ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಡಾ.ಈ.ಸಿ.ನಿಂಗರಾಜ್ ಗೌಡ ರಿಂದ ಪವಿತ್ರ ಸ್ನಾನ

ನಂದಿನಿ ಮೈಸೂರು

ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಡಾ.ಈ.ಸಿ.ನಿಂಗರಾಜ್ ಗೌಡ ರಿಂದ ಪವಿತ್ರ ಸ್ನಾನ.

ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತೀರುವ ಮಹಾಕುಂಭಮೇಳದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ರವರಪ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.

ಈ ವೇಳೆ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ, ನಾಡಿನ ಸಮಸ್ತ ಜನತೆಯ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಮಾಡಿದರು. ಇದು ಗಂಗಾ, ಯಮುನಾ ನದಿಗಳ ಸಂಗಮ ಸ್ಥಳ. ಗುಪ್ತಗಾಮಿನಿಯಾದ ಸರಸ್ವತಿ ನದಿಯೂ ಇಲ್ಲಿ ಸಂಗಮಿಸುತ್ತಾಳೆ ಎಂಬ ನಂಬಿಕೆ ಇದ್ದು, ಇಂತಹ ಮಹಾನ್ ಕಾರ್ಯದಲ್ಲಿ ಭಾಗಿಯಾಗಿದ್ದು ನನ್ನ ಪೂರ್ವಜನ್ಮದ ಪುಣ್ಯ ಎಂದು ಡಾ.ಈ.ಸಿ. ನಿಂಗರಾಜ್ ಗೌಡ ತಿಳಿಸಿದರು.

ಪುರಾಣದ ಪ್ರಕಾರ, ಸಮುದ್ರ ಮಂಥನದಲ್ಲಿ ದೊರೆತ ಅಮೃತ ಕಳಶವು ಅಸುರರಿಗೆ ಸಿಗದಂತೆ ಇಂದ್ರನ ಮಗ ಜಯಂತನು ತೆಗೆದುಕೊಂಡು ಓಡಿ ಹೋಗುತ್ತಾನೆ. ಆತನ ರಕ್ಷಣೆಗೆ ದೇವತೆಗಳು ಸೂರ್ಯ, ಚಂದ್ರ, ಶನಿ, ಗುರು ಗ್ರಹವನ್ನು ನಿಯೋಜಿಸುತ್ತಾರೆ. ಈ ಗ್ರಹಗಳು 144 ವರ್ಷಕ್ಕೊಮ್ಮೆ ಸರಳ ರೇಖೆಯಲ್ಲಿ ಕಾಣಿಸಿ ಕೊಳ್ಳುತ್ತವೆ. ಆ ಸಂದರ್ಭದಲ್ಲಿ ನಡೆಯುವ ಪೂರ್ಣ ಕುಂಭಮೇಳವೇ ಮಹಾಕುಂಭ. ಒಟ್ಟು 45 ದಿನಗಳ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಈವರೆಗೆ 50 ಕೋಟಿಗೂ ಹೆಚ್ಚು ಭಕ್ತಾಧಿಗಳು ಪವಿತ್ರ ಸ್ನಾನ ಮಾಡಿರುವುದು ಭಾರತ ವಿಶ್ವಗುರು ಆಗುವುದರ ಮುನ್ಸೂಚನೆ ಎಂದು ಡಾ.ಈ.ಸಿ.ನಿಂಗರಾಜ್ ಗೌಡ ರವರು ತಿಳಿಸಿದ್ದಾರೆ.

