ಮೈಸೂರು: 26 ಅಕ್ಟೋಬರ್ 2021
ನಂದಿನಿ
ಅಮ್ಮ ನಾನು ಶಾಲೆಗೆ ಹೋಗಿ ಬರ್ತ್ತೀನಮ್ಮ ಅಂತ ಮಕ್ಕಳು ಬರೋಬ್ಬರಿ ಎರಡು ವರ್ಷದ ನಂತರ ಪಠ್ಯ ಪುಸ್ತಕಗಳನ್ನ ಬ್ಯಾಗಿಗೆ ಹಾಕಿಕೊಂಡು ಶಾಲೆ ಕಡೆ ಹೋಗುತ್ತಿದ್ದಂತೆ ಕೆಲ ಶಾಲೆಯಲ್ಲಿ ಆರತಿ ಬೆಳಗಿ ಗುಲಾಬಿ ಹೂ ನೀಡಿ ಸ್ವಾಗತಿಸುತಿದ್ರೇ ಇಲ್ಲೊಂದು ಶಾಲೆಯಲ್ಲಿ ನದಿಯೊಂದು ಸ್ವಾಗತಿಸುತ್ತಿತ್ತು.ಅರೇ ಶಾಲೆಯಲ್ಲಿ ಮಕ್ಕಳಿಗಾಗಿ ನದಿಯೊಂದನ್ನ ನಿರ್ಮಿಸಿದ್ರಾ ಅಂದುಕೊಂಡ್ರಾ ನಿಮ್ಮ ಊಹೆ ತಪ್ಪು ಬಿಡಿ.ಶಾಲೆಯ ದುಸ್ಥಿತಿ ನೋಡಿದ್ರೇ ಅಯ್ಯೋ ಅನಿಸುತ್ತೆ ಒಮ್ಮೇ ನೀವೇ ನೋಡಿ ಸ್ವಾಮಿ.
ಮೈಸೂರಿನ ರಿಂಗ್ ರಸ್ತೆಯ ಕೂಗಳತೆಯ ದೂರದಲ್ಲಿರುವ ಚೋರನಹಳ್ಳಿ ಸರ್ಕಾರಿ ಶಾಲೆಯನ್ನ ಮುಖ್ಯಮಂತ್ರಿ ಯಾಗಿದ್ದ ಸಿದ್ದರಾಮಯ್ಯ ಅವರ ಅವಧಿಯಲ್ಲಿ ನಿವೃತ್ತ ಸೈನಿಕರ ಸಂಘದ ಸಿಎಸ್ ಆರ್ ನಿಧಿಯಲ್ಲಿ ನಿರ್ಮಿಸಲಾಗಿತ್ತು. ನಿನ್ನೆ ಬಿದ್ದ ಭಾರೀ ಮಳೆಗೆ ಜಲಾವೃತಗೊಂಡಿದ್ದು,
ಐದು ವರ್ಷಗಳ ಹಿಂದೆ ನಿರ್ಮಿಸಿದ ಸುಸಜ್ಜಿತ ಕಟ್ಟಡಗಳು ಸೋರಲಾರಂಭಿಸಿರುವುದು ಮಕ್ಕಳ ಶಾಲಾ ಪಾಠಕ್ಕೆ ತೊಂದರೆಯಾಗಿ ಪರಿಣಮಿಸಿದೆ.
ಚೋರನಹಳ್ಳಿ ಸರ್ಕಾರಿ ಶಾಲೆಯಲ್ಲಿ ೧ ರಿಂದ ೭ನೇ ತರಗತಿವರೆಗೆ ೧೧೦ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ಶಾಲಾ ಆವರಣದಲ್ಲಿ ಎಲ್ಲಾ ಕಟ್ಟಡಗಳು ಮಳೆ ನೀರಿಗೆ ಸೋರುತ್ತಿವೆ. ಒಟ್ಟು ೧೩ ಕಟ್ಟಗಳಿದ್ದು, ಇದರಲ್ಲಿ ಒಂದು ಕಟ್ಟಡ ಸಂಪೂರ್ಣ ಶಿಥಿಲಗೊಂಡು ಇಂದೋ ನಾಳೆಯೋ ಬೀಳುವ ಸ್ಥಿತಿಯಲಿದೆ.
ಉಳಿದ ಮೂರು ಕಟ್ಟಡಗಳಲ್ಲಿ ಹೆಂಚು ಹಾರಿ ನೀರು ನಿಂತು ಬಳಸಲು ಅಸಾಧ್ಯವಾದ ಸ್ಥಿತಿಯಿದೆ. ಉಳಿದ ಆರು ನೂತನ ಕಟ್ಟಡಗಳಲ್ಲಿ ಮೂರನ್ನು ಮೇಲ್ಛಾವಣಿ ದುರಸ್ತಿ ಮಾಡಿದಾಗಿಯೂ ಸೋರುತ್ತಿದೆ. ಇನ್ನೂ ಐದು ವರ್ಷಗಳ ಹಿಂದೆ ನಿರ್ಮಿಸಿದ ಮೂರು ಕಟ್ಟಡಗಳು ಸೋರುತ್ತಿರುವುದು ಶಾಲಾ ಕಟ್ಟಡ ಕಳಪೆ ಕಾಮಗಾರಿಯನ್ನು ಬಹಿರಂಗ ಪಡಿಸಿದೆ.
ಅಡುಗೆ ತಯಾರಿ ಕೊಠಡಿ, ಗ್ರಂಥಾಲಯ ಗಳ ಕಟ್ಟೆವೇ ಕುಸಿದಿದ್ದು, ಸಂಪೂರ್ಣ ಶಾಲೆ ಬಿದ್ದ ಜೋರು ಮಳೆಗೆ ಅವನತಿ ಹಾದಿ ಹಿಡಿದಿರುವುದು ಅಲ್ಲಿ ಅವ್ಯವಸ್ಥೆಗಳ ದರ್ಶನಕ್ಕೆ ಕಾರಣವಾದಂತಾಗಿದೆ.
ಇನ್ನೂ ಶಾಲಾ ಆವರಣದೊಳಗೆ ನೀರು ನುಗ್ಗಿ ಕೊಠಡಿಗಳು ಜಲಾವೃತಗೊಂಡಿದ್ದು, ಮಕ್ಕಳು ಕಲಿಯಲಾಗದೇ ಆವರಣದಲ್ಲಿಯೇ ನಿಂತು ನೋಡುವಂತೆ ಆಗಿದೆ. ಶಾಲೆಯತ್ತ ಮಕ್ಕಳನ್ನು ಕಳುಹಿಸಬೇಕೇ ಬೇಡವೇ ಎಂಬ ಸ್ಥಿತಿ ತಲುಪಿರುವ ಶಾಲೆಯತ್ತ ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸುವರೇ ಎಂಬುದನ್ನು ಕಾದು ನೋಡಬೇಕಿದೆ.