ಕರ್ನಾಟಕದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 25,000 ಸಕ್ರಿಯ ಪಿ.ಒ.ಎಸ್.ಪಿ.ಗಳ ಸಾಧನೆಯ ಗುರಿ

ನಂದಿನಿ ಮನುಪ್ರಸಾದ್ ನಾಯಕ್

ಕರ್ನಾಟಕವು ಪಿಬಿಪಾರ್ಟ್ನರ್ಸ್ ನ ಶಕ್ತಿಯುತ ಮಾರುಕಟ್ಟೆಯಾಗಿ ಹೊರಹೊಮ್ಮಿದೆ: 6,500+ ಏಜೆಂಟ್ ಪಾಲುದಾರರು, ಎಫ್.ವೈ.24-25ರಲ್ಲಿ ಶೇ.50 ಮೋಟಾರ್ ವಿಮೆ ವಹಿವಾಟು ಹೆಚ್ಚಳ
~ಪಿಬಿಪಾರ್ಟ್ನರ್ಸ್ ಕರ್ನಾಟಕದಲ್ಲಿ 6,500+ಏಜೆಂಟ್ ಪಾಲುದಾರರ ಪರಿಣಾಮಕಾರಿ ವ್ಯಾಪ್ತಿಯೊಂದಿಗೆ ಮಾರುಕಟ್ಟೆ ನಾಯಕನಾಗಿ ತನ್ನ ಸ್ಥಾನ ಗಟ್ಟಿಗೊಳಿಸಿಕೊಂಡಿದೆ
~ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಎರಡು ಹೊಸ ಕಛೇರಿಗಳ ಪ್ರಾರಂಭ; ಟೈಯರ್ 2 & 3 ಏಜೆಂಟ್ ಸಬಲೀಕರಣ ಮತ್ತು ಡಿಜಿಟಲ್ ಸನ್ನದ್ಧತೆಗೆ ಆದ್ಯತೆ
~ಎಂ.ಆರ್.ಪಿ. ಪ್ಲಾನ್ ಮತ್ತು ಪಿಬಿಪಿ ಒನ್ ಲಾಯಲ್ಟಿ ಕ್ಲಬ್ ಗಳ ಪ್ರಾರಂಭ

~ಗ್ರಾಹಕರ ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಎಂಜಿನ್ ಪ್ರೊಟೆಕ್ಟ್, ಝೀರೋ ಡಿಪ್ರಿಸಿಯೇಷನ್ ನಂತಹ ಆಡ್-ಆನ್ ಗಳು

~ಕರ್ನಾಟಕದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 25,000 ಸಕ್ರಿಯ ಪಿ.ಒ.ಎಸ್.ಪಿ.ಗಳ ಸಾಧನೆಯ ಗುರಿ

~ಡಿಜಿಟಲ್-ಪ್ರಥಮ ಸಾಧನಗಳು, ಆನ್-ಡಿಮ್ಯಾಂಡ್ ಪೇಔಟ್ ಗಳು ಮತ್ತು ಸ್ಥಳೀಕೃತ ಬೆಂಬಲದ ಮೂಲಕ ಕರ್ನಾಟಕದಾದ್ಯಂತ ವಿಮೆಯ ಅಳವಡಿಕೆ ಹೆಚ್ಚಳ
ಮೈಸೂರು, ಆಗಸ್ಟ್ 07, 2025: ಭಾರತದ ಮುಂಚೂಣಿಯ ಪಿ.ಒ.ಎಸ್.ಪಿ-ಪ್ರೇರಿತ ವಿಮಾ ವಿತರಣೆಯ ಪ್ಲಾಟ್ ಫಾರಂಗಳಲ್ಲಿ ಒಂದಾದ ಪಿಬಿಪಾರ್ಟ್ನರ್ಸ್ ಕರ್ನಾಟಕದಲ್ಲಿ ವಿಮೆಯ ವ್ಯಾಪ್ತಿ ಹೆಚ್ಚಿಸುವುದನ್ನು ಮುಂದುವರಿಸಿದೆ. ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯು ಭಾರತದ ಪ್ರಗತಿಯ ಮಾರುಕಟ್ಟೆಗಳಲ್ಲಿ ವಿಮೆಯ ವ್ಯಾಪ್ತಿಯನ್ನು ಮತ್ತಷ್ಟು ಆಳವಾಗಿಸುವ ಪಿಬಿಪಾರ್ಟ್ನರ್ಸ್ ನ ವಿಸ್ತಾರ ಯೋಜನೆಯ ಭಾಗವಾಗಿದೆ. ಪಿಬಿಪಾರ್ಟ್ನರ್ಸ್ ತನ್ನ ಗುರುತನ್ನು ಏಜೆಂಟ್ ಪಾರ್ಟ್ನರ್-ಪ್ರಥಮ ಬ್ರಾಂಡ್ ಆಗಿ ಮರು ದೃಢೀಕರಿಸುತ್ತಿದ್ದು ವಿಮೆಯನ್ನು ಸರಳೀಕರಿಸಲು ಬದ್ಧವಾಗಿದೆ, ಏಜೆಂಟರ ಜೀವನೋಪಾಯಗಳಿಗೆ ಬೆಂಬಲಿಸುತ್ತದೆ ಮತ್ತು ಹೆಚ್ಚು ಆರ್ಥಿಕವಾಗಿ ಸುರಕ್ಷಿತ ಭಾರತ ರೂಪಿಸುತ್ತದೆ.
