ಸೆಪ್ಟೆಂಬರ್ ೧೬ ರಂದು ರಿಯಾ ಹಾರರ್, ಥ್ರಿಲ್ಲರ್, ಸಸ್ಪೆನ್ಸ್ ಕನ್ನಡ ಚಿತ್ರ ಬಿಡುಗಡೆ

 

ನಂದಿನಿ ಮೈಸೂರು

ಸೆಪ್ಟೆಂಬರ್ ೧೬ ರಂದು ರಿಯಾ ಹಾರರ್, ಥ್ರಿಲ್ಲರ್, ಸಸ್ಪೆನ್ಸ್ ಕನ್ನಡ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಕನ್ನಡ ಚಿತ್ರರಂಗದಲ್ಲಿ ಕವಿತಾ ಲಂಕೇಶ್ , ಸುಮನಾ ಕಿತ್ತೂರು , ಪ್ರಿಯಾಹಾಸನ್ , ರೂಪಾ ಅಯ್ಯರ್ , ರಿಶಿಕಾ ಶರ್ಮಾ ಹೀಗೆ ಕೆಲವೇ ಕೆಲವು ಮಹಿಳಾ ನಿರ್ದೇಶಕಿಯರಿದ್ದಾರೆ. ಈಗ ಅವರಸಾಲಿಗೆ ಮತ್ತೊಬ್ಬ ಮಹಿಳಾ ನಿರ್ದೇಶಕಿ ಸೇರ್ಪಡೆಯಾಗಿದ್ದಾರೆ . ಅವರೇ ವಿಜಯಾ ನರೇಶ್‌ . ಆಂದ್ರ ಪ್ರದೇಶ ಮೂಲದವರಾದ ಇವರು ಮೂಲತಃ ಶಿಕ್ಷಕಿಯಾಗಿದ್ದವರು . ಉತ್ತಮವಾದ ಕಥೆ ಸಿಕ್ಕರೆ ಚಿತ್ರವೊಂದನ್ನು ನಿರ್ದೇಶಿಸಬೇಕೆಂದು ಮೊದಲಿಂದಲೂ ಆಸೆ ಇಟ್ಟುಕೊಂಡಿದ್ದ ಇವರೀಗ ಹಾರರ್ ಕಂಟೆಂಟ್ ಇಟ್ಟುಕೊಂಡು ರಿಯಾ ಎನ್ನುವ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ . ಇದೊಂದು ಹಾರರ್ , ಸಸ್ಪೆನ್ಸ್ ಹಾಗೂ ಡ್ರಿಲ್ಲರ್ ಜೊತೆಗೆ ಸೆಂಟಿಮೆಂಟ್ ಕಥಾಹಂದರವುಳ್ಳ ಚಿತ್ರವಾಗಿದ್ದು , ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ . ತೆಲುಗು ಮಾತೃಭಾಷೆಯಾಗಿದ್ದರೂ ಸಹ ತಮ್ಮ ಮೊದಲ ಚಿತ್ರವನ್ನು ಕನ್ನಡದಲ್ಲಿಯೇ ನಿರ್ದೇಶಿಸಬೇಕೆಂಬುದು ವಿಜಯಾ ನರೇಶ್ ಅವರ ಆಸೆ . ಹಾಗಾಗಿ ತಾವೇ ಕಥೆ , ಚಿತ್ರಕಥೆ ಬರೆದು ರಿಯಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ . ವಿಜಯಾ ಅವರ ಪತಿ ಕನಿಗೊಂಡ ನರೇಶ್ ಅವರು ರಿಯಾ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಸಾಥ್ ನೀಡಿದ್ದಾರೆ . ರಿಯಾ ಒಂದು ಹಾರರ್ ಕಥಾಹಂದರ ಒಳಗೊಂಡ ಚಿತ್ರವಾಗಿದ್ದು , ಕಾರ್ತಿಕ್ ವರ್ಣೆಕರ್‌ ಹಾಗೂ ಸಾವಿತ್ರಿ, ಚಿತ್ರದ ನಾಯಕ , ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ . ಕೇವಲ ಹದಿನಾಲ್ಕು ಪಾತ್ರಗಳ ಸುತ್ತ ಒಂದೇ ಮನೆಯಲ್ಲಿ ಈ ಚಿತ್ರದ ಬಹುತೇಕ ಕಥೆ ನಡೆಯುತ್ತದೆ . ಚಿತ್ರಕ್ಕಾಗಿ ಆಡಿಷನ್ ನಡೆಸಿ , ಅದರಲ್ಲಿ ಪ್ರತಿಭಾವಂತ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಚಿತ್ರಕ್ಕೆ ಬಳಸಿಕೊಂಡಿದ್ದಾರೆ . ಈ ಚಿತ್ರದಲ್ಲಿ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ತಂತ್ರಜ್ಞರು ಹಾಗೂ ಕಲಾವಿದರು ಕನ್ನಡದವರೇ ಆಗಿರುವುದು ಚಿತ್ರದ ವಿಶೇಷ . ದುಬಾರೆ ಅರಣ್ಯದ ಬಳಿಯೇ ಈ ಚಿತ್ರಕ್ಕೆ ಹೆಚ್ಚಿನ ಭಾಗದ ಚಿತ್ರೀಕರಣವನ್ನು ನಡೆಸಲಾಗಿದೆ . ಈ ಚಿತ್ರದಲ್ಲಿ ರಿಯಾ ಎನ್ನುವ ಪಾತ್ರವನ್ನು ಮೈಸೂರಿನ ಬಾಲಕಿ ಅನನ್ಯ ವಿ.ಎಸ್ ನಿರ್ವಹಿಸಿದ್ದಾರೆ . ಅಲ್ಲದೆ ಚಿತ್ರದ ನಾಯಕ ಕಾರ್ತಿಕ್ ವರ್ಣೇಕರ್ ಕಾರ್ಯನಿರ್ವಹಿಸಿದ್ದಾರೆ . ಇನ್ನು ಈ ಚಿತ್ರದ ಎರಡು ಹಾಡುಗಳಿಗೆ ಬಿ.ಆರ್‌.ಹೇಮಂತ್ ಕುಮಾರ್ ಸಂಗೀತ ನೀಡಿದ್ದಾರೆ . ಎ.ಟಿ.ರವೀಶ ಹಿನ್ನೆಲೆಸಂಗೀತ ನೀಡಿದ್ದಾರೆ . ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್‌ ಹಾಗೂ ಹಾಡುಗಳು ಚಿತ್ರದ ಬಗ್ಗೆ ಸಾಕಷ್ಟು ಕಾತುರ ಹಾಗೂ ಕುತೂಹಲಗಳನ್ನು ಹುಟ್ಟು ಹಾಕಿವೆ . ಸುರೇಶ್ ಅಚ್ಚು ಅವರ ಛಾಯಾಗ್ರಹಣ ಹಾಗೂ ವೇಣುಗೋಪಾಲ್ ಅವರ ಸಹನಿರ್ದೇಶನ ಈ ಚಿತ್ರಕ್ಕಿದೆ . ಅನನ್ಯ ವಿ.ಎಸ್ , ವಿಕಾಸ್ , ವಿಲಾಸ್ ಕುಲಕರ್ಣಿ , ಸುಧೀರ್ , ರಣ್ಣೀರ್ , ಶ್ವೇತ , ರೋಹಿಣಿ , ರಾಜ್ ಉದಯ್ , ನಾಗಭೂಷಣ್ , ನಾಗರತ್ನ ಪ್ರಮುಖ ತಾರಾಬಳಗದಲ್ಲಿದ್ದಾರೆ.

Leave a Reply

Your email address will not be published. Required fields are marked *