ಮೈಸೂರು:30 ಏಪ್ರಿಲ್ 2022
ನಂದಿನಿ ಮೈಸೂರು
ಮೈಸೂರಿನ ಕೆ.ಆರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿಯಿಂದ ಸಂಗ್ರಹವಾದ ಹಣವನ್ನ
ಮೈಸೂರು ಜಿಲ್ಲಾ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿರವರಿಗೆ ಹಸ್ತಾಂತರಿಸಲಾಯಿತು.
ಮೈಸೂರಿನ ಜಲದರ್ಶಿನಿಯಲ್ಲಿ
ಕಾಂಗ್ರೆಸ್ ಯುವ ಮುಖಂಡ ನವೀನ್ ಕುಮಾರ್ ಅವರ ನೇತೃತ್ವದಲ್ಲಿ ನಡೆಸಲಾಗಿದ್ದ ಎಂಟು ಸಾವಿರಕ್ಕೂ ಅಧಿಕ ನೋಂದಣಿ ಹಣ 40 ಸಾವಿರ ರೂಗಳನ್ನು ಡಿಡಿ ಮೂಲಕ ಮೈಸೂರು ಜಿಲ್ಲಾ ನಗರ ಅಧ್ಯಕ್ಷ ಮೂರ್ತಿಯವರಿಗೆ ನೀಡಿದರು.
ಕಾಂಗ್ರೆಸ್ ಪಕ್ಷವೂ ಪಕ್ಷ ಸಂಘಟನೆಗಾಗಿ ಕಳೆದ ನವೆಂಬರ್ ನಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿತ್ತು.ಕಾಂಗ್ರೆಸ್ ಪಕ್ಷದ ಆದೇಶದ ಮೇರೆಗೆ
ಕರ್ನಾಟಕದಲ್ಲಿ 2000ಕ್ಕಿಂತಲೂ ಹೆಚ್ಚು ಸ್ಥಳಗಳಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಬೃಹತ್ ಅಭಿಯಾನ ನಡೆಯಿತು.
ಮೈಸೂರಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ನೋಂದಣಿ ಕಾರ್ಯ ಸುಗಮವಾಗಿ ನಡೆದಿದ್ದು ಕೆಆರ್ ಕ್ಷೇತ್ರ, ಎನ್ ಕ್ಷೇತ್ರ ಭಾಗದಲ್ಲಿ ಅತಿ ಹೆಚ್ಚು ಸದಸ್ಯತ್ವ ನೋಂದಣಿ ನಡೆದಿವೆ.ನೋಂದಣಿಯಿಂದ ಸಂಗ್ರಹವಾದ ಹಣವನ್ನು ನಗರಾಧ್ಯಕ್ಷ ಆರ್.ಮೂರ್ತಿರವರಿಗೆ ನೀಡಿದ್ದು,ಅವರ ಮೂಲಕ ಡಿ.ಕೆ.ಶಿವಕುಮಾರ್ ರವರಿಗೆ ಹಣ ತಲುಪಲಿದೆ.ಕೆ.ಆರ್.ಕ್ಷೇತ್ರದ ಜನ ಉತ್ಸಾಹದಿಂದ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್ ಕುಮಾರ್ ತಿಳಿಸಿದರು.
ಇದೇ ಸಂಧರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ರಾಜೇಶ್ , ಹರೀಶ್ ಮೊಗ್ಗಣ್ಣ , ಪವನ್ ಸಿದ್ದರಾಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.