ನಂದಿನಿ ಮೈಸೂರು
ಮೈಸೂರಲ್ಲಿ ಡ್ಯೂರೋಗಾರ್ಡ್ ನೂತನ ಮಳಿಗೆ ಲೋಕಾರ್ಪಣೆ
ಮೈಸೂರು: ಇಲ್ಲಿನ ದಟ್ಟಗಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಡ್ಯೂರೋಗಾರ್ಡ್ ಆಫ್ ಸ್ಟೀಲ್ ಡೋರ್‍ಸ್ ಮತ್ತು ಲಾಕರ್‌ನ (ಆUಖಔಉUಂಖಆ oಜಿ Sಣeeಟ ಜooಡಿs ಚಿಟಿಜ ಟoಞeಡಿ) ಮಳಿಗೆಯು ಲೋಕಾರ್ಪಣೆಗೊಂಡಿತು.
ಖ್ಯಾತ ಉರಗ ರಕ್ಷಕ ಸ್ನೇಕ್‌ಶಾಮ್ ಮತ್ತು ಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್ ಸೇರಿದಂತೆ ಹಲವು ಉದ್ಘಾಟನಾ ಕಾರ್ಯಕ್ರಮದಲ್ಲಿ
ಗಣ್ಯರು ಪಾಲ್ಗೊಂಡು ಶುಭಕೋರಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಕ್ ಶ್ಯಾಮ್ ಅವರು, ಈ ನೂತನ ಮಳಿಗೆ ವಿಶೇಷತೆಯಿಂದ ಕೂಡಿದ್ದು, ಎಲ್ಲಾ ಬಾಗಿಲುಗಳು ನವೀನ ತಂತ್ರಜ್ಞಾನದಿಂದ ಮಾಡಲಾಗಿದೆ. ಉತ್ತಮವಾದಂತಹ ರೀತಿಯಲ್ಲಿ ತಯಾರು ಮಾಡಲಾಗಿದ್ದು, ವಿಶೇಷ ವೆಂದರೇ ಮರದ ವಸ್ತುಗಳನ್ನು ಬಳಸದೆ ಸ್ಟೀಲ್‌ನಿಂದ ಈ ಉತ್ಪನ್ನಗಳನ್ನು ತಯಾ ರಿಸಲಾಗಿದೆ. ಅಲ್ಲದೇ ಕೀಟಗಳಿಂದ ವಸ್ತುಗಳು ಹಾನಿಯಾಗುವುದಿಲ್ಲ. ಮತ್ತು ಗುಣಮಟ್ಟವಿರುವಂತಹ ಲಾಕ್‌ಗಳನ್ನು ಬಳಸಿದ್ದು, ಉತ್ತಮ ಗುಣಮಟ್ಟವೂ ಕೂಡ ಹೊಂದಿದೆ ಎಂದರಲ್ಲದೇ, ಹೊಸ ಮನೆಗಳನ್ನು ನಿರ್ಮಾಣ ಮಾಡುತ್ತಿರುವವರು
ಒಮ್ಮೆ ಈ ಮಳಿಗೆಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಎಂದು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡುರೋಗಾರ್ಡ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೃಷ್ಣನ್ ಸೆಲ್ವರಾಜ್, ಮಾರಾಟ ನಿರ್ದೇಶಕ ಬಾಲಾಜಿ ಸೆಲ್ವರಾಜ್, ಡೀಲರ್‌ಶಿಪ್ ಕಾರ್ಯ ನಿರ್ವಾಹಕ ಶರಣ್‌ರಾಜ್, ಶಶಿಕುಮಾರ್ ಎಂ.ಕೆ. (ಒ/S Sಐಗಿ ಸ್ಟೀಲ್ ಮತ್ತು ಸ್ಟೈಲ್ ಕ್ರಾಫ್ಟ್‌ನ ಮಾಲೀಕರು, ಡುರೋಗಾರ್ಡ್ ಬ್ರಾಂಡ್‌ನ ಮೈಸೂರು ಜಿಲ್ಲೆಯ ಡೀಲರ್‌ಶಿಪ್ ಹೊಂದಿರುವವರು), ಮಾಜಿ ಮೇಯರ್ ಪುಷ್ಪವಲ್ಲಿ, ಪಾಲಿಕೆ ಮಾಜಿ ಸದಸ್ಯ ರಮೇಶ್, ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.