ಈ ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಅಭಿಮನ್ಯು ಶರ್ಮಾ (ಬಿಸಿನೆಸ್ ಹೆಡ್-ಮೋಟಾರ್ ಇನ್ಷೂರೆನ್ಸ್) ಮತ್ತು ಶ್ರೀ ಅಮಿತ್ ಭದೋರಿಯಾ (ನ್ಯಾಷನಲ್ ಸೇಲ್ಸ್ ಹೆಡ್- ಮೋಟಾರ್ ಇನ್ಷೂರೆನ್ಸ್) ಗ್ರಾಹಕರಲ್ಲಿ ವಿಕಾಸಗೊಳ್ಳುತ್ತಿರುವ ಪ್ರವೃತ್ತಿಗಳ ಕುರಿತು ಹಾಗೂ ಮೈಸೂರು ಮತ್ತು ವಿಸ್ತಾರ ಕರ್ನಾಟಕ ಪ್ರದೇಶದ ವಿಕಾಸಗೊಳ್ಳುತ್ತಿರುವ ಮಾರ್ಕೆಟ್ ಡೈನಮಿಕ್ಸ್ ಕುರಿತು ವಿವರವಾದ ಒಳನೋಟಗಳನ್ನು ಹಂಚಿಕೊಂಡರು.
ಪತ್ರಿಕಾಗೋಷ್ಠಿಯ ಪ್ರಮುಖಾಂಶಗಳು:
ತೀವ್ರ ಮಾರುಕಟ್‍ಟೆ ವಿಸ್ತರಣೆ: ಕರ್ನಾಟಕ ಪಿಬಿಪಾರ್ಟ್ನರ್ಸ್ ಗೆ ಕಾರ್ಯತಂತ್ರೀಯ ಪ್ರಗತಿಯ ಮಾರುಕಟ್ಟೆಯಾಗಿ ಹೊರಹೊಮ್ಮಿದ್ದು ಈ ರಾಜ್ಯವು ಈಗ ಟೈಯರ್ 2 ಮತ್ತು ಟೈಯರ್ 3 ಪಟ್ಟಣಗಳಲ್ಲಿ 6,500+ ಏಜೆಂಟ್ ಪಾಲುದಾರರ ವೃದ್ಧಿಸುತ್ತಿರುವ ಜಾಲಕ್ಕೆತವರಾಗಿದೆ. ಕಳೆದ ಒಂದು ವರ್ಷಕ್ಕೂ ಮೇಲ್ಪಟ್ಟು ಕಂಪನಿಯು ಪ್ರಮುಖ ಪ್ರದೇಶಗಳಲ್ಲಿ ತನ್ನ ಉಪಸ್ಥಿತಿ ವಿಸ್ತರಿಸಿದ್ದು ವಾಹನ ನೋಂದಣಿಯ ದೃಷ್ಟಿಯಿಂದ ಭಾರತದ ದ್ವಿತೀಯ ಅತ್ಯಂತ ದೊಡ್ಡ ರಾಜ್ಯವಾಗಿ ಕರ್ನಾಟಕದ ಅಪಾರ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತಿದೆ.
