ನಂದಿನಿ ಮೈಸೂರು
“ನಿಂಬಿಯಾ ಬನಾದ ಮ್ಯಾಗ ಪೇಜ್ – 1″ ಚಿತ್ರ ಏ.4 ರಂದು ರಾಜ್ಯಾಧ್ಯಂತ ಬಿಡುಗಡೆಗೊಳ್ಳಲಿದೆ ಎಂದು ವರನಟ ಡಾ. ರಾಜ್ ಕುಮಾರ್ ರವರ ಮೊಮ್ಮಗ,ಚಿತ್ರದ ನಟ ” ಷಣ್ಮುಖ ಗೋವಿಂದ್ ರಾಜ್” ತಿಳಿಸಿದರು.
ಮೈಸೂರಿನ ಖಾಸಗೀ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಮಲೆನಾಡಿನ ಬೆಂಗಾಡಿ ಗ್ರಾಮದ ಜಮೀನ್ದಾರ್ ಕುಟುಂಬದ ರಘುವೇಂದ್ರ ಮತ್ತು ವರಲಕ್ಷ್ಮಿ ದಂಪತಿಗೆ ಹತ್ತು ವರ್ಷದ ನಂತರ ಒಂದು ಗಂಡು ಮಗು ಜನಿಸುವುದು. ಮಗು ಹುಟ್ಟಿದ ಸ್ವಲ್ಪ ದಿನಗಳಲ್ಲೇ ತಂದೆ ರಘುವೇಂದ್ರನು ನಿಗೂಢವಾಗಿ ಸಾವನ್ನಪ್ಪುತ್ತಾನೆ. ನಂತರ ಮಗುವಿನ ಪ್ರಾಣಕ್ಕೆ ಆಪತ್ತಾಗಬಹುದೆಂದು ತಿಳಿದ ಮನೆಯ ಕೆಲಸಗಾರ ಕಪ್ಪಣ್ಣ, ತಾಯಿಗೂ ಸೇರಿದಂತೆ ಯಾರಿಗೂ ಈ ರಹಸ್ಯ ತಿಳಿಯದ ಹಾಗೆ ದೂರದ ಪಟ್ಟಣದಲ್ಲಿರುವ ತನ್ನ ಪರಿಚಯಸ್ತರಿಗೆ ಒಪ್ಪಿಸುವನು ಮಗುವಿನ ಪ್ರಾಣಾಪಾಯದ ವಿಷಯ ಅವರಿಗೆ ತಿಳಿಸಿ, ನಾನು ಬರುವವರೆಗೂ ಮಗು ನಿಮ್ಮ ಬಳಿಯೇ ಇರಲಿ, ಈ ಮಗುವಿನ ರಹಸ್ಯ ಯಾರಿಗೂ ತಿಳಿಯದಂತೆ ಆಣೆ ಮಾಡಿಸಿ ಹೊರಡುವನು. ಊರು ತಲುಪುವುದರಲ್ಲೇ ಆಕಸ್ಮಿಕವಾಗಿ ಎದೆ ನೋವಿನಿಂದ ಕಪ್ಪಣ್ಣ ಸಾವನ್ನಪ್ಪುವನು. ಮಗು ಯಾರ ಬಳಿ ಇದೆ ? ಎಲ್ಲಿದೆ ? ಆ ರಹಸ್ಯದ ಗುಟ್ಟು ಅವನಲ್ಲೇ ಉಳಿಯುವುದು… ಆದರೆ ತಾಯಿ ತನ್ನ ಮಗ ಅಚ್ಚಣ್ಣ ಇಂದಲ್ಲ ನಾಳೆ ಬಂದೆ ಬರುವನು ಎಂಬ ಅಚಲವಾದ ನಂಬಿಕೆಯಿಂದ ಕಾಯುತ್ತಿದ್ದಾಳೆ. ಹೀಗೆ ಕಾಲ ಉರುಳಿ 25 ವರ್ಷಗಳ ನಂತರ ತನ್ನ ತಾಯಿ ನೋಡಲು ಬೆಂಗಾ ಡಿಗೆ ಬರುವ ಅಚ್ಚಣ್ಣ, ತನ್ನ ಮಗ ಅಚ್ಚಣ್ಣನನ್ನು ಕಂಡು ತಾಯಿಗೆ ಮುಗಿಲು ಮುಟ್ಟಿದ ಸಂತೋಷ. ಅಚ್ಚಣ್ಣ ಬಂದಿದ್ದಾನೆ…. ಮುಂದೆ ಏನು ಅನ್ನುವುದೇ! ‘ನಿಂಬಿಯ ಬನಾದ ಮ್ಯಾಗ – ಪೇಜ್ – 1’ ಭಾಗ 1 ರ ಕಥಾ ಸಾರಾಂಶವಾಗಿದೆ.
