ಮೈಸೂರು:20 ಏಪ್ರಿಲ್ 2022
ನಂದಿನಿ ಮೈಸೂರು
2021 ರ ಪಿ.ಎಸ್.ಐ -545 ಆಯ್ಕೆ ಪ್ರಕ್ರಿಯೆಯಲ್ಲಿ ನಡೆದ ಅಕ್ರಮ ತನಿಖೆಗಾಗಿ ಹಾಗೂ ಮರುಪರೀಕ್ಷೆಗೆ ಒತ್ತಾಯಿಸಿ ಅಭ್ಯರ್ಥಿಗಳು
ಮೈಸೂರು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ
ನೊಂದ ಪ್ರಾಮಾಣಿಕ ಅಭ್ಯರ್ಥಿಗಳಾದ ಕಿರಣ್ ಕುಮಾರ್.ಎನ್,ತನುಜಾ,ನಂದಿನಿ, ರಘು,ಐಶ್ವರ್ಯ, ರಮೇಶ್,ಶಿವಕುಮಾರ್, ಪ್ರಸನ್ನ,ಪವನ್ ಕುಮಾರ್ .ಇ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ರವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರದ ಗೃಹ ಇಲಾಖೆಯವರು ದಿನಾಂಕ : 22.01.2021 ರಂದು 545 ಸಿವಿಲ್ ಪಿ.ಎಸ್.ಐ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿ ಅರ್ಜಿಗಳನ್ನು ಕರೆಯಲಾಗಿತ್ತು . ಸದರಿ ಅಧಿಸೂಚನೆಯ ರೀತ್ಯ ಸುಮಾರು 1,20,000 / – ವಿವಿಧ ವರ್ಗಗಳ ಅಭ್ಯರ್ಥಿಗಳು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಅರ್ಜಿಗಳನ್ನು ಸಲ್ಲಿಸಿದ್ದರು . ಅದರಂತೆ ದಿನಾಂಕ : 28,07,2021 ರಿಂದ 2 ತಿಂಗಳವರೆಗೆ ದೈಹಿಕ ಪರೀಕ್ಷೆಯನ್ನು ನಡೆಸಲಾಯಿತು . ಅದರಲ್ಲಿ ಸುಮಾರು 56000 ) ಅಭ್ಯರ್ಥಿಗಳು ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ . ಆ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ದಿನಾಂಕ : 03.10.2021 ರಂದು ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು . ಆ ಪರೀಕ್ಷೆಯಲ್ಲಿ ಎರಡು ಪ್ರಶ್ನೆ ಪತ್ರಿಕೆಗಳಿದ್ದು 50 ಅಂಕಗಳ ಪತ್ರಿಕೆ -1 , 150 ಅಂಕಗಳ ( 100 ಪ್ರಶ್ನೆಗಳಿಗೆ ) ಪತ್ರಿಕೆ -2 ಇಡಲಾಗಿತ್ತು . ಸದರಿ ಪರೀಕ್ಷೆಗೆ ಮುನ್ನ ಅತ್ಯಂತ ನಂಬಲರ್ಹ ಮೂಲಗಳಿಂದ ಲಭ್ಯವಾದ ಮಾಹಿತಿಯ ಪ್ರಕಾರ ಪರೀಕ್ಷೆಗೆ ಮೊದಲೇ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುತ್ತವೆ . ಆ ಪತ್ರಿಕೆಗಳನ್ನು ಯಾರು ಹಣ ನೀಡುತ್ತಾರೋ ಆ ಅಭ್ಯರ್ಥಿಗಳಿಗೆ ಸುಮಾರು 