ತಂತ್ರಜ್ಞಾನ ಮತ್ತು ವಿಶ್ವಾಸದಿಂದ ಪ್ರೇರಿತ ಪ್ರಗತಿ: ಮೋಟಾರ್ ಇನ್ಷೂರೆನ್ಸ್ ನ್ಯಾಷನಲ್ ಸೇಲ್ಸ್ ಹೆಡ್ ಶ್ರೀ ಅಮಿತ್ ಭದೋರಿಯಾ, “ಅತ್ಯಾಧುನಿಕ ತಂತ್ರಜ್ಞಾನ ಮತ್ತು ಏಜೆಂಟ್ ಪಾಲುದಾರರ ವೈಯಕ್ತಿಕ ಸ್ಪರ್ಶವು ಈ ಪ್ರದೇಶದಲ್ಲಿ ಬ್ರಾಂಡ್ ಯಶಸ್ಸಿಗೆ ಬಹುದೊಡ್ಡ ಕೊಡುಗೆ ನೀಡುತ್ತಿವೆ. 2024-25ರ ಹಣಕಸು ವರ್ಷದಲ್ಲಿ ಪಿಬಿಪಾರ್ಟ್ನರ್ಸ್ ಏಜೆಂಟ್ ನೇಮಕ ಮತ್ತು ಆಕ್ಟಿವೇಷನ್ ನಲ್ಲಿ ಶೇ.80ರಷ್ಟು ಹೆಚ್ಚಳ ದಾಖಲಿಸಿದ್ದು ಕರ್ನಾಟಕದಲ್ಲಿ ಮೋಟಾರ್ ಇನ್ಷೂರೆನ್ಸ್ ವಹಿವಾಟಿನಲ್ಲಿಯೇ ಶೇ.50 ಹೆಚ್ಚಳ ಕಂಡಿದೆ. ಈ ಪ್ರಗತಿಯು ಹೆಚ್ಚು ಹೆಚ್ಚು ಜನರು ವಿಮೆಯ ಪ್ರಾಮುಖ್ಯತೆಯ ಕುರಿತು ಅರಿವನ್ನು ಹೆಚ್ಚಿಸುತ್ತಿರುವುದರಿಂದ ಗ್ರಾಹಕರ ಪ್ರವೃತ್ತಿಯಲ್ಲಿ ವಿಸ್ತಾರ ಬದಲಾವಣೆ ಬಿಂಬಿಸುತ್ತಿದೆ” ಎಂದರು.
ಅವರು, “ಕರ್ನಾಟಕದಲ್ಲಿ ನಮ್ಮ ಏಜೆಂಟ್ ಪಾಲುದಾರರನ್ನು ಬೆಂಬಲಿಸಲು ಮತ್ತು ರಾಜ್ಯದಲ್ಲಿ ನಮ್ಮ ಸೇವೆಗಳು ಹೆಚ್ಚು ಲಭ್ಯವಾಗುವಂತೆ ಮಾಡಲು ನಾವು ಬದ್ಧರಾಗಿದ್ದೇವೆ. ನಾವು ಮುಂದಿನ ವರ್ಷ ನಮ್ಮ ಮೈಸೂರು ಮತ್ತು ಹುಬ್ಬಳ್ಳಿ ಕಛೇರಿಗಳನ್ನು ಉದ್ಘಾಟಿಸಲಿದ್ದೇವೆ. ನಮ್ಮ ಗುರಿ ಅತ್ಯಂತ ಕುಗ್ರಾಮಗಳಿಗೂ ತಲುಪುವ ಮೂಲಕ ಪಿಬಿಪಾರ್ಟ್ನರ್ಸ್ ಎಲ್ಲ ಕಡೆಯೂ ಲಭ್ಯವಾಗುವಂತೆ ಮಾಡುವುದಾಗಿದೆ” ಎಂದರು.
