ಪ್ರತಿ ಮನೆಯ ಉಳಿತಾಯವನ್ನು ಸುಧಾರಿಸುವ ಉದ್ದೇಶದಿಂದ “ಗುಲ್ಲಕ್” ಖಾತೆಯನ್ನು ಪ್ರಾರಂಭಿಸಿದ ಫಿನೋ ಬ್ಯಾಂಕ್

*ಪ್ರತಿ ಮನೆಯ ಉಳಿತಾಯವನ್ನು ಸುಧಾರಿಸುವ ಉದ್ದೇಶದಿಂದ “ಗುಲ್ಲಕ್” ಖಾತೆಯನ್ನು ಪ್ರಾರಂಭಿಸಿದ ಫಿನೋ ಬ್ಯಾಂಕ್*

ಗ್ರಾಹಕರು ಡೆಬಿಟ್ ಕಾರ್ಡ್ ಮತ್ತು ಮಾಸಿಕ ಬಡ್ಡಿಯನ್ನು ಪಾವತಿಸುವ ಮೂಲಕ ರೂ. 2 ಲಕ್ಷದವರೆಗೆ ವಿಮಾ ರಕ್ಷಣೆಯನ್ನು ಪಡೆಯಲಿದ್ದಾರೆ.

ಮೈಸೂರು, 14 ನವೆಂಬರ್ 2024: ಗ್ರಾಹಕರಿಗೆ ಬ್ಯಾಂಕಿಂಗ್ಅನ್ನು ಸುಲಭ, ಸರಳ ಮತ್ತು ಅನುಕೂಲಕರವಾಗಿಸಿರುವ ಫಿನೋ ಪೇಮೆಂಟ್ಸ್ ಬ್ಯಾಂಕ್, ಈಗ ಗ್ರಾಹಕರು ಉಳಿತಾಯವನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದೆ. ಗ್ರಾಹಕರಿಗೆ ಮೌಲ್ಯಯುತ ಸೇವೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ತನ್ನ ಪ್ರಯತ್ನಗಳನ್ನು ಮುಂದುವರೆಸಿರುವ ಫಿನೋ ಬ್ಯಾಂಕ್, ಹಲವಾರು ಪ್ರಯೋಜನಗಳನ್ನು ಒದಗಿಸುವ ಮೂಲಕ ಗ್ರಾಹಕರ ಅನನ್ಯ ಅಗತ್ಯಗಳನ್ನು ಪೂರೈಸಲು, ಅವರ ಉಳಿತಾಯವನ್ನು ಸುಧಾರಿಸುವ ಉದ್ದೇಶದಿಂದ ಹೊಸ ಉಳಿತಾಯ ಖಾತೆ “ಗುಲ್ಲಕ್” ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

ಕರ್ನಾಟಕ ರಾಜ್ಯದಾದ್ಯಂತ ಹರಡಿರುವ ಸುಮಾರು 22,000 ಫಿನೋ ಬ್ಯಾಂಕ್ನ ಮರ್ಚೆಂಟ್ ಪಾಯಿಂಟ್ಗಳಲ್ಲಿ ಗುಲ್ಲಕ್ ಖಾತೆಯನ್ನು ತೆರೆಯಬಹುದು ಮತ್ತು ಬ್ಯಾಂಕಿಂಗ್ ಪ್ರಯೋಜನಗಳನ್ನು ಆನಂದಿಸಬಹುದು. 1000 ರೂ.ಗಳ ಕನಿಷ್ಠ ಖಾತೆಯ ಬ್ಯಾಲೆನ್ಸ್ನೊಂದಿಗೆ, ಗುಲ್ಲಕ್ ಖಾತೆದಾರರು ಯಾವುದೇ ವಾರ್ಷಿಕ ಯೋಜನಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ, ಯಾವುದೇ ಶುಲ್ಕವಿಲ್ಲದೆ ನಗದು ಠೇವಣಿಗಳನ್ನು ಮಾಡಬಹುದು, ನಾನ್-ಮೆಟ್ರೋ ನಗರಗಳಲ್ಲಿ 7 ಉಚಿತ ಎಟಿಎಂ ವಹಿವಾಟುಗಳನ್ನು ಮಾಡಬಹುದು ಮತ್ತು ರುಪೇ ಡೆಬಿಟ್ ಕಾರ್ಡ್ನಲ್ಲಿ ವಿವಿಧ ಕೊಡುಗೆಗಳನ್ನು ಪಡೆಯಬಹುದು.ಕೆಲವು ಮಾನದಂಡಗಳನ್ನು ಪೂರೈಸಿದ ಮೇಲೆ ಕನಿಷ್ಠ ಖಾತೆಯ ಬ್ಯಾಲೆನ್ಸ್ ಅನ್ನು ಕೂಡ ಮನ್ನಾ ಮಾಡುವುದು ಒಂದು ಉತ್ತೇಜಕ ಪ್ರತಿಪಾದನೆಯಾಗಿದೆ.