24 ಗಂಟೆ ಮುಂಚಿತವಾಗಿ ನೀಡಲಾಗುವುದೆಂದು ಕೆಲವು ಮಧ್ಯವರ್ತಿಗಳು , ಕೆಲವು ಅಭ್ಯರ್ಥಿಗಳಿಗೆ ಸಂಪರ್ಕಿಸಲಾಗಿತ್ತು . ಸುಮಾರು 50 ಲಕ್ಷ ಹಣ ನೀಡಿದವರಿಗೆ ನಿಖರವಾದ ಪ್ರಶ್ನೆ ಪತ್ರಿಕೆಯನ್ನು ನೀಡಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದು ಪಿ.ಎಸ್.ಐ ಆಗಬಹುದೆಂದು ಹೇಳಿದ್ದರು . ಅಷ್ಟೆ ಅಲ್ಲದೆ ಈ ಪ್ರಶ್ನೆ ಪತ್ರಿಕೆಗಳ ಸೋರಿಕ ( ಲೀಕ್ ಆಗುತ್ತಿರುವುದು ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳ ಸಹಯೋಗದೊಂದಿಗೆ ನಡೆಯುತ್ತದೆ ಎಂದು ಸಹ ಮಧ್ಯವರ್ತಿಗಳು ಹೇಳಿದ್ದರು . ಅವರ ಮಾತುಗಳನ್ನು ನಂಬಿದ ಸ್ಥಿತಿವಂತ ಅಭ್ಯರ್ಥಿಗಳು ದೊಡ್ಡದೊಡ್ಡ ಮೊತ್ತದ ಹಣ ನೀಡಿ ಪ್ರಶ್ನೆ ಪತ್ರಿಕೆಗಳನ್ನು ಪಡೆಯಲು ಮುಂದಾಗಿರುತ್ತಾರೆ . ಅಭ್ಯರ್ಥಿಗಳು ನೀಡಿದ ಹಣದಲ್ಲಿನ ಪಾಲು ಇಲಾಖಾ ಅಧಿಕಾರಿಗಳಿಗೂ ಸಹ ಹೋಗುವುದು , ಆದ್ದರಿಂದ ಯಾರೂ ಸಹ ಅಂಜದೇ ಹಣ ನೀಡಿ ಪ್ರಶ್ನೆ ಪತ್ರಿಕೆ ಪಡೆಯಬಹುದೆಂದು ಮಧ್ಯವರ್ತಿಗಳು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಪ್ರಾಮಾಣಿಕ ಮತ್ತು ಕಷ್ಟ ಬಿದ್ದು ವ್ಯಾಸಂಗ ಮಾಡುತ್ತಿರುವ ನಮ್ಮಲ್ಲಿಯ ಬಡ ಪ್ರತಿಭಾವಂತ ಅಭ್ಯರ್ಥಿಗಳು ನೇಮಕಾತಿ ವಿಭಾಗದ ಮುಖ್ಯಸ್ಥರಾದ ADGP , ಅಮೃತ ಪಾಲ್‌ರವರಿಗೆ ದಿನಾಂಕ : 25/08/2021 ರಂದು ಪತ್ರ ನೀಡಿ ಹಣ ಕೊಟ್ಟವರಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದೆ ಎಂದು ತಿಳಿಸಲಾಗಿತ್ತು . ಆ ಮನವಿಯನ್ನು – ಸ್ವೀಕಾರ ಮಾಡಿದ ಸದರಿ ಅಧಿಕಾರಿಯೂ ವಿಖಟ ನಗೆಯನ್ನು ಬೀರಿ ಎಲ್ಲಾ ಇಲಾಖಾ ಪರೀಕ್ಷೆಗಳಲ್ಲಿ ಪ್ರತಿಭಾವಂತ ಪ್ರಮಾಣೀಕರಿಗೆ 70 % ಸ್ಥಾನಗಳು ಹಣ ಮತ್ತು ಸ್ಥಿತಿವಂತ ಹಾಗೂ ಪ್ರಭಾವಶಾಲಿ ಅಭ್ಯರ್ಥಿಗಳಿಗೆ 30 % ವಾಗಿ ನೀಡಲಾಗುವುದು , ಅದಕ್ಕಿಂತ ಹೆಚ್ಚು ಭ್ರಷ್ಟಾಚಾರವು ಆಗುವುದಿಲ್ಲ . ಪ್ರಶ್ನೆಪತ್ರಿಕೆಯು