ಮಹಾ ಕುಂಭಮೇಳವು ಹಿಂದೂ ಧರ್ಮದ ಅತ್ಯಂತ ಪವಿತ್ರ ಹಾಗೂ ಮಹತ್ವದ ಉತ್ಸವಗಳಲ್ಲಿ ಒಂದಾಗಿದೆ. ಇದನ್ನು ಪ್ರತಿ 12 ವರ್ಷಗಳಲ್ಲಿ, ಪ್ರಯಾಗ್‌ರಾಜ್ ನಲ್ಲಿ, ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮದ ಸನ್ನಿಧಿಯಲ್ಲಿ ಆಚರಿಸಲಾಗುತ್ತದೆ. 2025ರ ಕುಂಭಮೇಳವು 144 ವರ್ಷಗಳ ನಂತರ ನಡೆಯುತ್ತಿರುವ ಅಪರೂಪದ ಘಟನೆ ಎಂದು ಪರಿಗಣಿಸಲಾಗುತ್ತದೆ.

ಈ ಕುಂಭಮೇಳವು 2025 ಜನವರಿ 13ರಂದು ಪುಷ್ಯ ಪೂರ್ಣಿಮೆಯ ದಿನ ಆರಂಭವಾಗಿ, ಫೆಬ್ರವರಿ 26ರಂದು ಮಹಾ ಶಿವರಾತ್ರಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಈ ಅವಧಿಯಲ್ಲಿ ಲಕ್ಷಾಂತರ ಭಕ್ತರು ಶುದ್ಧೀಕರಣ, ಪಾಪಮೋಚನೆ ಮತ್ತು ಆಧ್ಯಾತ್ಮಿಕ ಮುಕ್ತಿಗಾಗಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ.

ಕುಂಭಮೇಳದ ಮೂಲವು ಪೌರಾಣಿಕ ಕಥೆಗಳಲ್ಲಿದೆ. ಸಮುದ್ರ ಮಂಥನದ ಸಂದರ್ಭದಲ್ಲೆ, ದೇವತೆಗಳು ಮತ್ತು ದಾನವರು ಅಮೃತವನ್ನು ಪಡೆಯಲು ಸಮುದ್ರವನ್ನು ಮಥಿಸುವ ಕಥೆಯ ಪ್ರಕಾರ, ಅಮೃತದ ಹನಿಗಳು ನಾಲ್ಕು ಪ್ರಮುಖ ಸ್ಥಳಗಳಲ್ಲಿ ಬಿದ್ದವು ಮತ್ತು ಆ ಸ್ಥಳಗಳಲ್ಲಿ ಪ್ರಯಾಗ್‌ರಾಜ್ ಕೂಡ ಪ್ರಮುಖ ಸ್ಥಾನವನ್ನು ಪಡೆದಿದೆ ಎಂಬ ನಂಬಿಕೆ ಇರುತ್ತದೆ.

2025ರ ಮಹಾ ಕುಂಭಮೇಳವು ಹಿಂದೂ ಸಂಸ್ಕೃತಿಯ ಧಾರ್ಮಿಕ ಮತ್ತು ಪೌರಾಣಿಕ ಪರಂಪರೆಯನ್ನು ಪ್ರತಿಬಿಂಬಿಸುವ ಮಹತ್ವಪೂರ್ಣ ಉತ್ಸವವಾಗಿದ್ದು, ಭಕ್ತರಿಗೆ ಆಧ್ಯಾತ್ಮಿಕ ಶುದ್ಧೀಕರಣ ಮತ್ತು ಪಾಪಮೋಚನೆಗಾಗಿ ಒಂದು ಮಹಾ ವೇದಿಕೆ ಸೃಷ್ಟಿಸುತ್ತದೆ.

ವಂದನೆಗಳೊಂದಿಗೆ,

ಡಾ.ಈ.ಸಿ.ನಿಂಗರಾಜ್ ಗೌಡ
ಸಿಂಡಿಕೇಟ್ ಮಾಜಿ ಸದಸ್ಯರು,
ಮೈಸೂರು ವಿಶ್ವವಿದ್ಯಾನಿಲಯ,
ಮೊಬೈಲ್ ನಂಬರ್ : 9980184789

Leave a Reply

Your email address will not be published. Required fields are marked *