಸ್ಥಾನಲಭಿಸಿತ್ತು. 

“ಮಕ್ಕಳಿಲ್ಲದ ಕಾರಣಕ್ಕೆ ಮರಗಳನ್ನು ನೆಟ್ಟಿದ್ದೇನೆ; ಇವು ನನ್ನ ಮಕ್ಕಳು” ಎಂದು ಸಾಲು ಮರದ ತಿಮ್ಮಕ್ಕ ಅವರು ಹೇಳಿದ್ದಾರೆ. ಮರಗಳು ಜೀವಂತವಾಗಿವೆ ಎಂಬ ಭಾವದಿಂದ, ಮರಗಳ ಮತ್ತು ಪ್ರಕೃತಿಯ conservación ಅವಶ್ಯಕತೆಯನ್ನು ತಮ್ಮ ಬದುಕಿನ ಮೂಲಕ ತೋರಿಸಿದರು.

 

Leave a Reply

Your email address will not be published. Required fields are marked *