ಸೋರಿಕೆಯಾಗುವುದಿಲ್ಲ , ಸುಮ್ಮನೆ ಹೋಗಿ ಪರೀಕ್ಷೆ ಬರೆಯಿರಿ ಎಂದು ಗದರಿಸಿ ಕಳುಹಿಸಿದ್ದರು . ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ಸು ಬಂದ ನಾವುಗಳು ದಿನಾಂಕ : 03.10.2021 ರಂದು ನಡೆದ ಲಿಖಿತ ಪರೀಕ್ಷೆ ನಡೆಯುವ ಕೇಂದ್ರಗಳಲ್ಲಿ CCTV ಅಳವಡಿಸಲು ಆದೇಶಿಸಲಾಗಿದ್ದರೂ ಬೆಂಗಳೂರು , ಕಲಬುರ್ಗಿ ಹಾಗೂ ಇನ್ನಿತರ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸದೆ ವಿವಿಧ ರೀತಿಯಲ್ಲಿ ನಕಲು ಮಾಡಲು ದಾರಿ ಮಾಡಿಕೊಡಲಾಗಿತ್ತು . ಅಷ್ಟೇ ಅಲ್ಲದೆ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಮೇಲ್ವಿಚಾರಕರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಹುನ್ನಾರ ನಡೆಸಿ ಹಣ ನೀಡಿದ ಅಭ್ಯರ್ಥಿಗಳಿಂದ ಕೆಲವು ಕೇಂದ್ರಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಹಣ ಪ್ರತಿ ಅಭ್ಯರ್ಥಿಯಿಂದ ಪಡೆದು ಪರೀಕ್ಷಾ ಕೊಠಡಿಗಳಿಗೆ ಯಾವುದೇ ತಪಾಸಣೆ ಇಲ್ಲದೆ ಹೋದಂತಹ ಅಭ್ಯರ್ಥಿಗಳಿಗೆ Eicctronic Devices , Blue tooth ಮುಂತಾದ ಆಧುನಿಕ ಉಪಕರಣಗಳನ್ನು ಉಪಯೋಗಿಸಲು ಅವಕಾಶ ನೀಡಿ ಹೊರಗಡೆಯಿಂದ Bluetooth Devices ಉಪಕರಣಗಳ ಮೂಲಕ ಉತ್ತರಗಳನ್ನು ಅಭ್ಯರ್ಥಿಗಳಿಗೆ ಒದಗಿಸಲಾಗಿತ್ತು . ಅಷ್ಟೆ ಅಲ್ಲದೇ ನಕಲು ಮಾಡಲು ಆಯ್ದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ಸಹಕಾರಿಯಾಗುವಂತಹ sitting arrangement ಸಹ ಮಾಡಿಕೊಡಲಾಗಿತ್ತು . ಅಂದರೆ ಪರೀಕ್ಷಾ ಪ್ರವೇಶ ಪತ್ರವನ್ನು ಇಲಾಖೆಯು ಹೊರಡಿಸುವ ಮುಂಚೆಯೇ ಇಲಾಖೆಯಲ್ಲಿನ ಕೆಲವು ಅಧಿಕಾರಿಗಳನ್ನು ಸಂಪರ್ಕಿಸಿ ಹಣ ನೀಡಿ ತಮಗೆ ಬೇಕಾದ ಅಭ್ಯರ್ಥಿಯು ಅಕ್ಕ ಪಕ್ಕ ಬರುವಂತೆ ಹಾಕಿಸಿಕೊಳ್ಳುತ್ತಾರೆ . ಇಂತಹ ಪ್ರಸಂಗ ಬೆಂಗಳೂರು , ಕಲಬುರ್ಗಿ ಇನ್ನಿತರ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು . ಅಷ್ಟೇ ಅಲ್ಲದ ಎಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿತ್ತೋ ಅಂತಹ ಕೇಂದ್ರಗಳಲ್ಲಿ ಕೆಲವು ಅಭ್ಯರ್ಥಿಗಳು ಸಿಸಿಟಿವಿಯಲ್ಲಿ ಪತ್ತೆಯಾಗದಂತಹ ಆಧುನಿಕ ಉಪಕರಣಗಳನ್ನು ಬಳಸಿರುತ್ತಾರೆ . ಕೆಲವು ಕೆಂದ್ರಗಳಲ್ಲಿ ಇಂತಹ ಘಟನೆಗಳು ನಡೆದಾಗ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು . ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ . ಇಪ್ಪಲ್ಲದೆ ಕೆಲವು ಅಭ್ಯರ್ಥಿಗಳು ಪ್ರಶ್ನೆಗಳಿಗೆ ಉತ್ತರವನ್ನು ತುಂಬದೇ ( OMR Shading ) 100 ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಎಂದು ಮಾತ್ರ ಬರೆದು ತನಗೆ ಗೊತ್ತಿರುವ 20 ರಿಂದ 30 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ ಬಂದಿರುತ್ತಾರೆ . ಅದೇ ರೀತಿ ಮಾಡಿದಂತಹ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡುವ ಸಂದರ್ಭದಲ್ಲಿ ಉತ್ತರಿಸದೆ ಇದ್ದ ಪ್ರಶ್ನೆಗಳಿಗೆ ಮೌಲ್ಯ ಮಾಪನ ಮಾಡುವವರೆ ಇಲಾಖೆಯ ಅಧಿಕಾರಗಳ ಸಹಕಾರದೊಂದಿಗೆ ಲಕ್ಷಾಂತರ ಹಣ ಪಡೆದು OMR ಉತ್ತರ ಹಾಳೆಯಲ್ಲಿ ಸರಿಯಾದ ಉತ್ತರವನ್ನು ಭರ್ತಿಮಾಡಿ ಅಭ್ಯರ್ಥಿಗಳು ಗರಿಷ್ಠ ಅಂಕಗಳನ್ನು ಪಡೆದಿರುವಂತಹ ಹುನ್ನಾರವು ನಡೆದಿರುತ್ತದೆ . ಅಂತಹ ಹುನ್ನಾರಗಳಲ್ಲಿ ಯಶಸ್ಸು ಕಂಡು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ SL No.07 ( H.K ) APP No2271151 , Roll No.9221946 ರ ಶ್ರೀ ವಿರೇಶ್ ರವರು ಪತ್ರಿಕೆ -2 ರಲ್ಲಿ ಅವರ ನಕಲು OMR ಪ್ರತಿ ಪ್ರಕಾರ ಉತ್ತರಿಸಿರುವುದು ಕೇವಲ 21 ಪ್ರಶ್ನೆಗಳು ಆದರೆ ಅವರು ಗಳಿಸಿರುವ ಅಂಕಗಳು 121.875 . ಉತ್ತರಿಸಿದ 21 ಪ್ರಶ್ನೆಗಳಿಗೆ ಗಳಿಸಬೇಕಾಗಿದ್ದು , ಕೇವಲ 31.5 . ಆದರೆ 121.875 ಗಳಿಸಬೇಕಾದರೆ ಮೌಲ್ಯ ಮಾಪಕರೇ ಉಳಿದ ಪ್ರಶ್ನೆಗಳಿಗೆ ಉತ್ತರಿಸಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ . ಇದನ್ನು ಪುಷ್ಟಿಕರೀಸಲು ಅಭ್ಯರ್ಥಿಯು 21 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿ ಅಭ್ಯರ್ಥಿ ಮತ್ತು ಮೇಲ್ವಿಚಾರಕರು ಸಹಿ ಮಾಡಿರುವ OMR ಉತ್ತರ ಹಾಳೆಯ ನಕಲು ಪ್ರತಿಯನ್ನು ನಿಮ್ಮ ಅವಗಾಹನೆಗೆ ಲಗತ್ತಿಸಲಾಗಿದೆ .
ಇಷ್ಟಲ್ಲದೆ ಇಂತಹ ವಾಮ ಮಾರ್ಗದಿಂದ ಆಯ್ಕೆಯಾಗಿರುವ ಶ್ರೀ . ಹಯ್ಯಾಳಿ ದೇಸಾಯಿ Application No.2339448 , Roll No.9221933 ರವರು ಪಿ.ಎಸ್.ಐ 545 ರಲ್ಲಿ ಅಕ್ರಮ ವೆಸಗಿ ಆಯ್ಕೆಯಾಗಿರುವುದಲ್ಲದೇ ಮುಂದಿನ 402 ಪಿ.ಎಸ್.ಐ ಸಿವಿಲ್ ನೇಮಕಾತಿಯಲ್ಲಿ ನಡೆಯುವ ಪರೀಕ್ಷೆಯಲ್ಲಿ ತನ್ನ ಪರಿಚಯ ಇನ್ನೊಬ್ಬ ವಿದ್ಯಾರ್ಥಿಯನ್ನು ಅದೇ ಮಾರ್ಗದಿಂದ ಆಯ್ಕೆಗೊಳಿಸಲು ಮಧ್ಯವರ್ತಿಗಳ ಜೊತೆಯಲ್ಲಿ ಆಯ್ಕೆಯ ವ್ಯವಹಾರ ಕುದುರಿಸಲು ಹಣ ನೀಡುವ ಮಾತುಗಳನ್ನು ಅಡಿರುವ ಸಂಭಾಷಣೆಯ ತುಣುಕು ಲಭ್ಯವಾಗಿರುತ್ತದೆ . ಸದರಿ ಸಂಭಾಷಣೆಯಲ್ಲಿ ಹಣದ ಪ್ರಸ್ತಾವ ಮಾತನಾಡಲಾಗಿದೆ . ಸದರಿ ಸಂಭಾಷಣೆಯನ್ನು ಸಿಡಿ ಯಲ್ಲಿ ಹಾಕಿ ನಿಮ್ಮ ಅವಗಾಹನೆಗಾಗಿ ಈ ಪಿರ್ಯಾದುದರ ಜೊತೆಗೆ ಲಗತ್ತಿಸಲಾಗಿದೆ . ಇಂತಹ ಬ್ರಹ್ಮಾಂಡ ಭ್ರಷ್ಟಚಾರ ನಡೆಸುವಲ್ಲಿ ಅನೇಕ ಮಧ್ಯವರ್ತಿಗಳು ಭಾಗಿಯಾಗಿ ನೂರಾರು ಕೋಟಿ ಗಳಿಸಿದ್ದಾರೆಂಬುದು ಜನಜನಿತವಾಗಿದೆ . ಅಂತಹವರಲ್ಲಿ ರುದ್ರಗೌಡ.ಡಿ.ಪಾಟೀಲ್ ‘ ( ತಾಲ್ಲೂಕು ಅವ್ವಲ್‌ಫರ್ , ಗುಲ್ಬರ್ಗ ಜಿಲ್ಲೆ , ಸೊನ್ನ ಗ್ರಾಮ ) ರವರು ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಇಂತಹ ದಂದೆಯಿಂದಲೇ ನೂರಾರು ಕೋಟಿ ಆಸ್ತಿ ಮಾಡಿರುತ್ತಾರೆ . ಈ ಪರೀಕ್ಷೆಯಲ್ಲಿ ಅಧಿಕಾರಿಗಳು ಮತ್ತು ಅಭ್ಯರ್ಥಿಗಳ ಮಧ್ಯೆ ಕೊಂಡಿಯಾಗಿ ಕೋಟ್ಯಾಂತರ ರೂಪಾಯಿ ಗಳಿಸಿ ಅಭ್ಯರ್ಥಿಗಳಿಗೆ ಸಹಾಯ ಮಾಡಿರುವುದು ಜನಜನಿತವಾಗಿದೆ . ಈ ಎಲ್ಲಾ ಮಾಹಿತಿಗಳು ಪ್ರತಿಭಾನಂತ ಮತ್ತು ಪ್ರಾಮಾಣಿಕ ಅಭ್ಯರ್ಥಿಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಕ್ರಮ ಜರುಗಿಸಿರುವುದಿಲ್ಲ . ಈ ಭ್ರಷ್ಟಾಚಾರದ ಕರ್ಮಕಾಂಡವನ್ನು ಮುದ್ರಣ ಮತ್ತು ವಿದ್ಯುನ್ಮಾನಗಳಲ್ಲಿ ಅನೇಕ ದಿನಗಳವರೆಗೆ ಪ್ರಕಟಣೆ ಮಾಡಿದ್ದರೂ ಸಹ , ರಾಜ್ಯ ಸರ್ಕಾರವಾಗಲೀ , ಸಂಬಂಧಿಸಿದ ಅಧಿಕಾರಿಗಳಾಗಲೀ , ಭ್ರಷ್ಟಾಚಾರ ತಡೆಯುವ ಕಿಂಚಿತ್ತು . ಪ್ರಯತ್ನ ಮಾಡಿರುವುದಿಲ್ಲ . ಯಾರೂ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬಂತೆ ಇಲಾಖೆಯ ಅಧಿಕಾರಿಗಳು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ದಿನಾಂಕ : 19.01 2022 ರಂದು ಹೊರಡಿಸಿರುತ್ತಾರೆ . ಅಷ್ಟೇ ಅಲ್ಲದೇ ಪತ್ರಿಕೆ | ಪರೀಕ್ಷೆಯು 50 ಅಂಕಗಳಿಗೆ ನಡೆಯುತ್ತದೆ . ಇದು ಬರವಣಿಗೆಯ ರೂಪದಲ್ಲಿರುವುದರಿಂದ ಅಭ್ಯರ್ಥಿಯು ನಿಖರವಾಗಿ ಪತ್ರಿಕೆ – 2 ರಂತೆ ಎಷ್ಟು ಅಂಕಗಳನ್ನು ಗಳಿಸಿದ್ದನೆಂಬುದು ಗೊತ್ತಾಗುವುದಿಲ್ಲ . ಕಾರಣ ಪತ್ರಿಕೆ – 2 ರಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ ಅಭ್ಯರ್ಥಿಯು ಇಲಾಖೆಯಲ್ಲಿನ ಕೆಲವು ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಗೆ ಹಣ ನೀಡಿ ಪತ್ರಿಕೆ – ರಲ್ಲಿ ಗರಿಷ್ಠ ಅಂಕಗಳನ್ನು ಪಡೆದು ಆಯ್ಕೆಯಾಗುತ್ತಾರೆ . ಅಭ್ಯರ್ಥಿಗಳು ಪತ್ರಿಕೆ – 1 ರ ಮೌಲ್ಯಮಾಪನದ ಪ್ರತಿಯನ್ನು ನೀಡುವಂತೆ ಕೇಳಿಕೊಂಡರು ಇಲಾಖೆಯವರು ನೀಡುವುದಿಲ್ಲ . ಅದ್ದರಿಂದ ಇದೇ ರೀತಿ , 200 …. ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮವೆಸಗಿ ಆಯ್ಕೆಯಾಗಿರುತ್ತಾರೆ . ಕಾರಣ ಇಲಾಖೆಯು ಹೊರಡಿಸಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯು ಕಾನೂನು ಬಾಹಿರವಾಗಿದ್ದು , ಅಪ್ರಮಾಣಿಕ , ಭ್ರಷ್ಟ ಅಭ್ಯರ್ಥಿಗಳಿಗೆ ಸಮಾಜದ ರಕ್ಷಣೆ ಮಾಡುವಂತಹ ಕಾನೂನು ಸುವ್ಯವಸ್ಥೆ ರೂಪಿಸುವಂತಹ ಗುರುತರವಾದಂತಹ ಜವಾಬ್ದಾರಿಯನ್ನು ನೀಡಿದರೆ , ಪ್ರಾಮಾಣಿಕ , ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುವುದು ಅಷ್ಟೇ ಅಲ್ಲದೇ ಹಣ ನೀಡಿದ ಅಭ್ಯರ್ಥಿಗಳು ಪ್ರಾರಂಭದಿಂದಲೇ ಭ್ರಷ್ಟರಾಗಿ ಹಣ ಲೂಟಿ ಮಾಡುತ್ತಾ ಸದಾ ಭ್ರಷ್ಟಾಚಾರಕ್ಕೆ ಗಂಗೊಂತ್ರಿಯನ್ನು ಕಾನೂನು ಸುವ್ಯವಸ್ಥೆಯ ಇಲಾಖೆಯಲ್ಲಿ ಹರಿಸುತ್ತಾರೆ . ಹಣಕ್ಕಾಗಿ ಜನರನ್ನು ಹಿಂಸಿಸಿ ಇಲಾಖೆಯಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಾರೆ . ಇದೆಲ್ಲವನ್ನು ಗಮನಿಸಿದ ರಾಜ್ಯ ಸರ್ಕಾರವು CID ತನಿಖೆಗೆ ಒಪ್ಪಿಸಿ ಪಿರ್ಯಾದುದಾರ | ಭಾತ್ಮಿದಾರ ಶ್ರೀ.ಹೆಚ್.ದಿಲೀಪ್ ಕುಮಾರ್ ಪೊಲೀಸ್
