ನಂದಿನಿ ಮೈಸೂರು
ನಕಲಿ ದಾಖಲೆ ಸೃಷ್ಟಿಸಿ ಕ್ಯಾಥಗಲ್ ಪ್ಯಾರಿಸ್ ಸೊಸೈಟಿ ಸ್ಯಾನ್ಲಿ ಅಲ್ಮೇಡ ಹಾಗೂ
ಎಂ.ಎಂ.ಜಿ ಕಂಟ್ರಕ್ಷನ್ ಜಯರಾಮ್ ಜಂಟಿಯಾಗಿ ಮೂಢ ಅಧಿಕಾರಿಗಳ ಜೊತೆ ಶಾಮೀಲಾಗಿ 55 ಸೈಟ್ ಪಡೆದಿದ್ದಾರೆ ಎಂದು MYSORE DIVISION CATHOLIC CHRISTIAN ASSOCIATION ನ ಸ್ಟೀಫನ್ ಸುಜೀತ್ ಗಂಭೀರಾ ಆರೋಪ ಮಾಡಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕ್ಯಾಥಗಲ್ ಪ್ಯಾರಿಕ್ ಸೊಸೈಟಿ 1992 ರಲ್ಲಿ 1462 ಸೈಟ್ ನಮ್ಮ ಸಮುದಾಯದ ಬಡವರಿಗೆ ಫಾಧರ್ ಡೆನ್ನಿಸ್ ಮೊರಲಾ ಅವರು 108 ಎಕರೆ ಜಮೀನು ಖರೀದಿಸಿ ದೇವನೂರು ಭಾಗದಲ್ಲಿ ಹಂಚಿಕೆ ಮಾಡಿದ್ದಾರೆ.1992 ರಲ್ಲಿ ಮೂಡಾ ಅದನ್ನ ಸ್ವಾಧೀನ ಪಡಿಸಿಕೊಂಡಿತ್ತು.ತದನಂತರ ಮೂಡಾ ಮತ್ತೆ ಸರ್ಕಾರದ ವಿರುದ್ಧ ಹೋರಾಡಲೂ ಒಂದು ಕ್ಯಾಥಗಲ್ ಪ್ಯಾರಿಸ್ ಸೊಸೈಟಿ ಮಾಡಿದರು.ಈ ಸೊಸೈಟಿಯಲ್ಲಿ ಯಾವುದೇ ಸೈಟ್ ಗಳು ಇರುವುದಿಲ್ಲ ಇವರು ಜಮೀನಿನ ಮಾಲೀಕರಲ್ಲ ಬರೀ ಓಡಾಡುವ ಸಂಸ್ಥೆ ಮಾಡಿಕೊಂಡವರು.ಬಿಜೆಪಿ ಅವಧಿಯಲ್ಲಿ 50-50 ಅನುಪಾತದ ಅಡಿಯಲ್ಲಿ 55 ಸೈಟ್ಗಳನ್ನ ಸೊಸೈಟಿಗೆ ಕೊಡಲಾಗುತ್ತದೆ. ನಕಲಿ ದಾಖಲಾತಿ ಸೃಷ್ಟಿಸಿ ಬಡವರ ಸೈಟ್ ,5 ಎಕರೆಯನ್ನ ಮೂಡಾ ಅಧಿಕಾರಿಗ ಜೊತೆ ಶಾಮಿಲಾಗಿ 55 ಸೈಟ್ ಆರ್.ಟಿ.ನಗರ,ದೇವನೂರು,ನಾಚನಹಳ್ಳಿ ಪಾಳ್ಯ ಎಲ್ಲಾ ಕಡೆ 50:50 ಸೈಟ್ ಪಡೆದಿದ್ದಾರೆ.25 ರಿಂದ 30 ಸೈಟ್ ಮಾತ್ರ ಮಾದ್ಯಮಗಳಲ್ಲಿ ವರದಿಯಾಗಿದೆ.ಆದರೆ ಅವರು ಪಡೆದಿರುವುದು 55 ಸೈಟ್ .ಲೋಕಾಯುಕ್ತ,ಇಡಿ ಅಧಿಕಾರಿಗಳು ತೀವ್ರವಾಗಿ ತನಿಖೆ ಮಾಡಬೇಕು.ಅವರ ವಿರುದ್ಧ MYSORE DIVISION CATHOLIC CHRISTIAN ASSOCIATION ವತಿಯಿಂದ ಲೋಕಾಯುಕ್ತ,ಇಡಿ ಅಧಿಕಾರಿಗಳಿಗೆ ದೂರ ಸಲ್ಲಿಸುತ್ತಿದ್ದೇವೆ.55 ಸೈಟ್ಗಳ ನೋಂದಣಿಯನ್ನು ಕೂಡಲೇ ರದ್ದು ಮಾಡಿ ಈ 55 ಸೈಟ್ಗಳನ್ನು ಮೂಡಾ ಮರುಪಡೆಯಲು ಸರ್ಕಾರ ಆದೇಶಿಸಬೇಕೆಂದು ಒತ್ತಾಯಿಸಲಿದ್ದೇವೆ.ಸಿಎಂ ಸಿದ್ದರಾಮಯ್ಯ ಪತ್ನಿ ಪಡೆದಿದ್ದ 14 ಸೈಟ್ ರದ್ದಾಯ್ತೋ ಹಾಗೇಯೇ 55 ಸೈಟ್ ರದ್ದಾಗಬೇಕು.ಎಂ.ಎಂ.ಜಿ ಕಂಟ್ರಕ್ಷನ್ ಎಂಬ ಗಾರೆ ಕೆಲಸ ಮಾಡುವ ಜಯರಾಮ್ ಅವರಿಗೆ ಸೈಟ್ ಕೊಟ್ಟಿದ್ದಾರೆ.ಕ್ಯಾಥಗಲ್ ಪ್ಯಾರಿಸ್ ಸೊಸೈಟಿ ಹಾಗೂ
ಎಂ.ಎಂ.ಜಿ ಕಂಟ್ರಕ್ಷನ್ ಜಂಟಿ ಮೂಡ ಅಧಿಕಾರಿಗಳ ಜೊತೆ ಶಾಮೀಲಾಗಿ ಸೈಟ್ ಪಡೆದಿದ್ದಾರೆ.ಈ ಅಕ್ರಮದಲ್ಲಿ ಭಾಗಿಯಾದವರಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತಿದ್ದೇವೆ ಎಂದರು.