ನಂದಿನಿ ಮೈಸೂರು
ಛಲವಾದಿ ನಾರಾಯಣಸ್ವಾಮಿ
ಸಿದ್ದರಾಮಯ್ಯ ಒಬ್ಬ ತಲೆ ಹಿಡುಕ ಎಂಬ ಅವಾಚ್ಯ ಶಬ್ದಗಳನ್ನ ಬಳಸಿದ್ದಾರೆ.ಯಾರದೂ ಕಾಲು ಹಿಡಿದು ಸಿಎಂ ಅವರು ಎಂದು ಹೇಳಿದ್ದಾರೆ.ತಮಗೆ ಅಂಬೇಡ್ಕರ್ ಬಗ್ಗೆ ಎಷ್ಟು ಗೌರವವಿದೆ ಎಂದು ತಿಳಿಸಲಿ ಅಂತ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮ್ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ವಿಚಾರವಾಗಿ
ಮೈಸೂರಿನಲ್ಲಿ ಕಾಂಗ್ರೆಸ್ ಭವನದಲ್ಲಿ
ಗ್ರಾಮಾಂತರ ಜಿಲ್ಲಾಧ್ಯಕ್ಷರು ಡಾ ಬಿಜೆ ವಿಜಯ್ ಕುಮಾರ್ ನೇತೃತ್ವದಲ್ಲಿ
ಹಿಂದುಳಿದ ವರ್ಗಗಳ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಬಿಜೆಪಿಯಲ್ಲಿ MLA, MLCಗಳ ಮೂಲಕ ಸುಪಾರಿ ಕೊಟ್ಟು ಮುಗಿಸುವ ಕೆಲಸಕ್ಕೆ ಆತನು ಕೈ ಜೋಡಿಸಿದ್ದಾನೆ.
ಧಮ್ ಇದ್ದರೆ ಮೀಸಲಾತಿಯುಳ್ಳ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ.
ಇಡೀ ದಲಿತ ಸಮುದಾಯ ನಾರಾಯಣಸ್ವಾಮಿಯನ್ನ ಕ್ಷಮಿಸುವುದಿಲ್ಲ.
ಸಿದ್ದರಾಮಯ್ಯ ಒಬ್ಬ ಹಿಂದುಳಿದ ವರ್ಗಗಳ ನಾಯಕ.
ತಮಗೆ ಅಧಿಕಾರ ಸಿಗಲಿಲ್ಲ ಎಂದು ಪದೇ ಪದೇ ಟೀಕೆ ಮಾಡೋದು ಸರಿಯಿಲ್ಲ.
ಮುಂದಿನ ದಿನಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಛಲವಾದಿ ನಾರಾಯಣಸ್ವಾಮಿ ಬಿಜೆಪಿಯ ನಾಯಿಮರಿ.
ಮೈಸೂರಿನಲ್ಲೊಂದು, ಬೆಂಗಳೂರಿನಲ್ಲೊಂದು ನಾಯಿಮರಿ ಇದೆ.
ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮ್ ವ್ಯಂಗ್ಯವಾಡಿದ್ದಾರೆ.
ಆತ ಕೋಲಾರ ಪಂಗ್ಚರ್ ಹಾಕೊಂಡು ನಿಂತಿದ್ದ.
ಪಾರ್ಟಿಯಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಬಿಜೆಪಿ ಗೆ ಹೋಗಿರೋದು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ
ಅಂಬೇಡ್ಕರ್ ನಿಗಮಕ್ಕ್ಕೆ ಅಧ್ಯಕ್ಷ ಆಗಬೇಕು ಎಂದುಕೊಂಡಿದ್ದ.
ಆದರೆ ಅದು ಸಾಧ್ಯವಾಗದ ಹಿನ್ನೆಲೆ.ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನೇ ಸೋಲಿಸಲು ವರುಣಗೆ ಬಂದದ್ದರು.
ಸಿದ್ದರಾಮಯ್ಯ ಮಾತ್ರ ಟೀಕೆ ಮಾಡೋದೇ ಈತನ ಕೆಲಸವಾಗಿದೆ.
ಕಾಂಗ್ರೆಸ್ ನ ಉಳಿದ ಯಾವುದೇ ನಾಯಕರ ವಿರುದ್ಧ ಟೀಕೆ ಮಾಡುತ್ತಿಲ್ಲ.
ಈತ ಒಬ್ಬ RSS ಜೊತೆಗಿರುವ ನಾಯಿಮರಿ.
ಬಿಜೆಪಿಯವರು ಸಿದ್ದರಾಮಯ್ಯ ಅವರನ್ನ ಟಾರ್ಗೆಟ್ ಮಾಡಿ ನಾರಾಯಣಸ್ವಾಮಿಯನ್ನ ಬಿಟ್ಟಿದ್ದಾರೆ.
ಆತ ಬಿಜೆಪಿಯಲ್ಲಿ ಗರ್ಭಗುಡಿ ತೋರಿಸುತ್ತಾರೆ ಎಂದು ಕೊಂಡಿರಬಹುದು.
ವರುಣದ ಚಿಕ್ಕಹಳ್ಳಿ ಪಕ್ಷದಲ್ಲಿದ್ದರೂ ಸಿದ್ದರಾಮಯ್ಯರನ್ನ ಸೋಲಿಸಲು ಹಣ ಹಂಚಲು ಬಂದಿದ್ದರು.
ಅಂದು ನನಗೆ ಸಿಕ್ಕಿಬಿದ್ದಿದ್ದರು.
ಸಿದ್ದರಾಮಯ್ಯ ಸೋತರೆ ಪರಮೇಶ್ವರ್ ಸಿಎಂ ಆಗ್ತಾರೆ ಎಂದು ಸುಳ್ಳು ಹೇಳಿ ಸಿದ್ದರಾಮಯ್ಯ ಸೋಲಿಸಲು ಬಂದ ವ್ಯಕ್ತಿ ಈತ.
ಸದ್ಯ ಬಿಜೆಪಿಯಲ್ಲಿ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.