ಫಿನೋ ಪೇ (FinoPay) ಮೊಬೈಲ್ ಅಪ್ಲಿಕೇಶನ್ನ ಮೂಲಕ ತಿಂಗಳಿಗೆ 500 ರೂಪಾಯಿ ಮೌಲ್ಯದ ಐದು UPI ವಹಿವಾಟುಗಳನ್ನು ಮಾಡಿದರೆ ಅಥವಾ ಫಿನೋ ಪಾಲುದಾರ ಬ್ಯಾಂಕ್ನಲ್ಲಿ ಕನಿಷ್ಠ 5000 ರೂಪಾಯಿಗಳ ಒಂದು ವರ್ಷದ ಸ್ಥಿರ ಠೇವಣಿ ಇಟ್ಟರೆ ಅಥವಾ ಖಾತೆಯಲ್ಲಿ ಯಾವುದೇ ಸರ್ಕಾರಿ ಕಲ್ಯಾಣ ಯೋಜನೆಯ ಅನುದಾನ ಜಮಾ ಆಗುವಂತೆ ಮಾಡಿದರೆ; ಗ್ರಾಹಕರು ಮೇಲಿನ ಮೂರು ಮಾನದಂಡಗಳಲ್ಲಿ ಯಾವುದಾದರೂ ಒಂದನ್ನು ಪೂರೈಸಿದರೆ, ಖಾತೆಯ ಬ್ಯಾಲೆನ್ಸ್ 1000 ರೂ.ಗಿಂತ ಕಡಿಮೆಯಿದ್ದರೂ ಸಹ, ಕನಿಷ್ಠ ಬ್ಯಾಲೆನ್ಸ್ಅನ್ನು ನಿರ್ವಹಿಸದಿದ್ದಕ್ಕಾಗಿ ಯಾವುದೇ ಶುಲ್ಕಗಳು ಅನ್ವಯವಾಗುವುದಿಲ್ಲ.

ಬಹುಪಾಲು ಜನರು ತಮ್ಮ ಬ್ಯಾಂಕ್ ಖಾತೆಗಳಿಂದ ಎಲ್ಲಾ ಅಥವಾ ಹೆಚ್ಚಿನ ಹಣವನ್ನು ಹಿಂತೆಗೆದುಕೊಂಡು, ಉಳಿತಾಯ ಮತ್ತು ಹೂಡಿಕೆ ಮಾಡುವ ಅವಕಾಶವನ್ನು ಕಳೆದುಕೊಳ್ಳುವ ಇಂದಿನ ಸಂದರ್ಭಗಳಲ್ಲಿ, ಗುಲ್ಲಕ್ (ಪಿಗ್ಗಿ ಬ್ಯಾಂಕ್) ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.

ಗುಲ್ಲಕ್ ಉಳಿತಾಯ ಖಾತೆಯನ್ನುಘೋಷಿಸುವ ಸಂದರ್ಭದಲ್ಲಿ ಫಿನೋ ಪೇಮೆಂಟ್ಸ್ ಬ್ಯಾಂಕ್ನ ಹಿರಿಯ ವಿಭಾಗೀಯ ಮುಖ್ಯಸ್ಥ ಶ್ರೀ. ರಾಹುಲ್ ಸಿಂಗ್ “ಗ್ರಾಹಕರು ಭವಿಷ್ಯದ ವೆಚ್ಚಗಳಿಗೆ ಮತ್ತು ಯಾವುದೇ ತುರ್ತು ಅಗತ್ಯಗಳಿಗಾಗಿ ಸಾಲವನ್ನು ತೆಗೆದುಕೊಳ್ಳುದೇ ತಮ್ಮದೇ ಒಂದು ನಿಧಿಯನ್ನು ಸೃಷ್ಟಿಸಲು ಹೆಚ್ಚಿನ ಉಳಿತಾಯದ ಗುರಿಯನ್ನು ಹೊಂದಿರಬೇಕು. ಸುರಕ್ಷತೆ ಮತ್ತು ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವ ಮೂಲಕ, ಗುಲ್ಲಕ್ ಮೂಲಕ ‘ಮೊದಲು ಉಳಿತಾಯ’ ಎಂಬ ಮನಸ್ಥಿತಿಯನ್ನು ಅಭಿವೃದ್ಧಿಪಡಿಸಲು ಖಾತೆದಾರರಿಗೆ ಸಹಾಯ ಮಾಡುವುದು ನಮ್ಮ ಉದ್ದೇಶವಾಗಿದೆ. ಹೆಚ್ಚಿನ ಠೇವಣಿಗಳು ಗ್ರಾಹಕರಿಗೆ ವಾರ್ಷಿಕವಾಗಿ 7.75% ವರೆಗೆ ಆಕರ್ಷಕ ಬಡ್ಡಿ ದರಗಳನ್ನು ಗಳಿಸಲು ಅನುವು ಮಾಡಿಕೊಡುತ್ತವೆ. ಖಾತೆಯಲ್ಲಿ ಕನಿಷ್ಠ ರೂ 1000 ಬ್ಯಾಲೆನ್ಸ್ ಹೊಂದಿರುವ ಗ್ರಾಹಕರು ತತ್ಕ್ಷಣ ರೂ 2 ಲಕ್ಷದವರೆಗಿನ ವಿಮಾ ರಕ್ಷಣೆಯ ಸೌಲಭ್ಯವಿರುವ ಡೆಬಿಟ್ ಕಾರ್ಡ್ಅನ್ನು ಪಡೆಯುತ್ತಾರೆ, ಮತ್ತು ಮಾಸಿಕ ಬಡ್ಡಿ ಪಾವತಿ ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯುತ್ತಾರೆ” ಎಂದು ಹೇಳಿದರು.

 

 

ಗುಲ್ಲಕ್ ಉಳಿತಾಯ ಖಾತೆಯೊಂದಿಗೆ ಫಿನೋ ಬ್ಯಾಂಕ್ ಹೆಚ್ಚಿನ ಬ್ಯಾಲೆನ್ಸ್ ಮತ್ತು ಮೌಲ್ಯಯುತ ಉಳಿತಾಯ ಆಧಾರಿತ ಬೆಳವಣಿಗೆಯನ್ನು ಉಳಿಸಿಕೊಳ್ಳುವ ಸಾಮರ್ಥ್ಯವಿರುವ ಗ್ರಾಹಕರನ್ನು ತಲುಪುವ ಗುರಿಯನ್ನು ಹೊಂದಿದೆ. ಪ್ರಾಥಮಿಕವಾಗಿ ಇವರು ಯುವ ವೃತ್ತಿಪರರು, ಸಣ್ಣ ಉದ್ಯಮಿಗಳು, ಮಹಿಳಾ ಉದ್ಯೋಗಿಗಳಾಗಿರಬಹುದು ಮತ್ತು ಸ್ವಯಂ ಉದ್ಯೋಗಿಗಳಾಗಿರಬಹುದು. 2 ಲಕ್ಷಕ್ಕಿಂತ ಹೆಚ್ಚು ಉಳಿಸುವ ಸಾಮರ್ಥ್ಯವಿರುವ ಗ್ರಾಹಕರು ಗುಲ್ಲಕ್ನಲ್ಲಿ ಉಳಿತಾಯ ಮಾಡಬಹುದು, ಇದರಲ್ಲಿ 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಪಾಲುದಾರ ಬ್ಯಾಂಕ್ನ ಸ್ವೀಪ್ ಖಾತೆಯಲ್ಲಿ ಹೆಚ್ಚಿನ ಬಡ್ಡಿ ದರವನ್ನು ನೀಡುವ ಠೇವಣಿಯಾಗಿ ಇಡಲಾಗುತ್ತದೆ. ಗುಲ್ಲಕ್ನೊಂದಿಗೆ, ಪೀನೋದ ನೆರೆಹೊರೆಯ ಬ್ಯಾಂಕಿಂಗ್ ಸೇವೆಗಳು, ಗ್ರಾಹಕರನ್ನು ಹೆಚ್ಚಿಸುವ ಮತ್ತು ಅವರ ಆರ್ಥಿಕ ಯೋಗಕ್ಷೇಮವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ.

ಇದಲ್ಲದೆ, ಫಿನೋದ ನೆರೆಹೊರೆಯ ಪಾಯಿಂಟ್ಗಳು ವಿಸ್ತೃತ ಗಂಟೆಗಳವರೆಗೆ ತೆರೆದಿರುತ್ತವೆ, ಅಲ್ಲಿ ಯಾವುದೇ ಬ್ಯಾಂಕಿನ ಗ್ರಾಹಕರು ವಹಿವಾಟು ಮಾಡಬಹುದು, ಠೇವಣಿ, ಹಿಂಪಡೆಯುವಿಕೆ, ಹಣ ವರ್ಗಾವಣೆ ಮತ್ತು ಸೇವಾ ಉತ್ಪನ್ನಗಳಾದ ಜೀವನ, ಆರೋಗ್ಯ ಮತ್ತು ಮೋಟಾರು ವಿಮೆ, ರೆಫರಲ್ ಲೋನ್ಗಳು ಮತ್ತು ಯುಟಿಲಿಟಿ ಬಿಲ್ಗಳನ್ನು ಪಾವತಿಸಬಹುದು. #ಎಂದೆದಿಗೂ!

Leave a Reply

Your email address will not be published. Required fields are marked *