ಮಳೆಗಾಲದ ವಿಶೇಷ ಸಲಹೆಗಳು ಮತ್ತು ನಿಮ್ಮ ವಾಹನ ರಕ್ಷಿಸಲು ಹೆಚ್ಚುವರಿ ಮಾಹಿತಿ: ಶ್ರೀ ಅಭಿಮನ್ಯು ಶರ್ಮಾ (ಬಿಸಿನೆಸ್ ಹೆಡ್-ಮೋಟಾರ್ ಇನ್ಷೂರೆನ್ಸ್) ಅವರು, “ನಾವು ಮಳೆಗಾಲದಂತಹ ಋತುವಿನ ಬದಲಾವಣೆಗಳ ಸಂದರ್ಭದಲ್ಲಿ ವಾಹನದ ಸುರಕ್ಷತೆ ಕುರಿತು ಅರಿವು ಹೆಚ್ಚುತ್ತಿರುವುದನ್ನು ಕಂಡಿದ್ದೇವೆ ಮತ್ತು ಇದು ಎಂಜಿನ್ ಪ್ರೊಟೆಕ್ಷನ್, ಝೀರೋ ಡಿಪ್ರಿಸಿಯೇಷನ್ ಮತ್ತು ರೋಡ್ ಸೈಡ್ ಅಸಿಸ್ಟೆನ್ಸ್ ಆವಿಷ್ಕರಿಸಲು ಗ್ರಾಹಕರನ್ನು ಉತ್ತೇಜಿಸುತ್ತದೆ. ತಂತ್ರಜ್ಞಾನ-ಸನ್ನದ್ಧ ಗ್ರಾಹಕರ ಪ್ರಯಾಣ ಮತ್ತು ಸ್ಥಳೀಯ, ಅಗತ್ಯ ಆಧರಿತ ಸಲಹೆಯ ಸಂಯೋಜನೆಯು ಪಿಬಿಪಾರ್ಟ್ನರ್ಸ್ ಏಜೆಂಟರು ವಿಕಾಸಗೊಳ್ಳುತ್ತಿರುವ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಮುಖ್ಯವಾಗಿ ಸಮಗ್ರ ರಕ್ಷಣೆ ಬಯಸುವ ಮೊದಲ ಸಲದ ಕೊಳ್ಳುಗರಿಗೆ ನೆರವಾಗುತ್ತದೆ” ಎಂದರು.
ಏಜೆಂಟ್ ಪಾಲುದಾರರ ಸಬಲೀಕರಣ: ಶ್ರೀ ಅಭಿಮನ್ಯು ಅವರು, “ಪಿಬಿಪಾರ್ಟ್ನರ್ಸ್ ತನ್ನ ಆನ್-ಡಿಮ್ಯಾಂಡ್ ಪೇಔಟ್ (ಒಡಿಪಿ) ಮೂಲಕ ಪಾವತಿಯ ಪ್ರಕ್ರಿಯೆಯನ್ನು ಕೂಡಾ ಸರಳೀಕರಿಸಿದ್ದು ಏಜೆಂಟ್ ಪಾಲುದಾರರಿಗೆ ಪ್ರತಿ ಪಾಲಿಸಿ ಮಾರಾಟ ನಂತರ ಗಳಿಕೆಯನ್ನು ತಕ್ಷಣವೇ ಪಡೆದುಕೊಳ್ಳಲು ನೆರವಾಗುತ್ತದೆ, ಅದು ಅದೇ ದಿನ ಅಥವಾ ಮರುದಿನ ಸಂಸ್ಕರಿಸಲಾಗುತ್ತದೆ. ಈ ತಕ್ಷಣದ ಪಾವತಿಯ ವ್ಯವಸ್ಥೆಯು ಟೈಯರ್ 2 ಮತ್ತು ಟೈಯರ್ 3 ನಗರಗಳಲ್ಲಿ ಏಜೆಂಟರಿಗೆ ಉಪಯುಕ್ತವಾಗಿದ್ದು ಸ್ಥಿರವಾದ ನಗದು ಹರಿವು ನೀಡುತ್ತದೆ” ಎಂದರು.
ಪಿಬಿಪಾರ್ಟ್ನರ್ಸ್ ತನ್ನ ಪಿಬಿಪಿ ಆಪ್ ಮೂಲಕ ಮತ್ತು ಡಿಜಿಟಲ್-ಪ್ರಥಮ ಸಿಜೆ ಪ್ಲಾಟ್ ಫಾರಂ ಮೂಲಕ ವಿಮೆಯನ್ನು ಸರಳೀಕರಿಸಿದ್ದು ವೇಗದ, ಕಾಗದರಹಿತ ವಿಮೆಯ ಪಾಲಿಸಿ ನೀಡುತ್ತದೆ ಮತ್ತು ಪ್ರಾರಂಭದಿಂದ ಅಂತ್ಯದವರೆಗೆ ಮೃದುವಾದ ಸೇವೆ ನೀಡುತ್ತದೆ.