ಇನ್ಸ್‌ಪೆಕ್ಟರ್ ಇವರು ದಿನಾಂಕ : 09-04-2022 ರಂದು ಗುಲ್ಬರ್ಗಾ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ . ದಾಖಲಿಸಿ ತನಿಖೆ ಆರಂಭಿಸಿರುತ್ತಾರೆ . CID ತಂಡವು ಕಲಬುರ್ಗಿ ಜ್ಞಾನಗಂಗಾ ಶಾಲೆಯ ಮೇಲೆ ದಾಳಿ ಮಾಡಿ ಮೂರು ಜನ ಅಕ್ರಮವೆಸಗಿದ ಅಭ್ಯರ್ಥಿಗಳನ್ನು ಹಾಗೂ ನಾಲ್ಕು ಜನ ಪರೀಕ್ಷಾ ಮೇಲ್ವಿಚಾರಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಹಾಗೂ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.ಈ ಜ್ಞಾನಗಂಗ ಶಾಲೆಯ ಮುಖ್ಯಸ್ಥರಾದ ದಿವ್ಯಾ ಹಾಗರಗಿ ಮತ್ತು ಭಾಗಿಯಾದ ಇತರರನ್ನು ವಿಚಾರಣೆಗೆ ಒಳಪಡಿಸಬೇಕು . ಇದರೊಂದಿಗೆ ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಈ ರೀತಿ ಅಕ್ರಮ ವಾಗಿರುವ ಬಗ್ಗೆ ಶಂಕೆ ಇದ್ದು ಅವುಗಳನ್ನು ವಿಚಾರಣೆಗೆ ಒಳಪಡಿಸಬೇಕು . ಸಿಐಡಿ ತನಿಖೆ ಓಎಂಆರ್ ತಿದ್ದುಪಡಿ ಮೇಲೆ ಮಾತ್ರ ವಿಚಾರಣೆ ಮಾಡುತ್ತಿದೆ ಇನ್ನಿತರ ಮಾರ್ಗಗಳಾದ BLUETOOTH ಬಳಕೆ , Sitting Arrangements , ಮೊದಲ ಪತ್ರಿಕೆ Marks ತಿದ್ದುಪಡಿ , ದೈಹಿಕ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಕುರಿತು ಕ್ರಮ ಕೈಗೊಳ್ಳಬೇಕು . ಆದ ಕಾರಣ ಭ್ರಷ್ಟಾಚಾರಿಗಳನ್ನು ಬಯಲಿಗೆದು ಸದರಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದು ಮಾಡಿ ಪುನರ್ ಪರೀಕ್ಷೆ ಮಾಡಬೇಕು ಹಾಗೂ ಇಂತಹ ಭ್ರಷ್ಟಾಚಾರಕ್ಕೆ ಕಾಣರಾಗಿರುವ ಅಭ್ಯರ್ಥಿಗಳ ಮೇಲೆ ಅಧಿಕಾರಿಗಳ ಮೇಲೆ ಹಾಗೂ ಮಧ್ಯವರ್ತಿಗಳನ್ನು ಗುರುತಿಸಲು ಈ ಭ್ರಷ್ಟ ಪರೀಕ್ಷಾ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಸತ್ಯಾಸತ್ಯತೆಯ ವರದಿಯನ್ನು 3 ತಿಂಗಳಲ್ಲಿ ಪಡೆದು ಸಂಬಂಧಿಸಿದ ಎಲ್ಲಾ ತಪ್ಪಿತಸ್ಥರ ಮೇಲೆ criminal ಮೊಕದ್ದಮೆ ದಾಖಲಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಮತ್ತು ಪ್ರಾಮಾಣಿಕ / ದಕ್ಷ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಈ ಪತ್ರದ ಮೂಲಕ ವಿನಂತಿಸಿಕೊಳ್ಳುತ್ತೇವೆ ಎಂದರು.