ತಾರಾಗಣನೋಡುವುದಾರೇ: ಷಣ್ಮುಖ ಗೋವಿಂದರಾಜ್, ಮೇಘಮಾಲೆ’ ಖ್ಯಾತಿಯಾ ಸುನಾದ್ ರಾಜ್. ಸಂಗೀತಾ. ತನುಶ್ರೀ. ಪದ್ಮವಾಸಂತಿ. ರಾಮಕೃಷ್ಣ. ಮೂಗು ಸುರೇಶ್, ಸಂದೀಪ್ ಮಲಾನಿ. ತ್ರಿಷಾ. ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ : ಅಶೋಕ್ ಕಡಬ ನಿರ್ಮಾಪಕರು: ವಿ. ಮಾದೇಶ್ ಸಂಗೀತ : ಆರೋನ್ ಕಾರ್ತಿ & ಪ್ರವೀಣ್ ಶ್ರೀನಿ ಛಾಯಾಗ್ರಹಣ : ಸಿದ್ದು ಕಂಚನಹಳ್ಳಿ ಹಿನ್ನಲೆ ಸಂಗೀತ : ಪಳನಿ ಡಿ. ಸೇನಾಪತಿ ನೃತ್ಯ : ಮದನ್ ಹರಿಣಿ ಇದ್ಧಾರೆ.
ಸಿನಿಮಾ ಮಾಡಲು ಇಷ್ಟವಿದ್ದರೂ ನನ್ನನ್ನು ಹಾಕಿಕೊಳ್ಳಲು ಯಾರು ಮುಂದೆ ಬರುತ್ತಿರಲಿಲ್ಲ ತಂದೆ ತಾಯಿಯು ಸಹ ಇದರ ಬಗ್ಗೆ ನನ್ನನ್ನು ಕೇಳಲಿಲ್ಲ . ನಾನೊಂದು ಕಂಪನಿಯಲ್ಲಿ ಉದ್ಯೋಗಿಯಾಗಿದ್ದೆ. ನಿರ್ಮಾಪಕರಾದ ಮಹಾದೇಶ ಹಾಗೂ. ನಿರ್ದೇಶಕರಾದ ಅಶೋಕ್ ಕಡಬ ಅವರು. ನನ್ನನ್ನು ಸಂಪರ್ಕಿಸಿ ನಿಮಗಾಗಿ ಒಂದು ಚಿತ್ರಕಥೆ ಇದೆ ದಯವಿಟ್ಟು ನೀವೇ ಅದರಲ್ಲಿ ನಾಯಕ ನಟನ ಪಾತ್ರ ಮಾಡಬೇಕು ಎಂದು ಕೇಳಿಕೊಂಡರು. ತಂದೆ ತಾಯಿಗೆ ಒಪ್ಪಿಸಿ ಚಿತ್ರಕಥೆ ಕೇಳಿದಾಗ ನಡೆಸಲು ತಿಳಿಸಿದರು.
ಸುಂದರವಾದ ನಾಲ್ಕು ಹಾಡುಗಳು ಮೂಡಿಬಂದಿವೆ. ತಾತ ರಾಜಕುಮಾರ ಶಿವಣ್ಣ ರಾಘಣ್ಣನವರು ಹಾಕಿಕೊಟ್ಟ ಮಾರ್ಗದಲ್ಲೇ ನಡೆಯುತ್ತೇನೆ. ಎಂದು ಷಣ್ಮುಖ ರವರು ತಿಳಿಸಿದ್ದಾರೆ.
ನಂತರ ನಾಯಕ ನಟ ಸುನಾದ್ ರಾಜ್ ಮಾತನಾಡಿ 1993 ರಲ್ಲಿ . ಮೇಘಮಾಲೆ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೇ. ನಂತರ ಬಿಜಿನೆಸ್ ಕಡೆಗೆ ತೊಡಗಿಸಿಕೊಂಡೆ. ಒಂದು ಯೂಟ್ಯೂಬ್ ಸಂದರ್ಶನದಲ್ಲಿ ಇಂಟರ್ವ್ಯೂ ಕೊಟ್ಟಾಗ. ಅದರಲ್ಲಿ ಸುಮಾರು ಕಮೆಂಟ್ಗಳು ಬಂದಿತ್ತು. ಸರ್ ನೀವು ಯಾಕೆ ಪುನಃ ನಟನೆ ಮಾಡಬಾರದು ಎಂದರು. ನನ್ನ ಮಗಳ ಮುಂದೆ ಬಣ್ಣ ಹಚ್ಚಬೇಕೆಂದು ಪುನಃ ಸಿನಿಮಾದಲ್ಲಿ ನಟಿಸಿದೆ. ಈ ಚಿತ್ರದಲ್ಲಿ ಮೊದಲನೇ ಶಾರ್ಟ್ ಎದುರಿಸಿದಾಗ ನನಗೆ ಯಾವುದೇ ರೀತಿಯ ತೊಂದರೆ ಆಗಲಿಲ್ಲ 25 ವರ್ಷದ ಹಿಂದೆ ಹೇಗೆ ನಡೆಸಿದ್ದೇನೋ ಹಾಗೆ ನಟಿಸಿದೆ ಎಂದು ತಿಳಿಸಿದರು. ಕರ್ನಾಟಕದ 70 ಸಿನಿಮಾ ಮಂದಿರದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದರು.
ನಿರ್ಮಾಪಕ ಮದೇಶ್ ಅವರು ಮಾತನಾಡಿ ಸಿನಿಮಾ ಸುಮಾರು ಒಂದು ಕೋಟಿ ಬಜೆಟ್ ನಲ್ಲಿ ಚಿತ್ರ ನಿಮಾರ್ಣವಾಗಿದೆ.ಕನ್ನಡ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ನಿರ್ಮಾಪಕ ಎಸ್ಎ ಶ್ರೀನಿವಾಸ್. ಸಂದೀಪ್ ಮಲಾನಿ. ಮುಂತಾದವರು ಹಾಜರಿದ್ದರು.