ಎಸ್.ಟಿ.ಎಚ್.ಎಲ್. ಮಳಿಗೆಯಲ್ಲಿ ಸ್ಟಿಲ್ ಪರಿವರ್ತನ ಯಾತ್ರೆಗೆ ಎಸ್‌ಟಿಐಎಚ್‌ಎಲ್ ಕಂಪನಿಯ ನಿರ್ದೆಶಕ ಶ್ರೀ ವೋಲ್ಕರ್ ಚಾಲನೆ

ನಂದಿನಿ ಮನುಪ್ರಸಾದ್ ನಾಯಕ್

ಮೈಸೂರು : ನಗರದ ರಿಂಗ್ ರಸ್ತೆಯ ಹೊರವರ್ತುಲ ರಸ್ತೆಯಲ್ಲಿರುವ ಎಸ್.ಟಿ.ಎಚ್.ಎಲ್. ಮಳಿಗೆಯಲ್ಲಿ ಸ್ಟಿಲ್ ಪರಿವರ್ತನ ಯಾತ್ರೆಗೆ ಎಸ್‌ಟಿಐಎಚ್‌ಎಲ್ ಕಂಪನಿಯ ನಿರ್ದೆಶಕ ಶ್ರೀ ವೋಲ್ಕರ್ ಚಾಲನೆ ನೀಡಿದರು.

ನಂತರ ಮಾತನಾಡಿ ಕರ್ನಾಟಕದಾದ್ಯಂತ ಅನೇಕ ಕೃಷಿ ಜಿಲ್ಲೆಗಳನ್ನು ಒಳಗೊಂಡ ಪರಿವರ್ತನ ಯಾತ್ರೆಯು, ನೇರ ಉತ್ಪನ್ನದ ಅನುಭವಗಳ ಮೂಲಕ ರೈತ ಸಮುದಾಯದೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ಯಾತ್ರೆಯನ್ನು ಅಯೋಜನೆ ಮಾಡಲಾಗಿದೆ ಎಂದರು

ಪರಿಂದ್ ಪ್ರಭುದೇಸಾಯಿ ಮಾತನಾಡಿ ಈ‌ ಕಂಪನಿಗೆ ಇತಿಹಾಸವಿದೆ.ಏಳು ರಾಷ್ಟ್ರಗಳಲ್ಲಿ ನಮ್ಮ ಕಂಪನಿಯಿದ್ದು ರೈತರಿಗೆ ಉಪಯೋಗವಾಗುವಂತಹ
ಚೈನ್‌ಸಾಗಳು, ಸ್ಪ್ರೇಯರ್‌ಗಳು, ಬ್ಲೋವರ್‌ಗಳು, ಅರ್ಥ್ ಆಗರ್‌ಗಳು ಮತ್ತು ಬ್ಯಾಟರಿ ಚಾಲಿತ ಉಪಕರಣಗಳು ಸೇರಿದಂತೆ ಸಿಗುತ್ತವೆ.ಕೃಷಿ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಕಾರ್ಮಿಕರ ಕೊರತೆ ಹೆಚ್ಚುತ್ತಲೇ ಇದೆ. ಇದರಿಂದ ಕೃಷಿ ಯಂತ್ರೋಪಕರಣಗಳ ಬೇಡಿಕೆ ಹೆಚ್ಚಾಗಿದೆ. ಕಾರ್ಮಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಲು ಉತ್ತಮ‌ಉಪಕರಣ ಸ್ಟಿಲ್‌ ಕಂಪನಿಯಲ್ಲಿದೆ ಎಂದು ಹೇಳಿದರು

ಸಂಜಯ್ ವರ್ಮಾ ಮಾತನಾಡಿ ನಮ್ಮದು ಇದು ಕುಟುಂಬದ ಕಂಪನಿಯಾಗಿದ್ದು ನೂರಕ್ಕೂ ಹೆಚ್ಚು ಡೀಲರ್ಸ್ ಇದ್ದು ನಮ್ಮ ಕಂಪನಿಯ ಉಪಕರಣಗಳನ್ನು ಬಳಸುವುದಕ್ಕೆ ನಮ್ಮ ರೈತರು ಇಚ್ಚಿಸಿದ್ದಲ್ಲಿ ನಾವೇ ನೇರವಾಗಿ ಅವರ ಜಮೀನಿಗೆ ಹೋಗಿ ಅದರ ಕೆಲಸವನ್ನು ತಿಳಿಸುವಂತಹ ಕೆಲಸವನ್ನು ಮಾಡಲಿದ್ದು ನಂತರ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.

ಸ್ಟಿಲ್ ಕಂಪನಿ ಉಪಕರಣ ಬಳಸಿಕೊಂಡಿದ್ದು ಯಾವ ಸಮಸ್ಯೆ ಇಲ್ಲದೇ ವ್ಯವಸಾಯವನ್ನು ಮಾಡಲಾಗಿದೆ.ಈ ಕಂಪನಿಯ ಉಪಕರಣಗಳಿಂದ ವ್ಯವಸಾಯ ಮಾಡುವುದಕ್ಕೆ ಅನುಕೂಲ ಅಗುತ್ತದೆ ಎಂದು ಹೇಳಿದರು.

ಗ್ರಾಮೀಣ ಸಮುದಾಯಗಳಿಗೆ ನೇರ ಪ್ರಯೋಜನ ನೀಡುವ ತಳಮಟ್ಟದ ಉಪಕ್ರಮಗಳಲ್ಲಿ ಎಸ್‌ಟಿಐಎಚ್‌ಎಲ್ ನಿರಂತರ ಹೂಡಿಕೆಯನ್ನು ಅವರು ಮನಃಪೂರ್ವಕವಾಗಿ ಸ್ವಾಗತಿಸಿದರು ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *