ಮೈಸೂರು ವಿಶ್ವವಿದ್ಯಾನಿಲಯದ ಬಿ.ಐ.ಎಂ.ಎಸ್. ಎಂಬಿಎ ವಿಭಾಗದ ಸುವರ್ಣ ಮಹೋತ್ಸವ ಸಮಾರೋಪ: ಮುಖ್ಯ ಅತಿಥಿಯಾಗಿ ಬ್ರಿಗೇಡ್ ಗ್ರೂಪ್ ಅಧ್ಯಕ್ಷ ಎಂ.ಆರ್. ಜೈಶಂಕರ್ ಭಾಗಿ

ನಂದಿನಿ ಮನುಪ್ರಸಾದ್ ನಾಯಕ್

*ಮೈಸೂರು ವಿಶ್ವವಿದ್ಯಾನಿಲಯದ ಬಿ.ಐ.ಎಂ.ಎಸ್. ಎಂಬಿಎ ವಿಭಾಗದ ಸುವರ್ಣ ಮಹೋತ್ಸವ ಸಮಾರೋಪ: ಮುಖ್ಯ ಅತಿಥಿಯಾಗಿ ಬ್ರಿಗೇಡ್ ಗ್ರೂಪ್ ಅಧ್ಯಕ್ಷ ಎಂ.ಆರ್. ಜೈಶಂಕರ್ ಭಾಗಿ*


ಮೈಸೂರು ವಿಶ್ವವಿದ್ಯಾನಿಲಯದ ಬಿ.ಎನ್. ಬಹದ್ದೂರ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸಸ್ (ಬಿಐಎಂಎಸ್), ವ್ಯವಹಾರ ಆಡಳಿತ ಅಧ್ಯಯನ ವಿಭಾಗವು ಮ್ಯಾನೇಜ್ಮೆಂಟ್ ಶಿಕ್ಷಣ ಕ್ಷೇತ್ರದಲ್ಲಿ 50 ವರ್ಷಗಳನ್ನು ಪೂರೈಸಿರುವ ಐತಿಹಾಸಿಕ ಸಾಧನೆ ಮಾಡಿದ್ದು, ಸುವರ್ಣ ಮಹೋತ್ಸವ ಸಂಭ್ರಮಾಚರಣೆಗೆ ಸಜ್ಜಾಗಿದೆ. ಈ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭವು ಮಾರ್ಚ್ 28, 2026, ಶನಿವಾರದಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:30 ರವರೆಗೆ ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ನಡೆಯಲಿದೆ.

ಮೈಸೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಎನ್. ಕೆ. ಲೋಕನಾಥ್ ಅವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಸಮಾರಂಭದ ಮುಖ್ಯ ಅತಿಥಿಗಳಾಗಿ ಬ್ರಿಗೇಡ್ ಗ್ರೂಪ್‌ ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಶ್ರೀ ಎಂ.ಆರ್. ಜೈಶಂಕರ್ ಅವರು ಆಗಮಿಸಲಿದ್ದಾರೆ. ಇವರು ಎಂಬಿಎ ವಿಭಾಗದ ಪ್ರಥಮ ಬ್ಯಾಚ್‌ ನ ಹಳೆಯ ವಿದ್ಯಾರ್ಥಿಯಾಗಿರುವುದು ವಿಶೇಷ. ದೂರದೃಷ್ಟಿಯ ಉದ್ಯಮಿಯಾದ ಇವರು ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಬ್ರಿಗೇಡ್ ಗ್ರೂಪ್ ಅನ್ನು ರಾಷ್ಟ್ರಮಟ್ಟದ ಪ್ರಸಿದ್ಧ ಬ್ರ್ಯಾಂಡ್ ಆಗಿ ಬೆಳೆಸಿದ್ದಾರೆ. ಇತರ ಗಣ್ಯ ಅತಿಥಿಗಳಾಗಿ ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಶ್ರೀಮತಿ ಎಂ. ಕೆ. ಸವಿತಾ ಮತ್ತು ರಿಜಿಸ್ಟ್ರಾರ್ (ಮೌಲ್ಯಮಾಪನ) ಪ್ರೊ. ಎನ್. ನಾಗರಾಜ ಅವರು ಭಾಗವಹಿಸಲಿದ್ದಾರೆ.

ಹಳೆ ವಿದ್ಯಾರ್ಥಿ ಸಂಘದ ಸೇರ್ಪಡೆ ಮತ್ತು ಹೆಚ್ಚಿನ ಮಾಹಿತಿಗಾಗಿ ಹಳೆಯ ವಿದ್ಯಾರ್ಥಿಗಳು ಇಲ್ಲಿ ಸಂಪರ್ಕಿಸಬಹುದು: mysunivmba.alumni@gmail.com
ಮಾಧ್ಯಮ ಸಂಪರ್ಕ: ಶ್ರೀ ಮಹೇಶ್ ರಾಜಗೋಪಾಲ್, ಅಧ್ಯಕ್ಷರು
ಇಮೇಲ್: bims@bims.uni-mysore.ac.in

Leave a Reply

Your email address will not be published. Required fields are marked *