ನಂದಿನಿ ಮೈಸೂರು
ಜಿಲ್ಲಾ ನಾಯಕ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ,ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಅದ್ದೂರಿಯಾಗಿ ನೆರವೇರಿತು.
ಮೈಸೂರಿನ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವುದರ ಮೂಲಕ ವೇದಿಕೆ ಗಣ್ಯರು ಚಾಲನೆ ನೀಡಿದರು.
ಜಿಲ್ಲಾ ನಾಯಕರ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ
ಅಧ್ಯಕ್ಷರಾದ ನಾಗಲಿಂಗಪ್ಪ ನೇತೃತ್ವದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಬಡ ಕುಟುಂಬದಲ್ಲಿ ಬೆಳೆದ ನಾನು ಓದಿ ಶಿಕ್ಷಕನಾಗಿದ್ದೇನೆ. ಕಳೆದ 16 ವರ್ಷಗಳಿಂದ ವಿಧ್ಯಾರ್ಥಿಗಳನ್ನ ಪ್ರೋತ್ಸಾಹಿಸುತ್ತಾ ಬಂದಿದ್ದು ಈ ವರ್ಷವೂ ಕೂಡ ಕಾರ್ಯಕ್ರಮ ಮಾಡಿದ್ದೇನೆ.
ನಿವೃತ್ತಿಯ ನಂತರವೂ ವಿಧ್ಯಾರ್ಥಿಗಳಿಗೆ ಇದೇ ರೀತಿ ಪ್ರೋತ್ಸಾಹಿಸುತ್ತೇನೆ.ಪ್ರಸ್ತುತ ನಂಜನಗೂಡಿನಲ್ಲಿ ನಡೆಯುವ ಚುನಾವಣೆಯಲ್ಲಿ ನಾನು ಸ್ಪರ್ಥಿಸಿದ್ದೇನೆ.ನಾನು ನಿವೃತ್ತಿ ಆದ ನಂತರ ರಾಜಕೀಯಕ್ಕೆ ಹೋಗಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ ಮಂಜುನಾಥ್, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಕ್ಯಾತನಹಳ್ಳಿ ನಾಗರಾಜು , ಕರ್ನಾಟಕ ರಾಜ್ಯ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ,
ಜವರೇಗೌಡ ಪ್ರಭಾಕರ ಹುಣಸೂರು, ರಾಜು ಮಾರ್ಕೇಟ್, ಕೃಷ್ಣಮೂರ್ತಿ , ಮೋಹನ್ ಕುಮಾರ್,
ಉಪಾಧ್ಯಕ್ಷರಾದ ಕರಿಯಪ್ಪನಾಯಕ, ಕಾರ್ಯದರ್ಶಿ ಕುಮಾರ್ ಜವರನಾಯಕ, ಮಂಜುನಾಥ್ ಟಿ ಟಿ, ಮಾದೇಶ್ ಮುಂತಾದವರು ಭಾಗವಹಿಸಿದ್ದರು.