ನಂದಿನಿ ಮೈಸೂರು
*ಮೈಸೂರಿನ ಭೋಲಾಸ್ ನಲ್ಲಿ ಹೊಸ ಎಕ್ಸ್ ಪೀರಿಯನ್ಸ್ ಜೋನ್ ಉದ್ಘಾಟಿಸಿದ ನಿಕಾನ್ ಇಂಡಿಯಾ*
• ನಿಕಾನ್ ಇಂಡಿಯಾ ಮೈಸೂರಿನಲ್ಲಿ ಅತ್ಯಾಧುನಿಕ ಎಕ್ಸ್ ಪೀರಿಯನ್ಸ್ ಜೋನ್ ಆರಂಭಿಸಿದ್ದು, ಇಲ್ಲಿ ಉತ್ಪನ್ನ ಪ್ರದರ್ಶನಗಳು, ತಜ್ಞರ ಕಾರ್ಯಾಗಾರಗಳು ನಡೆಯಲಿವೆ.
*ಮೈಸೂರು, ಆಗಸ್ಟ್ 11, 2025* : ನಿಕಾನ್ ಕಾರ್ಪೊರೇಷನ್‌ನ ಅಂಗಸಂಸ್ಥೆಯಾದ ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಮೈಸೂರಿನಲ್ಲಿ ತನ್ನ ಹೊಸ ಎಕ್ಸ್ ಪೀರಿಯನ್ಸ್ ಜೋನ್ ಅನ್ನು ಉದ್ಘಾಟಿಸಿದೆ. ಈ ಮಳಿಗೆಯು ಮೈಸೂರು ನಜರ್‌ಬಾದ್ ನ ಲಷ್ಕರ್‌ಮೊಹಲ್ಲದ ಬೆಂಗಳೂರು-ನೀಲಗಿರಿ ರಸ್ತೆಯಲ್ಲಿರುವ ಮಹಾರಾಜ ಶಾಪಿಂಗ್ ಕಾಂಪ್ಲೆಕ್ಸ್ (ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್ ಎದುರು)ನ ಭೋಲಾಸ್ ನಲ್ಲಿ ತೆರೆಯಲಾಗಿದೆ.
ದೇಶಾದ್ಯಂತ ಇರುವ ಗ್ರಾಹಕರೊಂದಿಗೆ ಸಂಪರ್ಕವನ್ನು ಗಾಢಗೊಳಿಸುವ ಮತ್ತು ಇಮೇಜಿಂಗ್ ಹಾಗೂ ಆಪ್ಟಿಕಲ್ ತಂತ್ರಜ್ಞಾನದ ಉತ್ಪನ್ನಗಳ ಪ್ರದರ್ಶಿಸುವ ಉದ್ದೇಶದಿಂದ ಈ ಹೊಸ ಮಳಿಗೆ ತೆರೆಯಲಾಗಿದೆ. ಈ ಮೂಲಕ ನಿಕಾನ್ ಇಂಡಿಯಾ ದಕ್ಷಿಣ ಭಾರತದ ಛಾಯಾಗ್ರಹಣ ಆಸಕ್ತರು, ಕಂಟೆಂಟ್ ಕ್ರಿಯೇಟರ್ ಗಳು ಮತ್ತು ವೃತ್ತಿಪರರಿಗೆ ತನ್ನ ನವೀನ ಉತ್ಪನ್ನ ಶ್ರೇಣಿಯನ್ನು ಮತ್ತು ಅತ್ಯುತ್ತಮ ಅನುಭವವನ್ನು ಒದಗಿಸಲಿದೆ.