ಭವಿಷ್ಯ ಸನ್ನದ್ಧ ಏಜೆಂಟ್ ಜಾಲ ನಿರ್ಮಿಸಲು ಇದು ರಿಯಲ್-ಟೈಮ್ ಬೆಂಬಲ, ರಚನಾತ್ಮಕ ತರಬೇತಿ ಮತ್ತು ಸ್ಥಳೀಯ ಅಗತ್ಯಗಳಿಗೆ ರೂಪಿಸಲಾದ ಸ್ಮಾರ್ಟ್ ಸಾಧನಗಳನ್ನು ಒದಗಿಸುತ್ತದೆ. ಈ ಧ್ಯೇಯೋದ್ದೇಶಕ್ಕೆ ಪೂರಕವಾಗಿ ಏಜೆಂಟ್ ದಕ್ಷತೆ ಮತ್ತು ಪ್ರಗತಿಯನ್ನು ಉತ್ತೇಜಿಸಲು ಎರಡು ಹೊಸ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ:
ಮೋಟಾರ್ ರಿನಿವಲ್ ಪ್ರೊಟೆಕ್ಷನ್ (ಎಂ.ಆರ್.ಪಿ) ಪ್ಲಾನ್ ಮೋಟಾರ್ ವಿಮಾ ಏಜಂಟರಿಗೆ ರಿನಿವಲ್ ಕಮಿಷನ್ ಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದ್ದು ಅದು ನೇರವಾಗಿ ವಿಮಾದಾರ ನವೀಕರಿಸಿದಾಗಲೂ ದೊರೆಯುತ್ತದೆ.
ಏಜೆಂಟ್ ಪಾಲುದಾರರಿಗೆ ವಿಶೇಷ ಪುರಸ್ಕಾರಗಳು, ಕಲಿಕೆಯ ಅವಕಾಶಗಳು ಮತ್ತು ಸಮುದಾಯ ನಿರ್ಮಾಣದ ಅನುಭವಗಳನ್ನು ನೀಡುವ ಲಾಯಲ್ಟಿ ಮತ್ತು ಮಾನ್ಯತೆಯ ಕಾರ್ಯಕ್ರಮ ಪಿಬಿಪಿ ಒನ್’ ಕ್ಲಬ್ ಗಳನ್ನು ಪರಿಚಯಿಸಲಾಗಿದೆ.
ಒಟ್ಟಿಗೆ ಈ ಉಪಕ್ರಮಗಳು ಆವಿಷ್ಕಾರ, ಏಜೆಂಟ್ ಪಾಲುದಾರರ ಸಬಲೀಕರಣ ಮತ್ತು ಮೈಸೂರಿನಂತಹ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಎಲ್ಲರನ್ನೂ ಒಳಗೊಳ್ಳುವ ವಿಮೆಯ ಪ್ರಗತಿಗೆ ಮುಂದುವರಿದ ಆದ್ಯತೆಯನ್ನು ತೋರುತ್ತವೆ. ಪಿಬಿಪಾರ್ಟ್ನರ್ಸ್ ಕರ್ನಾಟಕದ 25,000ಕ್ಕೂ ಹೆಚ್ಚು ಪಿ.ಒ.ಎಸ್.ಪಿ.ಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಧ್ಯೇಯೋದ್ದೇಶವು ಸದೃಢ ಮತ್ತು ಸಬಲೀಕರಿಸಿದ ಏಜೆಂಟ್ ಪಾಲುದಾರ ನಿರ್ಮಿಸುವ ಉದ್ದೇಶ ಹೊಂದಿದೆ.
ಇದರೊಂದಿಗೆ ಪಿಬಿಪಾರ್ಟ್ನರ್ಸ್ ಮಾರುಕಟ್ಟೆ ಉಪಸ್ಥಿತಿಯನ್ನು ಆಳವಾಗಿಸಲು ಮತ್ತು ರಾಜ್ಯದ ವಿಮಾ ಇಕೊಸಿಸ್ಟಂನಲ್ಲಿ ಪಾಲನ್ನು ಹೆಚ್ಚಿಸಲು ಗುರಿ ಹೊಂದಿದೆ.

 

Leave a Reply

Your email address will not be published. Required fields are marked *