ಈ ಕುರಿತು ಮಾತನಾಡಿರುವ ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಜ್ಜನ್ ಕುಮಾರ್ ಅವರು, “ನಿಕಾನ್ ಇಂಡಿಯಾದಲ್ಲಿ ನಾವು ನಮ್ಮ ಕಂಟೆಂಟ್ ಕ್ರಿಯೇಟರ್ ಗಳ ಮತ್ತು ಛಾಯಾಗ್ರಹಣ ವೃತ್ತಿಪರರ ಜೊತೆಗೆ ಸಂಪರ್ಕದಲ್ಲಿರಲು ನಾವು ನಿರಂತರವಾಗಿ ಶ್ರಮಿಸುತ್ತೇವೆ. ಮೈಸೂರಿನಲ್ಲಿ ನಮ್ಮ ಹೊಸ ಎಕ್ಸ್ ಪೀರಿಯನ್ಸ್ ಜೋನ್ ನ ಉದ್ಘಾಟನೆಯು ಹೊಸ ಮಾರುಕಟ್ಟೆಗಳಿಗೆ ವಿಶ್ವದರ್ಜೆಯ ಉತ್ಪನ್ನಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕೇಂದ್ರದಲ್ಲಿ ನಮ್ಮ ಅತ್ಯಾಧುನಿಕ ಕ್ಯಾಮೆರಾ ಉತ್ಪನ್ನ ಮತ್ತು ಆಕ್ಸೆಸರೀಸ್‌ಗಳನ್ನು ಪ್ರದರ್ಶಿಸಲಾಗುತ್ತದೆ. ಜೊತೆಗೆ ಟ್ರಯಲ್‌ಗಳು, ಕಾರ್ಯಾಗಾರಗಳು ಮತ್ತು ತಜ್ಞರ ಸಮಾಲೋಚನೆ ಕೂಡ ನಡೆಯಲಿದೆ” ಎಂದರು.
ಇಲ್ಲಿ ನಿಕಾನ್‌ನ ಡಿಎಸ್‌ಎಲ್‌ಆರ್‌ಗಳು, ಮಿರರ್‌ಲೆಸ್ ಕ್ಯಾಮೆರಾಗಳು, ನಿಕ್ಕಾರ್ ಲೆನ್ಸ್ ಗಳು, ಸ್ಪೋರ್ಟ್ಸ್ ಆಪ್ಟಿಕ್ಸ್ ಮತ್ತು ಇತ್ತೀಚಿನ ಇಮೇಜಿಂಗ್ ಆವಿಷ್ಕಾರಗಳು ಲಭ್ಯವಿರಲಿದೆ. ಗ್ರಾಹಕರಿಗೆ ನಿಕಾನ್ ನ ಸುಧಾರಿತ ತಂತ್ರಜ್ಞಾನವನ್ನು ನೇರವಾಗಿ ತಿಳಿಸಲು ಮತ್ತು ತಮ್ಮ ಛಾಯಾಗ್ರಹಣ ಅಗತ್ಯಗಳ ಬಗ್ಗೆ ತಿಳಿವಳಿಕೆಯ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಲು ಈ ಜೋನ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ www.nikon.co.in ಗೆ ಭೇಟಿ ನೀಡಿ ಅಥವಾ ಝಡ್ ಸೀರೀಸ್ ಮಿರರ್‌ಲೆಸ್ ಕ್ಯಾಮೆರಾ ಸಿಸ್ಟಮ್ ಕುರಿತು ಇಲ್ಲಿ ತಿಳಿಯಿರಿ- http://nikn.ly/Zseries_IN.
Facebook: www.facebook.com/nikonIndia
Instagram: https://www.instagram.com/nikonindiaofficial/
Microsite: www.capturewithnikon.in/
LinkedIn: https://www.linkedin.com/company/nikon-india-private-limited/
Twitter: https://twitter.com/NikonIndia
ನಿಕಾನ್ ಇಂಡಿಯಾ ಉತ್ಪನ್ನಗಳ ಮಾರಾಟ ಮಾಹಿತಿ ಹಾಗೂ ನೆರವಿಗಾಗಿ ಮೇಲ್ ಮಾಡಿ: nindsales@nikon.com & ಸೇವೆಗೆ ಸಂಬಂಧಿಸಿದ ವಿಚಾರಣೆಗಳಿಗೆ ದಯವಿಟ್ಟು ಈ ಐಡಿಗೆ ಮೇಲ್ ಮಾಡಿ: nindsupport@nikon.com